ಬೆಳಗಾವಿ:- ನಿನ್ನೆ ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ ಹಾಗೂ ಜಿಲ್ಲಾಡಳಿತ ಬೆಳಗಾವಿ ವತಿಯಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕವಾದ ಪೌರ ಕಾರ್ಮಿಕರಿಗೆ ಖಾಯಂ ಆದೇಶ ಪತ್ರ ಪಡೆಯಲು Mk ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪೌರಕಾರ್ಮಿಕರು ಹೊರಟಿದ್ದರು.
ಇಂತಹ ಸಂದರ್ಭದಲ್ಲೇ ಸಮಾರಂಭದ ಸ್ಥಳಕ್ಕೆ ತೆರಳಬೇಕು ಎನ್ನುವಷ್ಟರಲ್ಲೇ ಎಂಕೆ ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರ ನಿಂಗಪ್ಪ ದೇಮಟ್ಟಿ ಎಂಬುವವರರು ಹೃದಯಾಘಾತವಾಗಿ ತೀರಿಕೊಂಡಿದ್ದಾರೆ. ಸಾಕಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಕಾಯಂ ಆದೇಶ ಪತ್ರ ಪಡೆಯಲು ಸಂತೋಷದಿಂದ ಹೋಗುತ್ತಿದ್ದ ಈ ಪೌರ ಕಾರ್ಮಿಕನ ಪ್ರಾಣಪಕ್ಷಿ ಹೊರಟು ಹೋಗಿರುವುದು ಕುಟುಂಬದಲ್ಲಿ ತೀವ್ರ ದುಃಖ ಆವರಿಸಿದೆ.
ಇನ್ನೂ ಇಂದು ಮುಖ್ಯ ಅಧಿಕಾರಿಗಳು ರವಿ ಬಾಗಲಕೋಟೆ ಹಾಗೂ ಸಿಬ್ಬಂದಿ ಮೃತ ಪೌರ ಕಾರ್ಮಿಕನ ಮನೆಗೆ ಭೇಟಿಕೊಟ್ಟು ಸಾಂತ್ವನ ಹೇಳಿದ್ದು, ಮಾಧ್ಯಮ ಪ್ರತಿನಿಧಿ ಬಸವರಾಜು ಸಹ ಈ ಮೃತ ಪೌರ ಕಾರ್ಮಿಕ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಒತ್ತಾಯ ಮಾಡಿ, ಬೆಳಗಾವಿ ಜಿಲ್ಲಾ ನಗರ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ ಅವರ ಗಮನಕ್ಕೆ ತೆಗೆದುಕೊಂಡು ಬಂದು ವರದಿ ತಯಾರಿಸಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ.