ಬೆಂಗಳೂರಿನ ಎಂ ಚಿನ್ನ ಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್ಸಿಬಿ vs ಸಿಎಸ್ಕೆ ನಡುವಿನ ಕದನ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ
ಏಕೆಂದರೆ ಈ ಪಂದ್ಯ ಎರಡೂ ತಂಡಗಳ ಪ್ಲೇ ಆಫ್ ಭವಿಷ್ಯವನ್ನ ನಿರ್ಧರಿಸಲಿದೆ. 13 ಪಂದ್ಯಗಳಿಂದ 14 ಅಂಕ ಹೊಂದಿರುವ ಸಿಎಸ್ಕೆ ಪ್ಲೇ ಆಫ್ಗೆ ತುಂಬಾ ಹತ್ತಿರವಿದೆ. ಬೆಂಗಳೂರು ತಂಡವನ್ನೂ ಹೇಗೇ ಸೋಲಿಸಿದರೂ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ. ಇಲ್ಲ ಸಣ್ಣ ಅಂತರದಲ್ಲಿ ಸೋತರೂ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್ ಪ್ರವೇಶಿಸುತ್ತದೆ. ಆದರೆ ಆರ್ಸಿಬಿ ಕಥೆ ಬೇರೆ ಇದೆ. ಈ ಪಂದ್ಯದಲ್ಲಿ ಆರ್ಸಿಬಿ ನೆಟ್ ರನ್ರೇಟ್ನಲ್ಲಿ ಗೆಲ್ಲಬೇಕಿದೆ. 13 ಪಂದ್ಯಗಳಲ್ಲಿ 12 ಅಂಕ ಹೊಂದಿರುವ ಆರ್ಸಿಬಿ 14 ಅಂಕ ಪಡೆಯುವುದರ ಜೊತೆಗೆ ಸಿಎಸ್ಕೆ ವಿರುದ್ಧ 18 ರನ್ಗಳ ಗೆಲುವು ಅಥವಾ ಸಿಎಸ್ಕೆ ನೀಡಿದ ಟಾರ್ಗೆಟ್ ಅನ್ನ 18.1 ಓವರ್ಗಳಲ್ಲಿ ತಲುಪಿದರೆ ಮಾತ್ರ ನೆಟ್ ರನ್ರೇಟ್ನಲ್ಲಿ ಸಿಎಸ್ಕೆ ಮೀರಿಸಲಿದೆ. ಆಗ ಪ್ಲೇ ಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಆರ್ಸಿಬಿ ಈಗಾಗಲೇ ಟೂರ್ನಿಯಲ್ಲಿ ಅದ್ಭುತ ಕಮ್ ಬ್ಯಾಕ್ ಮಾಡಿದೆ. ಇದರಲ್ಲಿ ವಿಲ್ ಜಾಕ್ಸ್ ಆಟ ನಿರ್ಣಾಯಕವಾಗಿತ್ತು. ಇದೀಗ ಪ್ಲೇ ಆಫ್ ನಿರ್ಧರಿಸುವ ಪಂದ್ಯದಿಂದಲೇ ಹೊರಗಳಿಯುತ್ತಿರುವುದು ಆರ್ಸಿಬಿಗೆ ನುಂಗಲಾರದ ತುತ್ತಾಗಿದೆ.
ಈ ಹಿನ್ನಲೆಯಲ್ಲಿ ಎರಡೂ ತಂಡಗಳ ಮುಖಾಮುಖಿ ನೋಡುವುದಾದರೆ, 15 ಆವೃತ್ತಿಯಲ್ಲಿ ಸಿಎಸ್ಕೆ ಹಾಗೂ ಆರ್ಸಿಬಿ ಒಟ್ಟು 31 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಸಿಎಸ್ಕೆ ಪ್ರಾಬಲ್ಯ ಮೆರೆದಿದೆ. CSK 20 ಪಂದ್ಯಗಳನ್ನು ಗೆದ್ದಿದೆ, RCB 10 ಅನ್ನು ಗೆದ್ದಿದೆ. ಇನ್ನು ಕಳೆದ ಐದು ಪಂದ್ಯಗಳಲ್ಲಿ ಚೆನ್ನೈ ತಂಡ 4-1 ರ ಮುನ್ನಡೆ ಪಡೆದುಕೊಂಡಿದೆ. MA ಚಿದಂಬರಂ ಸ್ಟೇಡಿಯಂನಲ್ಲಿ CSK vs RCB ಎಂಟು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆತಿಥೇಯ ತಂಡ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಆರ್ಸಿಬಿ ವಿರುದ್ಧ ಸಿಎಸ್ಕೆ ತವರಿನಲ್ಲಿ ಏಳಕ್ಕೆ ಏಳು ಪಂದ್ಯಗಳನ್ನು ಗೆದ್ದಿದೆ. ಆರ್ಸಿಬಿಯ ತವರು ಮೈದಾನವಾಗಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಭಯ ತಂಡಗಳು 10 ಬಾರಿ ಮುಖಾಮುಖಿಯಾಗಿದ್ದು, ಇಲ್ಲೂ ಕೂಡ ಆತಿಥೇಯ ಆರ್ಸಿಬಿಗಿಂತ ಸಿಎಸ್ಕೆ ಒಂದು ಪಂದ್ಯ ಹೆಚ್ಚಾಗಿ ಗೆದ್ದಿದೆ. ಇಲ್ಲಿಯವರೆಗೂ ಆಡಿರುವ 10 ಪಂದ್ಯಗಳಲ್ಲಿ 5ರಲ್ಲಿ ಸಿಎಸ್ಕೆ, 4ರಲ್ಲಿ ಆರ್ಸಿಬಿ ಗೆಲುವು ಸಾಧಿಸಿದೆ.ಆದರೆ ಕಳೆದ 5 ಪಂದ್ಯಗಳಲ್ಲಿ ಆರ್ಸಿಬಿ ಸತತ ಜಯ ಸಾಧಿಸಿರುವುದರಿಂದ ಈ ಪಂದ್ಯದಲ್ಲೂ ಗೆಲ್ಲುವ ವಿಶ್ವಾದಲ್ಲಿದೆ. ಆದರೆ ಆರ್ಸಿಬಿ ಗೆಲುವಿಗೆ ಚೆನ್ನೈ ಅಡ್ಡಗಾಲುವುದಕ್ಕಿಂತ ಮಳೆರಾಯನ ಕಾಟವೇ ಹೆಚ್ಚಾಗಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಮೇ18ರಂದು ಸಂಜೆ ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ಧಾದರೆ ಸಿಎಸ್ಕೆ ಸುಲಭವಾಗಿ ಪ್ಲೇ ಆಫ್ ಪ್ರವೇಶ ಪಡೆಯಲಿದೆ.