ಬೆಂಗಳೂರು: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬರೋಬ್ಬರಿ 14 ತಿಂಗಳ ನಂತರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಈಗ 36 ವರ್ಷ, 256 ದಿನಗಳ ವಯಸ್ಸಿನ ಹಿರಿಯ ಬ್ಯಾಟರ್ ಪಾಲಾಗಿದೆ.
ರೋಹಿತ್ ಶರ್ಮಾ (36 ವರ್ಷ, 256 ದಿನಗಳು) vs ಅಫಘಾನಿಸ್ತಾನ, 2024
ಶಿಖರ್ ಧವನ್ (35 ವರ್ಷ, 236 ದಿನಗಳು) vs ಶ್ರೀಲಂಕಾ, 2021
ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಉಷ್ಣಾಂಶ 6 ಡಿಗ್ರಿ ಸೆಲ್ಷಿಯಸ್ ಇದ್ದ ಕಾರಣ ಚಳಿಯ ವಾತಾವರಣದಲ್ಲಿ ಬೌಲಿಂಗ್ ಮಾಡಲು ಕಷ್ಟವಾದರೂ ಭಾರತ ತಂಡ ಎದುರಾಳಿಯನ್ನು 20 ಓವರ್ಗಳಲ್ಲಿ 158/5 ರನ್ಗಳಿಗೆ ನಿಯಂತ್ರಿಸಿತು.
14 ತಿಂಗಳ ಬಳಿಕ ಇದೇ ಮೊದಲ ಬಾರಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸ್ಥಾನ ಪಡೆದುಕೊಂಡಿದ್ದಾರೆ. ವೈಯಕ್ತಿಕ ಕಾರಣದಿಂದ ಮೊದಲ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿರಲಿಲ್ಲ. ಈ ಇಬ್ಬರೂ ಆಟಗಾರರು 2022ರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ಎದುರು ಕೊನೇ ಬಾರಿ ಭಾರತದ ಪರ ಟಿ20-ಐ ಆಡಿದ್ದರು.
ಇದೀಗ ಅನುಭವಿಗಳ ಕಮ್ಬ್ಯಾಕ್ ಕಾರಣ ಯುವ ಆಟಗಾರರು ಬೆಂಚ್ ಕಾಯುವಂತ್ತಾಗಿದೆ. ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಿದ ಕಾರಣ ಯಶಸ್ವಿ ಜೈಸ್ವಾಳ್ ಬೆಂಚ್ ಕಾಯುವಂತ್ತಾಯಿತು.