ಬೇಬಿ ಶಾಮಿಲಿ ಎಂದೇ ಹೆಸರಾಗಿದ್ದ ಶಾಮಿಲಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಚಿಕ್ಕ ವಯಸ್ಸಿನಲ್ಲಿಯೇ ಬ್ಲಾಕ್ಬಸ್ಟರ್ ಸಿನಿಮಾ ಕೊಟ್ಟಿರುವ ಖ್ಯಾತಿ ಇವರಿಗಿದೆ. ತಮ್ಮ ಪ್ರತಿಭೆಯಿಂದ ಮನೆಮಾತಾಗಿದ್ದ ಮುದ್ದು ಮುಖದ ಮಾತಿನ ಮಲ್ಲಿ. ಕನ್ನಡ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಏಲ್ಲ ಭಾಷೆಗಳ ಸಿನಿಮಾಗಳಲ್ಲಿಯೂ ಬಾಲನಟಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಂತೂ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸಿದ್ದರು ಬೇಬಿ ಶಾಮಿಲಿ. ಸಣ್ಣ ವಯಸ್ಸಿನಲ್ಲೇ ಸ್ಟಾರ್ ಪಟ್ಟ ಅಲಂಕರಿಸಿದ್ದ ನಟಿ ಬೇಬಿ ಶಾಮಿಲಿ ಈಗೇನು ಮಾಡುತ್ತಿದ್ದಾರೆ!? ಮುದ್ದಾಗಿ, ಕ್ಯೂಟ್ ಕ್ಯೂಟ್ ಆಗಿ ಅಭಿನಯಿಸುತ್ತಿದ್ದ ಬೇಬಿ ಶಾಮಿಲಿ ಈಗ ಹೇಗಿದ್ದಾರೆ ಎಂಬುವ ವಿಚಾರ ಹೇಳ್ತೀವಿ ಕೇಳಿ…
90 ರ ದಶಕದಲ್ಲಿ ಬೇಬಿ ಶಾಮಿಲಿ ಚಿತ್ರ ಅಂದ್ರೆ ಮನೆಯವರೆಲ್ಲಾ ಕೂತು ನೋಡ್ತಾ ಇದ್ರು. ಅದರಲ್ಲೂ ಮಕ್ಕಳಿಗೆ ಈಕೆ ತುಂಬಾ ಇಷ್ಟ. ಅವಳ ಚಿತ್ರ ನೋಡಲು ಕಾಯ್ತಾ ಇರುತ್ತಿದ್ರು.
ವಿವಿಧ ಭಾಷೆಗಳಲ್ಲಿ ನಟಿಸಿ ತನ್ನದೇ ಆದ ಫ್ಯಾನ್ ಫಾಲೋವರ್ಸ್ ಗಳನ್ನು ಹೊಂದಿರುವ ಇವರು ಇಂದು ಹೇಗಿದ್ದಾರೆ ಎಂಬ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಒಂದು ಕಾಲದಲ್ಲಿ ತನ್ನ ಮುದ್ದಾದ ನಟನೆಯಿಂದ ಮನಗೆದ್ದ ಈ ಚೆಲುವೆ ಇಂದು ಕೂಡ ತನ್ನ ಹೆಜ್ಜೆ ಗುರುತು ಉಳಿಸಿಕೊಂಡು ಬಂದಿದ್ದಾರೆ. ಈ ಕ್ಯೂಟ್ ಬೆಡಗಿ ಹುಟ್ಟಿದ್ದು ಜುಲೈ 10, 1987 ರಂದು. ಈಗ ಶ್ಯಾಮಿಲಿ ವಯಸ್ಸು 37 ವರ್ಷ. ಇವರ ತಂದೆ ಬಾಬು ಹಾಗೂ ತಾಯಿ ಆಲಿಸ್. ಮುದ್ದಾದ ಕುಟುಂಬದ ಸದಸ್ಯರೂ ಶ್ಯಾಮಿಲಿ ಅವರ ಸಿನಿಮಾ ಜರ್ನಿಗೆ ಬೆನ್ನೆಲುಬಾಗಿ ನಿಂತಿದ್ದರು.
ನಟಿ ಶಾಮಿಲಿ ಅವರು ಮೂಲತಃ ಕೇರಳದವರು. ಕೇರಳ ದಲ್ಲಿ ಹುಟ್ಟಿ ಬೆಳೆದು ನಂತರ ಚೆನ್ನೈ ನಲ್ಲಿ ತಮ್ಮ ಸಿನಿಮಾ ಜರ್ನಿ ಶುರು ಮಾಡಿದರು. ತನ್ನ ಶಿಕ್ಷಣವನ್ನು ಪಕ್ಕ ಸರಿಸಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸರಿಸುಮಾರು 10 ವರ್ಷಗಳ ಕಾಲ ದುಡಿದರು. ಇದಾದ ಬಳಿಕ ತಿರುಗಿ ನೋಡಲೇ ಇಲ್ಲ..
ವಿಜಯಕಾಂತ್ ಅಭಿನಯದ ರಾಜನದೈ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ಶಾಮಿಲಿ 2 ವರ್ಷ ವಯಸ್ಸಿನಲ್ಲೇ ನಟಿಸಲು ಪ್ರಾರಂಭಿಸಿದರು. 1990 ರಲ್ಲಿ, ಅವರು ಜೆಸ್ಸಿಕಾ ಮೆಕ್ಕ್ಲೂರ್ ಆಧಾರಿತ ಚಲನಚಿತ್ರವಾದ ಭರತನ ಮಾಲೂಟ್ಟಿಯಲ್ಲಿ ನಟಿಸಿದರು. ಆಕೆಯ ಅಭಿನಯವು ಆಕೆಯ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು. ಮತ್ತು ಅತ್ಯುತ್ತಮ ಬಾಲ ಕಲಾವಿದೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.
1990 ರ ಚಲನಚಿತ್ರ ಅಂಜಲಿಯಲ್ಲಿ ಮಾನಸಿಕ ಅಸ್ವಸ್ಥ ಮಗು ಆಗಿ ನಟನೆ ಮಾಡಿದ್ದಾಳೆ. ಇದಕ್ಕಾಗಿ ಅವರು ಅತ್ಯುತ್ತಮ ಬಾಲ ಕಲಾವಿದೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು. ಮಾಲೂಟ್ಟಿ ಚಿತ್ರದಲ್ಲಿ ಬೋರ್ವೆಲ್ನಲ್ಲಿ ಸಿಕ್ಕಿಬಿದ್ದ ಮಗು, ಇದು ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮತ್ತೆ ಹಾಡಿತು ಕೋಗಿಲೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅದರಲ್ಲಿನ ಅವರ ಅಮೋಘ ನಟನೆ ಕನ್ನಡ ಅಭಿಮಾನಿಗಳ ಮನ ಗೆದ್ದಿತು. ನಂತರ ಹಲವು ಸಿನಿಮಾಗಳಲ್ಲಿಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮತ್ತೆ ಹಾಡಿತು ಕೋಗಿಲೆಯಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಬಾಲನಟಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯಿರುವ ಬಾಲ ಕಲಾವಿದೆಯಾಗಿ ಮಿಂಚಿದ್ದರು.
2018ರಲ್ಲಿ ತೆರೆಗೆ ಬಂದ ಅಮ್ಮಮ್ಮಗಾರಿಲು ಅವರ ಕೊನೆಯ ಸಿನಿಮಾ. ಆ ಬಳಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಸದ್ಯ ಶಾಮಿಲಿಗೆ 37 ವರ್ಷ ವಯಸ್ಸು. ಮದುವೆ ಆಗಿಲ್ಲ. ಏಕೆ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಬೇಬಿ ಶಾಮಿಲಿ ಅವರಿಗೆ ಚಿಕ್ಕವರಿದ್ದಾಗ ಸಿಕ್ಕ ಯಶಸ್ಸು, ನಟಿಯಾಗಿ ಮಾಡಿದಾಗ ಸಿಗಲಿಲ್ಲ ಅದಕ್ಕೆ ಅವರು ಚಿತ್ರರಂಗದಿಂದ ದೂರ ಉಳಿಯಲು ತೀರ್ಮಾನ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಬೇಬಿ ಶಾಮಿಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಫೆÇೀಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಆಗ ನೋಡಿದವರು ಇವರೇನಾ ಅವರು ಎಂದು ಹೇಳುತ್ತಾರೆ. ಆಗಲೂ ಕ್ಯೂಟ್. ಈಗಲೂ ಕ್ಯೂಟ್.
