ರಕುಲ್ ದಂಪತಿಗೆ ಅಯೋಧ್ಯೆಯಿಂದ ಪ್ರಸಾದ ಸಿಕ್ಕಿದೆ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ಮದುವೆ ಸಂಭ್ರಮ ಮುಗಿಸಿ ಇದೀಗ ರಕುಲ್ ದಂಪತಿ, ಮುಂಬೈ ನಿವಾಸಕ್ಕೆ ಮರಳಿದ್ದಾರೆ. ಮನೆಗೆ ಬರುತ್ತಿದ್ದಂತೆ ಅಯೋಧ್ಯೆಯಿಂದ ರಕುಲ್ಗೆ ಪ್ರಸಾದ ಸಿಕ್ಕಿದೆ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ನಮ್ಮ ಮದುವೆಯ ನಂತರ ಅಯೋಧ್ಯೆಯಿಂದ ಪ್ರಸಾದ ಸ್ವೀಕರಿಸುತ್ತಿರೋದು ನಮಗೆ ಸಿಕ್ಕ ಆಶೀರ್ವಾದ. ನಮ್ಮ ಮುಂದಿನ ಹೆಜ್ಜೆಗೆ ದೈವಿಕ ಆರಂಭ ಎಂದು ರಕುಲ್ ಬರೆದುಕೊಂಡಿದ್ದಾರೆ. ‘ನನ್ನದು ಮತ್ತು ಎಂದೆಂದಿಗೂ’ ಎಂದು ಅಡಿಬರಹ ನೀಡಿ ಪತಿ ಜೊತೆಗಿನ ಮದುವೆಯ ಸುಂದರ ಫೋಟೋಗಳನ್ನು ರಕುಲ್ ಶೇರ್ ಮಾಡಿದ್ದರು.
Ayodhya Ram Mandir: ಒಂದೇ ತಿಂಗಳಲ್ಲಿ ಅಯೋಧ್ಯಾ ರಾಮನಿಗೆ ಬಂದ ಕಾಣಿಕೆ ಎಷ್ಟು ಗೊತ್ತಾ..?
ಕ್ರೀಮ್- ಗೋಲ್ಡನ್ ಉಡುಗೆಯಲ್ಲಿ ರಕುಲ್ ದಂಪತಿ ಮಿಂಚಿದ್ದರು. ಫೆ.21ರಂದು ಎರಡು ಸಂಪ್ರದಾಯದಂತೆ ವಿವಾಹ ಜರುಗಿತ್ತು. ಸಿಖ್ ಮತ್ತು ಸಿಂಧಿ ಶೈಲಿಯಲ್ಲಿ ರಕುಲ್- ಜಾಕಿ ಮದುವೆಯಾಗಿದ್ದಾರೆ. ರಕುಲ್ ಮದುವೆಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಅರ್ಜುನ್ ಕಪೂರ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದರು.