ನವದೆಹಲಿ: ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಆಡಲು ಪಾಕಿಸ್ತಾನ ಒಪ್ಪಿಗೆ ಸೂಚಿಸಿದೆ. ಟೂರ್ನಿ ವಿಚಾರಕ್ಕೆ ಭಾರತ-ಪಾಕಿಸ್ತಾನ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಭದ್ರತಾ ಕಾರಣಗಳಿಗಾಗಿ ಪಾಕಿಸ್ತಾನಕ್ಕೆ ಆಡಲು ಹೋಗುವುದಿಲ್ಲ ಎಂದು ನಿರಾಕರಿಸಿತ್ತು. ಆಗ, ಹೈಬ್ರಿಡ್ ಮಾದರಿಯ ಚಾಂಪಿಯನ್ಸ್ ಟ್ರೋಫಿ ನಡೆಸಲು ಐಸಿಸಿ ಪಾಕಿಸ್ತಾನಕ್ಕೆ ಸಲಹೆ ನೀಡಿತ್ತು. ಈಗ ಪಾಕಿಸ್ತಾನ ಒಪ್ಪಿಗೆ ಸೂಚಿಸಿದ್ದು,
ಇದರ ಬೆನ್ನಲ್ಲೇ ಭಾರತ ಮತ್ತು ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಆಡಬೇಕೆಂದು ಆಗ್ರಹಿಸುತ್ತಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಆಡಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆಂದು ಹೇಳುವ ಮೂಲಕ ಶೋಯೆಬ್ ಅಖ್ತರ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
Investments and Returns: ಈ ಯೋಜನೆಯಿಂದ ತಿಂಗಳಿಗೆ 1 ಲಕ್ಷ ರೂಪಾಯಿ ಪಿಂಚಣಿ ಪಡೆಯಬಹುದು..! ಹೇಗೆ ಗೊತ್ತಾ..?
ಪಾಕಿಸ್ತಾನಕ್ಕಿಂತ ಭಾರತ ತಂಡ ಪಾಕ್ ನೆಲದಲ್ಲಿ ಆಡಲು ಬಯಸುತ್ತಿದೆ. ಅಲ್ಲದೆ ವಿರಾಟ್ ಕೊಹ್ಲಿ ಕೂಡ ಪಾಕಿಸ್ತಾನದಲ್ಲಿ ಆಡಲು ಎದುರು ನೋಡುತ್ತಿದ್ದಾರೆ. ಭಾರತದಲ್ಲಿ ನಾನು ಬಿಸಿಸಿಐ ಜೊತೆ ಕೆಲಸ ಮಾಡಿದ್ದೇನೆ. ಕ್ರಿಕೆಟ್ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಬಂದಿಳಿದರೆ, ಟಿವಿ ಹಕ್ಕುಗಳು ಹಾಗೂ ಪ್ರಾಯೋಜಕತ್ವದ ಮೌಲ್ಯ ಗಗನಕ್ಕೇರಲಿದೆ ಎಂದು ಹೇಳಿದ್ದಾರೆ.