2000 ದವರೆಗೆ ಬಹುತೇಕ ಬಾಲನಟಿಯಾಗಿಯೇ ನಟಿಸಿದ ಬೇಬಿ ಶಾಮಿಲಿ ಆ ನಂತರ ಚಿತ್ರರಂಗದಿಂದ ಹಠಾತ್ತನೆ ದೂರಾಗಿಬಿಟ್ಟರು. ಅದಾದ ಬಳಿಕ 2009 ರಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ‘ಓಯ್’ ಹೆಸರಿನ ಸಿನಿಮಾದಲ್ಲಿ ನಟಿಸಿದರು ಸಿನಿಮಾ ಹಿಟ್ ಎನಿಸಿಕೊಂಡಿತು. ಅದಾದ ಬಳಿಕ ಮತ್ತೊಂದು ದೊಡ್ಡ ಬ್ರೇಕ್ ತೆಗೆದುಕೊಂಡು 2016 ರಲ್ಲಿ ಮರಳಿ ಬಂದು ಎರಡು ಸಿನಿಮಾಗಳಲ್ಲಿ ನಟಿಸಿದರಾದರೂ ಎರಡೂ ಸಿನಿಮಾಗಳು ಫ್ಲಾಪ್ ಆದವು. ಶಾಮಿಲಿಯ ನಟನೆಯ ಬಗ್ಗೆ ಸಹ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಲಿಲ್ಲ. ಬಳಿಕ 2018 ರಲ್ಲಿ ತೆಲುಗು ಸಿನಿಮಾ ಒಂದರಲ್ಲಿ ನಟಿಸಿ ಆ ಸಿನಿಮಾ ಸಹ ಫ್ಲಾಪ್ ಆಯಿತು. ಆ ಬಳಿಕ ಇನ್ಯಾವುದೇ ಸಿನಿಮಾದಲ್ಲಿ ಬೇಬಿ ಶಾಮಿಲಿ ನಟಿಸಿಲ್ಲ
2000 ಬಳಿಕ ಬೇಬಿ ಶಾಮಿಲಿ ಶಿಕ್ಷಣದ ಕಡೆ ಗಮನ ಕೇಂದ್ರೀಕರಿಸಿದ ಕಾರಣ ಸಿನಿಮಾಗಳಲ್ಲಿ ನಟಿಸಲಿಲ್ಲ ಬೇಬಿ ಶಾಮಿಲಿ. ಪದವಿ ಮುಗಿಸಿ 2009 ರಲ್ಲಿ ‘ಓಯ್’ ಹೆಸರಿನ ಸಿನಿಮಾದಲ್ಲಿ ನಟಿಸಿದ ಬಳಿಕ ಮತ್ತೆ ಉನ್ನತ ಶಿಕ್ಷಣದ ಕಡೆ ಮುಖ ಮಾಡಿದರು. ಸಿಂಗಪುರಕ್ಕೆ ತೆರಳಿ ಮೂರೂ ವರೆ ವರ್ಷ ಫಿಲಂ ಪ್ರೊಡಕ್ಷನ್ ಕಲಿತರು, ಅಲ್ಲಿಯೇ ಕೆಲ ಕಾಲ ಉದ್ಯೋಗ ಸಹ ಮಾಡಿದರು. ಆ ಬಳಿಕ ಮತ್ತೆ 2016 ರಲ್ಲಿ ಚಿತ್ರರಂಗಕ್ಕೆ ಮರಳಿದರಾದರೂ ಅವರಂದುಕೊಂಡಂತೆ ಯಶಸ್ಸು ಶಾಮಿಲಿಗೆ ಸಿಗಲಿಲ್ಲ. ಬೇಬಿ ಶಾಮಿಲಿ ಈಗ ನೃತ್ಯಗಾರ್ತಿಯೂ ಆಗಿದ್ದು ವಿದೇಶಗಳಲ್ಲಿ ನೃತ್ಯ ಪ್ರದರ್ಶನಗಳನ್ನು ಸಹ ನೀಡುತ್ತಾರೆ
ಬೇಬಿ ಶಾಮಿಲಿ ಪ್ರಸ್ತುತ ವಿದೇಶದಲ್ಲಿಯೇ ನೆಲೆಸಿದ್ದಾರೆ ಎನ್ನಲಾಗುತ್ತಿದೆ. ಅವರ ಇನ್ಸ್ಟಾಗ್ರಾಂನ ಚಿತ್ರಗಳು ಇದನ್ನೇ ಹೇಳುತ್ತಿವೆ. ಚಿತ್ರರಂಗದಿಂದ ದೂರವಾಗಿದ್ದಾರಾದರೂ ಇನ್ಸ್ಟಾಗ್ರಾಂನಲ್ಲಿ ಆಕ್ಟರ್ ಎಂದೇ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ಬೇಬಿ ಶಾಮಿಲಿ ಈಗ ಕೇವಲ ನಟಿ ಮಾತ್ರವಲ್ಲ ಕಲಾವಿದೆ ಸಹ. ಚಿತ್ರಗಳನ್ನು ಬರೆಯುವುದು ಅವರ ಮೆಚ್ಚಿನ ಹವ್ಯಾಸ. ಚಿತ್ರಗಳನ್ನು ಬರೆದು ಅವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ದುಬೈ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಅವರು ರಚಿಸಿದ ಚಿತ್ರಗಳ ಪ್ರದರ್ಶನವೂ ಆಗಿದೆ
