ಬೆಂಗಳೂರು:-34 ದಿನಗಳ ಕಣ್ಣಾ ಮುಚ್ಚಾಲೆ ಆಟದ ಬಳಿಕ ಅತ್ಯಾಚಾರ ಆರೋಪ ಹೊತ್ತಿರೊ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಪ್ರತ್ಯಕ್ಷನಾಗಿದ್ದ.ತಕ್ಷಣ ಬಂಧಿಸಿದ ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ..
ಮೊಟ್ಟೆಗಾಗಿ ದಂಪತಿ ನಡುವೆ ಜಗಳ.. ಮನನೊಂದ ಪತ್ನಿ ಮನೆ ಮೇಲಿಂದ ಹಾರಿ ಸೊಸೈಡ್!
ಕೆಂಪೇಗೌಡ ಏರ್ಪೋರ್ಟ್ ಗೆ ಬಂದಿಳಿದ ಪ್ರಜ್ವಲ್ ರೇವಣ್ಣ ಲಾಕ್ ಆಗಿದ್ದ..ಹಾಗಾದ್ರೆ ಎಸ್ಐಟಿ ವಿಚಾರಣೆ ವೇಳೆ ಪ್ರಜ್ವಲ್ ರೇವಣ್ಣ ಹೇಳಿದ್ದೇನು ಅದನ್ನೇ ತೋರಿಸ್ತೀವಿ ನೋಡಿ.
ಒಂದಲ್ಲ ಎರಡಲ್ಲ…ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಸಾಲು ಸಾಲು ಅಶ್ಲೀಲ ವಿಡಿಯೋ ರಿಲೀಸ್ ಆಗಿದ್ವು..ಅದೇ ವಿಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು…ಸಾಮಾನ್ಯ ಜನ ಕೂಡ ಛೀ..ಥೂ..ಅನ್ನೋಕೆ ಶುರು ಮಾಡಿದ್ರು..ಓರ್ವ ಸಂಸದನ ಈ ಕೃತ್ಯ ಕಂಡ ಕೆಂಡಕಾರಿದ್ರು..ಅತ್ಯಾಚಾರ ಆರೋಪದಡಿಯಲ್ಲಿ ಹೊಳೆನರಸಿಪುರದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು..ಬಳಿಕ ಅತ್ಯಾಚಾರ ಆರೋಪ ಕೂಡ ಮಾಡಲಾಗಿತ್ತು…ಯಾವಾಗ ಪ್ರಕರಣ ಬೆಳಕಿಗೆ ಬರಲು ಪ್ರಾರಂಭವಾಯ್ತೋ ಎಸ್ಐಟಿ ರಚನೆಗು ಮುನ್ನವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾತಿದ್ದ 34 ದಿನದ ಬಳಿಕ ಬೆಂಗಳೂರಿಗೆ ಬಂದಿದ್ದು ಎಸ್ಐಟಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ..
ಹೌದು ಮಧ್ಯರಾತ್ರಿ ಕೇಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಜ್ವಲ್ ರೇವಣ್ಣರನ್ನ ಎಸ್ಐಟಿ ಅಧಿಕಾರಿಗಳು ಪ್ಯಾಲೆಸ್ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ಕರೆತಂದು ವಿಚಾರಣೆಗೆ ಮುಂದಾಗಿದ್ರು ಅಷ್ಟರಲ್ಲಾಗಲೇ ಪ್ರಜ್ವಲ್ ರೇವಣ್ಣ ಡ್ರಾಮಾ ಶುರು ಮಾಡಿದ್ದ..ನನಗೆ ಸುಸ್ತಾಗಿದೆ..ಉತ್ತರಿಸಲು ಆಗಲ್ಲ ಅಂತಾ ನಿದ್ದೆಗೆ ಜಾರಿದ್ರು..ಬೆಳಗ್ಗೆ 5.30 ಕ್ಕೆ ಎದ್ದು ತಡಬಡಾಯಿಸಿದ್ರು..ಬಳಿಕ ಇಂದು ಬೆಳಗ್ಗೆ ಪ್ರಜ್ವಲ್ ರೇವಣ್ಣ ಮೆಡಿಕಲ್ ಗೆ ಕರೆದೊಯ್ಯುವ ಮುನ್ನ ಒಂದಷ್ಟು ಪ್ರಶ್ನೆ ಕೇಳಿದ್ರು.ಹಾಗಾದ್ರೆ ಎಸ್ಐಟಿ ಪ್ರಶ್ನೆಗೆ ಪ್ರಜ್ವಲ್ ರೇವಣ್ಣ ಕೊಟ್ಟ ಉತ್ತರ ಏನು ಗೊತ್ತಾ?ಮೊದಲಿಗೆ ನಿಮ್ಮಬಳಿ ಇರುವ ಮೊಬೈಲ್ ಕೊಡಿ ಎಂದು ಎಸ್ಐಟಿ ಕೇಳಿದಾಗ ಬೇಸಿಕ್ ಫೋನ್ ಅನ್ನ ಎಸ್ಐಟಿ ಅಧಿಕಾರಿಗಳಿಗೆ ನೀಡಿದ್ದಾನೆ..
ಎಸ್ಐಟಿ : ಇದು ಬೇಸಿಕ್ ಫೋನ್ ಬೇರೆ ಫೋನ್ ಎಲ್ಲಿದೆ?
ಪ್ರಜ್ವಲ್ ರೇವಣ್ಣ : ನನ್ನ ಹತ್ತಿರ ಇರುವುದು ಇದೆ ಫೋನ್
ಎಸ್ಐಟಿ : ