ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಹಾಗೂ ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೇವಲ 30-35 ವರ್ಷ ದಾಟುವಷ್ಟರಲ್ಲೇ ಬಿಳಿ ಕೂದಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಬಿಳಿ ಕೂದಲುಗಳನ್ನು ಮರೆಮಾಚಲು ಬಹುತೇಕ ಮಂದಿ ಹೇರ್ ಕಲರ್ ಮತ್ತು ಅನೇಕ ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇವುಗಳ ದೀರ್ಘಕಾಲ ಬಳಕೆ ಕೂದಲಿಗೆ ಹಾನಿಯುಂಟು ಮಾಡುತ್ತದೆ.
ಧೂಳು, ಮಾಲಿನ್ಯ, ಬದಲಾದ ವಾತಾವರಣದಿಂದಾಗಿ ಇದಲ್ಲದೆ, ಒತ್ತಡ ಭರಿತ ಜೀವನಶೈಲಿಯಿಂದಾಗಿ ಕೂದಲು ಬೆಳ್ಳಗಾಗುವುದು ಸಾಮಾನ್ಯ ವಿಷಯ. ಆದರೆ, ಬಿಳಿ ಕೂದಲನ್ನು ಕಪ್ಪಾಗಿಸಲು ದುಬಾರಿ ಹೇರ್ ಪ್ರಾಡಕ್ಟ್ ಬೇಕಿಲ್ಲ. ನಿಮ್ಮ ಮನೆಯಲ್ಲಿರುವ ವಸ್ತುಗಳೇ ಸಾಕು.
ದುಬಾರಿ ಪ್ರಾಡಕ್ಟ್ ಬದಲಿಗೆ ನೀವು ಕಸ ಎಂದು ಬಿಸಾಡುವ ಈರುಳ್ಳಿ ಸಿಪ್ಪೆ ಸಹಾಯದಿಂದ ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಬಹುದು. ಈರುಳ್ಳಿ ಸಿಪ್ಪೆ, ಬ್ಯ್ಲಾಕ್ ಟೀ ಸಹಾಯದಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. ಒಂದು ಲೋಟ ನೀರಿನಲ್ಲಿ ಒಂದು ಸ್ಪೂನ್ ಬ್ಲಾಕ್ ಟೀ ಸೊಪ್ಪನ್ನು ಹಾಕಿ ಇದರಲ್ಲಿ ಈರುಳ್ಳಿ ಸಿಪ್ಪೆಯನ್ನು ಹಾಕಿ 10-15ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಬಳಿಕ ನೀರನ್ನು ಶೋಧಿಸಿಕೊಳ್ಳಿ.
ಈರುಳ್ಳಿ ಸಿಪ್ಪೆಯಿಂದ ತಯಾರಿಸಿದ ನೀರನ್ನು ಒಂದು ಸ್ಪ್ರೆ ಬಾಟಲಿನಲ್ಲಿ ಹಾಕಿ, ಅದನ್ನು ಕೂದಲಿನ ಬುಡದಿಂದ ಸ್ಪ್ರೆ ಮಾಡಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.