ತಮಿಳು ಕುಟುಂಬದ ಬೇಬಿ ಶಾಮಿಲಿಯ ಅಣ್ಣ ರಿಚರ್ಡ್ ರಿಷಿ ಸಹ ನಟರು, ಶಾಮಿಲಿಯ ಅಕ್ಕ ಶಾಲಿನಿ ಸಹ ಜನಪ್ರಿಯ ನಟಿಯಾಗಿದ್ದವರು. ಬೇಬಿ ಶಾಮಿಲಿ ರೀತಿಯಲ್ಲಿಯೇ ಬೇಬಿ ಶಾಲಿನಿ ಎಂದು ಹೆಸರು ಗಳಿಸಿದ್ದರು. ಆದರೆ ತಂಗಿ ಶಾಮಿಲಿಯಷ್ಟು ಹೆಸರು ಗಳಿಸಲು ಸಾಧ್ಯವಾಗಲಿಲ್ಲವಾದರೂ ಮಲಯಾಳಂ, ತಮಿಳಿನ ಹಲವು ಸಿನಿಮಾಗಳಲ್ಲಿ ಶಾಲಿನಿ ಬಾಲನಟಿಯಾಗಿ ನಟಿಸಿದರು. ಬಳಿಕ ನಾಯಕಿಯಾಗಿಯೂ ದೊಡ್ಡ ಯಶಸ್ಸು ಗಳಿಸಿದರು. ಮಣಿರತ್ನಂ ನಿರ್ದೇಶನದ ಐಕಾನಿಕ್ ಸಿನಿಮಾ ಅಲೈಪಾಯುತೆ, ವಿಜಯ್ ಜೊತೆ ಕಡವುಲಕ್ಕು ಮರಿಯಾದೈ, ಕಣ್ಣುಕ್ಕುಲ್ ನಿಲವು ಅಜಿತ್ ಜೊತೆಗೆ ಅಮರ್ಕಾಲಂ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮುದ್ದು ಮುಖದಿಂದ, ತುಂಟ ನುಡಿಗಳಿಂದ, ಅಪೂರ್ವ ಅಭಿನಯದಿಂದ ಸಿನಿಪ್ರಿಯರ ಮನಗೆದ್ದಿದ್ದ ಬಾಲನಟಿ ಬೇಬಿ ಶಾಮಿಲಿ. ಕನ್ನಡ, ತಮಿಲು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಬೇಡಿಕೆಯ ಬಾಲ ನಟಿಯಾಗಿ ಗುರುತಿಸಿದ್ದರು. . ಪುಟ್ಟ ಮಗುವಾಗಿದ್ದಾಗಲೇ ಸಿನಿರಂಗದಲ್ಲಿ ಯಶಸ್ಸನ್ನು ಗಳಿಸಿ ದೊಡ್ಡ ಖ್ಯಾತಿಯನ್ನು ಪಡೆದಿದ್ದರು ನಟಿ ಶಾಮಿಲಿ. ಇವರ ಅಭಿನಯಕ್ಕೆ ಅನೇಕ ನಟ-ನಟಿ, ಪ್ರೇಕ್ಷಕರು ಫಿದಾ ಆಗಿದ್ದರು.
ತಮಿಳಿನ ‘ರಾಜನಡೈ’ ಸಿನಿಮಾದ ಮೂಲಕ ಶಾಮಿಲಿ ಬಾಲ ನಟಿಯಾಗಿ ಕಾಣಿಸಿಕೊಂಡರು. ‘ಅಂಜಲಿ‘ ಸಿನಿಮಾದಲ್ಲಿ ಅಭಿನಯಿಸಿದ್ದಕ್ಕೆ ಉತ್ತಮ ಬಾಲನಟಿಯಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ತೆಲುಗಿನ ‘ಓಯ್’ ಸಿನಿಮಾದ ಮೂಲದ ಶಾಮಿಲಿ ನಾಯಕಿಯಾಗಿ ಎಂಟ್ರಿಕೊಟ್ಟರು. ಆದರೆ ಬಾಲ ನಟಿಯಾಗಿ ಯಶಸ್ಸು ಕಂಡ ಶಾಮಿಲಿ ನಾಯಕಿಯಾಗಿ ಅಷ್ಟೇನು ಯಶಸ್ಸುಗಳಿಸಿಲ್ಲ.
ನಂತರ ಮಲಯಾಳಂನಲ್ಲಿ ‘ವಲ್ಲಿಯುಮ್ ತೆಟ್ಟಿ ಪುಲ್ಲಿಯುಂ ತೆಟ್ಟಿ’ (2015) ಸಿನಿಮಾದಲ್ಲಿ ನಟಿಸಿದ್ದಾರೆ. ತಮಿಳಿನ ‘ವೀರ ಶಿವಾಜಿ ’(2016), ತೆಲುಗಿನ ‘ಅಮ್ಮಮಗರಿಲೂ ’(2018) ಸಿನಿಮಾದಲ್ಲಿ ಸೀತಾ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ‘ಮತ್ತೆ ಹಾಡಿತು ಕೋಗಿಲೆ’, ‘ಭೈರವಿ’, ‘ಶ್ವೇತಾಗ್ನಿ’, ‘ಪೊಲೀಸ್ ಲಾಕ್ಅಪ್’, ‘ಕಾದಂಬರಿ’, ‘ಶಾಂಭವಿ’,‘ದಾಕ್ಷಯಿಣಿ’. ‘ಹೂವು ಹಣ್ಣು’, ‘ಚಿನ್ನ ನೀನು ನಗುತಿರು’, ‘ಜಗದೀಶ್ವರಿ’ ಹೀಗೆ ಅನೇಕ ಸಿನಿಮಾದಲ್ಲಿ ನಟಿಸಿದ್ದರು. ಇವರ ಸಹೋದರಿ ನಟಿ ಶಾಲಿನಿ ತಮಿಳಿನ ಖ್ಯಾತ ನಟ ಅಜಿತ್ ರನ್ನು ವಿವಾಹವಾಗಿದ್ದಾರೆ.
