ಬೆಂಗಳೂರು: ಸಿಎಂ ಬದಲಾವಣೆ ವಿಚಾರ ಮುನ್ನೆಲೆಯಲ್ಲಿರುವ ಹೊತ್ತಿನಲ್ಲೇ ರಾಜ್ಯ ಕಾಂಗ್ರೆಸ್ನಲ್ಲಿ ರಾಜಕೀಯ ವಿದ್ಯಮಾನಗಳು ಜೋರಾಗಿ ನಡೆಯುತ್ತಿವೆ. ಮಂಗಳವಾರ ಮೈಸೂರಿನಲ್ಲಿ ಮೂವರು ಸಚಿವರು ಡಿನ್ನರ್ ಸಭೆ ನಡೆಸಿದ ಬೆನ್ನಲ್ಲೇ ಇತ್ತ ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ.
ಅರ್ಧ ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ ಇಬ್ಬರು ನಾಯಕರು ಪ್ರಸ್ತುತ ರಾಜಕೀಯ ವಿಷಯಗಳ ಬಗ್ಗೆ ಚರ್ಚೆಯಾಗಿದೆ ಎನ್ನಲಾಗ್ತಿದೆ. ಜೊತೆಗೆ 3 ಸಚಿವರು ಡಿನ್ನರ್ ಸಭೆಯ (Dinner Meeting) ವಿಷಯವೂ ಚರ್ಚೆ ಆಗಿದೆ ಎನ್ನಲಾಗ್ತಿದೆ.
ಸಿಎಂ ಜೊತೆ ಮಾತುಕತೆ ಬಳಿಕ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಚರ್ಚೆಯ ಗುಟ್ಟು ಬಿಟ್ಟುಕೊಡಲಿಲ್ಲ. ನಾನು ಸಿಎಂ ಭೇಟಿ ಮಾಡದೇ ಇನ್ಯಾರು ಭೇಟಿ ಮಾಡ್ತಾರೆ? ಬೇರೆ ಪಾರ್ಟಿ ಅವರನ್ನ ಭೇಟಿ ಮಾಡ್ತಿದ್ದೇವಾ? ಅವರು ನಮ್ಮ ಲೀಡರ್ ನಮ್ಮ ಸಿಎಂ, ಸಿಎಂ ಅವರ ಜೊತೆ ಅನೇಕ ವಿಚಾರ ಚರ್ಚೆ ಮಾಡಿದ್ದೇವೆ. ರಾಜ್ಯಪಾಲರು ಡಿನ್ನರ್ಗೆ ಕರೆದಿದ್ದಾರೆ ಆ ಬಗ್ಗೆ ಮಾತಾಡಿದ್ದೇವೆ ಅಂತ ತಿಳಿಸಿದರು.