ಬೆಂಗಳೂರಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ವೈಟ್ ಅಂಡ್ ಬ್ಲಾಕ್ ದಂಧೆ ಮೂಲಕ ಕೋಟ್ಯಂತರ ರೂಪಾಯಿ ರೋಡೆ ಮಾಡಿದ್ದ ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್, ಅಂಬರೀಶ್, ಮಾರ್ಟಿನ್ನ್ನು ಬಂಧಿಸಿದ ಪೊಲೀಸರು, ನಾಪತ್ತೆಯಾಗಿರುವ ಸಚಿನ್, ರವಿ, ವೆಂಕಟೇಶ್ಗಾಗಿ ಹುಡುಕಾಟ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ.
ಈ ಹಿಂದೆಲ್ಲಾ, ಅಕೌಂಟ್ಗೆ ಹಣ ಹಾಕಿದರೆ ನಗದು ಜಾಸ್ತಿ ಕೊಡುತ್ತೇವೆ ಅಂತಾ ನಂಬಿಸಿ ಮೋಸ ಮಾಡುತ್ತಿದ್ದರು. ಈಗ ಕಾಲ ಬದಲಾಗಿದೆ. ನಗದು ಒಂದು ಕೋಟಿ ರೂ ಕೊಟ್ಟರೆ, ಅಕೌಂಟ್ಗೆ ಇಪ್ಪತ್ತು ಲಕ್ಷ ರೂ ಸೇರಿಸಿ ಒಂದು ಕೋಟಿ ಇಪ್ಪತ್ತು ಲಕ್ಷ ರೂ ಹಾಕ್ತಾರಂತೆ. ಚನ್ನಪಟ್ಟಣ ಮೂಲದ ಜಯಚಂದ್ರ ಅನ್ನೋರಿಗೆ ಇಂದಿರಾನಗರ ನಿವಾಸಿ ಶ್ರೀನಿವಾಸ್ ಅನ್ನೋನು ಇಂಥದೊಂದು ಡೀಲ್ ತಂದಿದ್ದ.
Home Buying: ನಿಮ್ಮ ಹೆಂಡತಿಯ ಹೆಸರಿನಲ್ಲಿ ಮನೆ ಖರೀದಿಸುವುದು ಲಾಭದಾಯಕ..! ಏಕೆ ಗೊತ್ತಾ..?
ಯಾವಾಗ ಜಯಚಂದ್ರ ಒಂದು ಕೋಟಿ ರೂ ಹಣ ಆರೋಪಿ ಶ್ರೀನಿವಾಸ್ ಮುಂದಿಟ್ನೋ ಆರೋಪಿಗಳು ಆ ಹಣವನ್ನು ತೆಗೆದುಕೊಳ್ಳೋಕೆ ಮುಂದಾಗಿದ್ದರು. ಈ ವೇಳೆ ಅನುಮಾನಗೊಂಡ ಜಯಚಂದ್ರ ಮೊದಲು, ಅಕೌಂಟ್ಗೆ ಹಣ ಹಾಕಿ ಆಮೇಲೆ ದುಡ್ಡು ತಗೋಳಿ ಅಂದಿದ್ದಾರೆ. ಈ ಮಾತುಕತೆ ನಡೆಯುತ್ತಿರುವಾಗಲೇ ಕಚೇರಿಯಲ್ಲಿ ದಿಢೀರ್ ಕರೆಂಟ್ ಕಟ್ ಆಗಿದೆ. ಈ ವೇಳೆ ಒಂದು ಕೋಟಿ ರೂ ಮಂಗಮಾಯವಾಗಿತ್ತು.
ತಕ್ಷಣ ಜೊತಗೆ ಇದ್ದ ಓರ್ವನನ್ನು ಅಂದರೆ ಮಾರ್ಟಿನ್ ನನ್ನು ಇಟ್ಟುಕೊಂಡು ಅಲರ್ಟ್ ಆದ ಜಯಚಂದ್ರ 112ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಏರಿಯಾ ಪೂರ್ತಿ ಸುತ್ತುವರೆದು ಕೆಲವೇ ಗಂಟೆಗಳಲ್ಲಿ ಶ್ರೀನಿವಾಸ್, ಮಾರ್ಟಿನ್ ಮತ್ತು ಅಂಬರೀಶ್ನನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ತೊಂಬತ್ತೆಂಟು ಲಕ್ಷ ರೂ. ಹಣ ವಶಕ್ಕೆ ಪಡೆದಿದ್ದಾರೆ.