1997 ಜುಲೈ 10ರಂದು ಚೆನ್ನೈನಲ್ಲಿ ಜನಿಸಿದ ಶ್ಯಾಮಿಲಿ ಸಾಹಸಸಿಂಹ ವಿಷ್ಣುವರ್ಧನ್ ರ ‘ಮತ್ತೆ ಹಾಡಿತು ಕೋಗಿಲೆ’ ಚಿತ್ರದಿಂದ ಕನ್ನಡದಲ್ಲಿ ಸಿನಿಪಯಣ ಆರಂಭಿಸಿದರು. ಮೂರು ವರ್ಷದ ಮಗುವಿದ್ದಾಗ ಮಣಿರತ್ನಂರ ಅಂಜಲಿ ಎಂಬ ಚಿತ್ರದಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿ ಪಡೆದರು. ಬಾಲ ಕಲಾವಿದೆಯಾಗಿ ಸುಮಾರು 35 ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನ ‘ಅಂಜಲ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಅತ್ಯುತ್ತಮ ಬಾಲ ಕಲಾವಿದರಿಗಾಗಿ ನೀಡುವ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. 2015 ರಲ್ಲಿ ಮಲಯಾಳಂ ಚಿತ್ರ ‘ವಳ್ಳಿಯುಮ್ ತೆತ್ತಿ ಪುಳ್ಳಿಯುಮ್ ತೆತ್ತಿ’ ಚಿತ್ರದ ಮೂಲಕ ಪುನರಾಗಮನ ಮಾಡಿದರು. ಸದ್ಯ ನಟಿ ಶಾಮಿಲಿ ತಮಿಳು ಸಿನಿಮಾರಂಗದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ.
ನೋಡಿದ್ರಲ್ಲ ಪುಟಾಣಿ ಹೆಜ್ಜೆ ಇಡುತ್ತಿದ್ದಾಗಲೇ ತನ್ನ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಬೇಬಿ ಶಾಮಿಲಿ ಹೊಂದಿದರು. ಹೀಗೆ ಬಾಲನಟಿಯಿದ್ದಾಗಲೇ ಮಿಂಚಿದ್ದ ಇವರಿಗೆ ಕಾಲಕ್ರಮೇಣ ಸಿನಿಮಾದಲ್ಲಿ ನಟಿಸುವ ಅವಕಾಶ ಕುಗ್ಗತ್ತೆ.. ಅದರ ಬಗ್ಗೆ ತಿಳಿಯೋಣ ಬನ್ನಿ
ಬೇಬಿ ಶಾಮಿಲಿ ಒಂದೇ ಚಿತ್ರರಂಗಕ್ಕೆ ಸೀಮಿತವಾಗಿರಲಿಲ್ಲ. ಎಲ್ಲ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಇಷ್ಟೆಲ್ಲಾ ಸಿನಿಮಾ ಮಾಡಿ ಹೆಸರು ಮಾಡಿದ್ದ ಬೇಬಿ ಶಾಮಿಲಿ ಹೀರೋಯಿನ್ ಆಗಿ ಯಾಕೆ ತೆರೆ ಮೇಲೆ ಬರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಮಾತ್ರ ನಟನೆ ಮಾಡುತ್ತಿದ್ದ ಬೇಬಿ ಶಾಮಿಲಿ ಹೀರೋಯಿನ್ ಆಗಿ ಯಾಕೆ ಸಕ್ಸಸ್ ಆಗಲಿಲ್ಲ ಎಂಬ ರಿಪೋರ್ಟ್ ಇಲ್ಲಿದೆ ನೋಡಿ….
ಮನುಷ್ಯ ತಗ್ಗಿ ಬಗ್ಗಿ ನಡೆದರೆ ಏನು ಬೇಕಾದರೂ ಸಾಧನೆ ಮಾಡುತ್ತಾನೆ. ಬೆಳೆದಾಗ ಮನುಷ್ಯನ ಸ್ವಭಾವ ಗೊತ್ತಾಗುತ್ತೆ, ಹಣ , ಹೆಸರು ಬಂದಾಗ ಮನುಷ್ಯ ಹೇಗೆ ನಡೆದುಕೊಳ್ಳುತ್ತಾನೆ ಎಂಬುದು ಅತಿ ಮುಖ್ಯವಾಗುತ್ತೆ. ಹಾಗಿಗಿಯೇ ಸ್ಟಾರ್ ಪಟ್ಟ ಬಂದಮೇಲೆ ಚೇಂಜ್ ಆಗಿ ಬಿಡುತ್ತಾರೆ ಅಂತ ಎಲ್ಲರೂ ಹೇಳಿದ್ದನ್ನು ಕೇಳಿದ್ದೀರ. ಜೊತೆಗೆ ಕೆಲವರು ಬದಲಾಗಿರುವುದನ್ನು ಕೂಡ ನೋಡಿದ್ದೀರ. ಅದರಲ್ಲೂ ಈ ಪ್ರಪಂಚದಲ್ಲಿ ಬದಲಾವಣೆ ಅನ್ನುವ ಪದ ಬಿಟ್ಟು ಮಿಕ್ಕಿದ್ದೆಲ್ಲವೂ ಬದಲಾಗುತ್ತೆ. ಇಲ್ಲಿ ಅಂಥ ವ್ಯಕ್ತಿಯೊಬ್ಬರ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಿದ್ದೇವೆ. ಸಂಪೂರ್ಣವಾಗಿ ಓದಿ. ಯಶಸ್ಸನ್ನು ತಲೆಗೆ ತೆಗೆದುಕೊಂಡಿದ್ದ ಬೇಬಿ ಶಾಮಿಲಿ ಕಥೆ ಇದು. ಬೇಬಿ ಶಾಮಿಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೆಸರು ಹೇಳುತ್ತಿದ್ದ ಹಾಗೇ ಕಣ್ಣ ಮುಂದೆ ಮುದ್ದಾದ ಮುಖ, ಕಿವಿಗೆ ಇಂಪೆನಿಸುವ ಸೊಗಸಾದ ಡೈಲಾಗ್ಗಳು ಬರುತ್ತವೆ.
