ದಕ್ಷಿಣ ಆಫ್ರಿಕಾ ತಂಡವನ್ನು ರೋಚಕ ಫೈನಲ್ನಲ್ಲಿ 7 ರನ್ಗಳಿಂದ ಮಣಿಸಿ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ಟ್ರೋಫಿ ಗೆಲುವಿನ ಬರ ನೀಗಿಸಿಕೊಂಡಿತು. ಈ ಯಸಸ್ಸಿನ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿಬದುಕಿಗೆ ಅಂತ್ಯ ಹಾಡಿದರು.
T20 World Cup: ಪ್ರಧಾನಿ ಮೋದಿ ಜೊತೆಗಿನ ಪೋಟೋ ಹಂಚಿಕೊಂಡ ಟೀಮ್ ಇಂಡಿಯಾ
ತಮ್ಮ ಟಿ20-ಐ ವೃತ್ತಿಬದುಕಿನಲ್ಲಿ ಆಡಿದ 159 ಪಂದ್ಯಗಳಲ್ಲಿ ಬರೋಬ್ಬರಿ 4231 ರನ್ಗಳನ್ನು ಬಾರಿಸಿದ್ದಾರೆ. ಇದರಲ್ಲಿ ವಿಶ್ವ ದಾಖಲೆಯ 5 ಶತಕಗಳು ಮತ್ತು 22 ಅರ್ಧಶತಕಗಳಿವೆ. 2024ರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲೂ ಭಾರತ ತಂಡದ ಪರ ಆಡಿದ 8 ಪಂದ್ಯಗಳಲ್ಲಿ 257 ರನ್ ಬಾರಿಸುವ ಮೂಲಕ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ.
ಹೀಗಾಗಿ ಅಂತಹ ಮ್ಯಾಚ್ ವಿನ್ನರ್ ಮತ್ತೊಬ್ಬ ಸಿಗುವುದು ಕಷ್ಟವೇ ಸರಿ. ಆದರೂ ಈಗ ಭಾರತ ತಂಡದಲ್ಲಿ ಅವರ ಸ್ಥಾನ ತುಂಬಲು ಇರುವ 3 ಸಮರ್ಥ ಆಟಗಾರರ ವಿವರ ಇಲ್ಲಿ ನೀಡಲಾಗಿದೆ.
01. ಇಶಾನ್ ಕಿಶನ್ (ವಿಕೆಟ್ಕೀಪರ್ ಬ್ಯಾಟ್ಸ್ಮನ್)
ಮುಂಬೈ ಇಂಡಿಯನ್ಸ್ ತಂಡದಲ್ಲಿ ದೀರ್ಘ ಸಮಯ ರೋಹಿತ್ ಶರ್ಮಾ ಜೊತೆಗೆ ಆಡಿ ಪಳಗಿರುವ ಎಡಗೈ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ಗೆ ಟಿ20-ಐ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಸ್ಥಾನ ತುಂಬಬಲ್ಲ ಸಾಮರ್ಥ್ಯವಿದೆ.
02. ಅಭಿಷೇಕ್ ಶರ್ಮಾ (ಎಡಗೈ ಓಪನರ್)
ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿ ಮಿಂಚಿರುವ 23 ವರ್ಷದ ಯುವ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ, ಭಾರತ ತಂಡದ ಪರವೂ ಚುಟುಕು ಕ್ರಿಕೆಟ್ನಲ್ಲಿ ಮತ್ತೊಬ್ಬ ಡ್ಯಾಷಿಂಗ್ ಓಪನರ್ ಆಗುವ ಎಲ್ಲಾ ಸಾಮರ್ಥ್ಯ ಹೊಂದಿದ್ದಾರೆ.
03. ಯಶಸ್ವಿ ಜೈಸ್ವಾಲ್ (ಎಡಗೈ ಆರಂಭಿಕ ಬ್ಯಾಟರ್)
ಟೆಸ್ಟ್ ಕ್ರಿಕೆಟ್ನಲ್ಲಿ ಈಗಾಗಗಲೇ ಓಪನರ್ ಸ್ಥಾನ ಭದ್ರ ಪಡಿಸಿಕೊಂಡಿರುವ ಯಶಸ್ವಿ ಜೈಸ್ವಾಲ್, ನಿಧಾನವಾಗಿ ವೈಟ್ಬಾಲ್ ಕ್ರಿಕೆಟ್ನಲ್ಲೂ ತಮ್ಮ ಗರಿಗೆದರುತ್ತಿದ್ದಾರೆ.