ಬೇಬಿ ಶಾಮಿಲಿ ಒಂದೇ ಚಿತ್ರರಂಗಕ್ಕೆ ಸೀಮಿತವಾಗಿರಲಿಲ್ಲ. ಎಲ್ಲ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಇವರ ಸಿನಿಮಾದಲ್ಲಿ ಈಕೆಯೆ ಹೀರೋ ಇದ್ದಂತೆ. ಈಕೆ ಸಿನಿಮಾದಲ್ಲಿ ನಟಿಸಿದ್ದಾರೆ ಅಂದರೆ ಸಾಕು, ನಟ-ನಟಿಯರ ಬಗ್ಗೆ ಸಿನಿ ಪ್ರೇಕ್ಷಕರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಎಲ್ಲರಿಗೂ ಈಕೆಯ ಅಭಿನಯ ಕಂಡರೆ, ನಮ್ಮ ಮನೆಯ ಮಗಳು ಎನ್ನುವ ಫೀಲ್ ಬರುತ್ತಿತ್ತು. ಆ ವಯಸ್ಸಲ್ಲಿ ಅದ್ಭುತ ನಟನೆಯಿಂದ ಎಲ್ಲರ ಮನ ಗೆದ್ದವರು ಬೇಬಿ ಶಾಮಿಲಿ. ಆ ಕಾಲದಲ್ಲೇ ಹೆಚ್ಚಿನ ಇನ್ಕಮ್ ಟ್ಯಾಕ್ಸ್ ಪೇ ಮಾಡುತ್ತಿದ್ದವರಲ್ಲಿ ಬೇಬಿ ಶಾಮಿಲಿ ಕೂಡ ಒಬ್ಬರು ಅಂದ್ರೆ ಆಶ್ಚರ್ಯ ಆಗದೇ ಇರದು. ಸಾಕಷ್ಟು ಸಿನಿಮಾಗಳಲ್ಲಿ ಬೇಬಿ ಶಾಮಿಲಿ ನಟಿಸಿದ್ದರು.
ಇಷ್ಟೆಲ್ಲಾ ಸಿನಿಮಾ ಮಾಡಿ ಹೆಸರು ಮಾಡಿದ್ದ ಬೇಬಿ ಶಾಮಿಲಿ ಹೀರೋಯಿನ್ ಆಗಿ ಯಾಕೆ ತೆರೆ ಮೇಲೆ ಬರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಮಾತ್ರ ನಟನೆ ಮಾಡುತ್ತಿದ್ದ ಬೇಬಿ ಶಾಮಿಲಿ ಹೀರೋಯಿನ್ ಆಗಿ ಯಾಕೆ ಸಕ್ಸಸ್ ಆಗಲಿಲ್ಲ. ಬೇಬಿ ಶಾಮಿಲಿ ಅವರ ತಂದೆ ಬಾಬು. ಕೇರಳ ಮೂಲದವರು. ಅವರು ಕೂಡ ನಟನೆ ಮಾಡಬೇಕೆಂದು ತಮಿಳುನಾಡಿಗೆ ಬಂದಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ. ಹೀಗಾಗಿ ತಮ್ಮ ಆಸೆಯನ್ನು ತನ್ನ ಮಗಳ ಮೂಲಕ ಈಡೇರಿಸಿಕೊಂಡರು. ಬೇಬಿ ಶಾಮಿಲಿ 1987ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಬಾಲ್ಯದಿಂದಲೂ ಬೇಬಿ ಶಾಮಿಲಿಗೆ ನಟನೆ ತರಬೇತಿ ನೀಡುತ್ತಿದ್ದರಂತೆ. 1989ರಲ್ಲಿ ತೆರೆಗೆ ಬಂದ ರಾಜನದೈ ಸಿನಿಮಾದಲ್ಲಿ ಬೇಬಿ ಶಾಮಿಲಿ ನಟಿಸಿದ್ದರು. ಆಗ ಅವರಿಗೆ ಕೇವಲ ಎರಡು ವರ್ಷ. ಅದೇ ವರ್ಷ ಮಗಡು ಎಂಬ ಸಿನಿಮಾದಲ್ಲೂ ಬೇಬಿ ಶಾಮಿಲಿ ನಟಿಸಿದ್ದರು. ಆದರೆ ಬೇಬಿ ಶಾಮಿಲಿ ಅವರ ಬದುಕನ್ನೇ ಬದಲಾಯಿಸಿದ ಸಿನಿಮಾ ಅಂದರೆ ಅದು ಅಂಜಲಿ.ಈ ತಮಿಳು ಸಿನಿಮಾ ಅವರ ಬದುಕನ್ನೇ ಬದಲಾಯಿಸಿತು. 3 ವರ್ಷ ವಯಸ್ಸಿಗೆ ಈಕೆ ಮಾಡಿದ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದರು. ತಮಿಳು ರಾಜ್ಯ ಪ್ರಶಸ್ತಿ ಕೂಡ ಬೇಬಿ ಶಾಮಿಲಿ ಪಡೆದುಕೊಂಡರು. ಇದಾದ ಬಳಿಕ ಮಲ್ಲುಟಿ 1990 ಸಿನಿಮಾದಲ್ಲಿ ನಟಿಸಿದರು. ಬಳಿಕ ಕನ್ನಡ ಸಿನಿಮಾಗೆ ಬೇಬಿ ಶಾಮಿಲಿ ಎಂಟ್ರಿ ಕೊಟ್ಟರು. ವಿಷ್ಣುವರ್ಧನ್ ಅಭಿನಯದ ಮತ್ತೆ ಹಾಡಿತು ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ಈ ಸಿನಿಮಾದಿಂದ ಬೇಬಿ ಶಾಮಿಲಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಆದರು. ಕನ್ನಡದಲ್ಲಿ ಹೆಚ್ಚು ಅವಕಾಶಗಳು ಬೇಬಿ ಶಾಮಿಲಿಯನ್ನು ಹುಡುಕಿಕೊಂಡು ಬಂತು. ಇದಾದ ಬಳಿಕ ಭೈರವಿ, ಶ್ವೇತಾಜ್ಞ, ಪೊಲೀಸ್ ಲಾಕಪ್, ಕಾದಂಬರಿ, ಶಾಂಭವಿ, ಕರುಳಿನ ಕುಡಿ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸಿ ಬೇಬಿ ಶಾಮಿಲಿ ಸ್ಟಾರ್ ಪಟ್ಟವನ್ನು ಪಡೆದುಕೊಂಡರು. ಬೇಬಿ ಶಾಮಿಲಿ ಕಾಲ್ಶೀಟ್ಗಾಗಿ ನಿರ್ಮಾಪಕರು ಕ್ಯೂ ನಿಲ್ಲುತ್ತಿದ್ದರಂತೆ. ಬೇಬಿ ಶಾಮಿಲಿ ಬೆಳೆದು ದೊಡ್ಡವಾಳಾಗುತ್ತಿದ್ದಂತೆ ಅವಕಾಶಗಳು ಕೂಡ ಕಡಿಮೆಯಾಗುತ್ತೆ. ಬೇಬಿ ಶಾಮಿಲಿ ಕೂಡ ತಮ್ಮ ವಿದ್ಯಾಭ್ಯಾಸ ಕಡೆ ಹೆಚ್ಚಿನ ಗಮನ ನೀಡುವುದಕ್ಕೆ ಶುರು ಮಾಡುತ್ತಾರೆ.
ಬಾಲನಟಿಯಾಗಿ ಇಲ್ಲಿಗೆ ಬೇಬಿ ಶಾಮಿಲಿ ಅಧ್ಯಾಯ ಮುಗಿದಿತ್ತು. 2009ರಲ್ಲಿ ಬಿಡುಗಡೆಯಾದ ಓಯ್ ಎಂಬ ತೆಲುಗು ಸಿನಿಮಾದ ಮೂಲಕ ಹೀರೋಯಿನ್ ಆಗಿ ಬೇಬಿ ಶಾಮಿಲಿ ಕಮ್ಬ್ಯಾಕ್ ಮಾಡಿದ್ದರು. ಆದರೆ, ಸಿನಿಮಾ ಹೇಳಿಕೊಳ್ಳುವಂತಹ ಸಕ್ಸಸ್ ನೀಡಲಿಲ್ಲ. ಈ ಸಿನಿಮಾಗಾಗಿ ಫಿಲ್ಮ್ಫೇರ್ ಅವಾರ್ಡ್ ಕೂಡ ಪಡೆದುಕೊಂಡಿದ್ದರು ಬೇಬಿ ಶಾಮಿಲಿ. ಇದಾದ ಬಳಿಕ ಹೇಳಿಕೊಳ್ಳುವಂತಹ ಅವಕಾಶಗಳು ಇವರಿಗೆ ಬರಲಿಲ್ಲ. 2016ರಲ್ಲಿ ವಾಲ್ಯೂತೇಟಿ ಪುಲ್ಲಮೇಟಿ ಎಂಬ ಮಲಯಾಳಂ ಸಿನಿಮಾದಲ್ಲಿ ಬೇಬಿ ಶಾಮಿಲಿ ನಟಿಸಿದರು. ಇದಾದ ಬಳಿಕ ವೀರ ಶಿವಾಜಿಯಲ್ಲೂ ನಟಿಸಿದ್ದರು. 2018ರಲ್ಲಿ ಬಿಡುಗಡೆಯಾಗಿದ್ದ ಅಮ್ಮಮೆಗರಿಲ್ಲು ಎಂಬ ಸಿನಿಮಾದಲ್ಲಿ ಕೊನೆಯದಾಗಿ ಬೇಬಿ ಶಾಮಿಲಿ ಕಾಣಿಸಿಕೊಂಡಿದ್ದರು. ಕನ್ನಡದಿಂದಲೂ ಹೆಚ್ಚಿನ ಅವಕಾಶವನ್ನು ಬಂದಿತ್ತು. ಆದರೆ, ಸಖತ್ ಚ್ಯೂಸಿಯಾಗಿದ್ದ ಬೇಬಿ ಶಾಮಿಲಿ ಎಲ್ಲ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಎಲ್ಲ ಭಾಷೆಗಳಲ್ಲೂ ಇವರಿಗೆ ಬೇಡಿಕೆಯಿತ್ತು. ಬೇಬಿ ಶಾಮಿಲಿ ಬಾಲನಟಿಯಾಗಿಬ 40 ರಿಂದ 50 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಹೀರೋಯಿನ್ ಆಗಿ ಕೇವಲ ನಾಲ್ಕು ಸಿನಿಮಾದಲ್ಲಿ ಮಾತ್ರ ನಟಿಸಿದ್ದಾರೆ. ಆದರೆ, ಯಾವ ಸಿನಿಮಾ ಕೂಡ ಇವರಿಗೆ ಸ್ಟಾರ್ ಪಟ್ಟವನ್ನು ತಂದುಕೊಡಲಿಲ್ಲ. ಇನ್ನೂ ಇವರ ಅಕ್ಕ ಅಂಜಲಿ ಕೂಡ ಬಾಲನಟಿಯಾಗಿ ಗುರುತಿಸಿಕೊಂಡಿದ್ದರು. ಈ ಅಂಜಲಿ ಬೇರೆ ಯಾರೂ ಅಲ್ಲ ತಲಾ ಅಜಿತ್ ಅವರ ಪತ್ನಿ.
ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ: ಉಸಿರುಗಟ್ಟಿಸೋ ಸ್ಥಿತಿ, GRAP-III ನಿರ್ಬಂಧ ಜಾರಿ!
ಬಾಲನಟಿಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಹೀರೋಯಿನ್ ಆದ್ಮೇಲೆ ಸ್ಟಾರ್ ಪಟ್ಟ ಸಿಗಲಿಲ್ಲ. ತನ್ನ ಭಾವ ಸೂಪರ್ ಸ್ಟಾರ್ ಅನ್ನುವ ಅಹಂಕಾರ ಕೂಡ ಅವರಿಗಿತ್ತಂತೆ. ನಿರ್ದೇಶಕರು ಹಾಗೂ ನಿರ್ಮಾಪಕರ ಜೊತೆಗಿನ ಒಡನಾಟ ಸರಿಯಿರಲಿಲ್ಲವಂತೆ. ಈ ಬಗ್ಗೆ ಆಗಲೇ ಸಾಕಷ್ಟು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಅದೇನೇ ಇರಲಿ, ಯಶಸ್ಸು ತಲೆಗೆ ಹತ್ತಿಸಿಕೊಂಡಿದ್ದ ಬೇಬಿ ಶಾಮಿಲಿ ಹೀರೋಯಿನ್ ಆಗಿ ಸ್ಟಾರ್ ಪಟ್ಟ ಗಳಿಸಿಕೊಳ್ಳುವಲ್ಲಿ ವಿಫಲರಾದರು ಎನ್ನಲಾಗಿದೆ.
ಪೇಂಟಿಂಗ್ ಮಾಡುವ ಹವ್ಯಾಸ ಶಾಮಿಲಿ ಇತ್ತು. ಈಗ ಅದುವೇ ವೃತ್ತಿಯಾಗಿದೆ. ಶಾಮಿಲಿ ಅವರು ಪೇಂಟಿಂಗ್ ಮಾಡುತ್ತಾರೆ. ಇದನ್ನು ಅವರು ಮಾರಾಟ ಮಾಡುತ್ತಾರೆ. ಅವರ ಕಲ್ಪನೆಗಳನ್ನು ಬಿಡಿಸಿ ಮಾರುತ್ತಾರೆ. ಅವರು ಬಿಡಿಸೋ ಚಿತ್ರಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅವರು ಪೋಸ್ಟ್ ಮಾಡುತ್ತಾ ಇರುತ್ತಾರೆ.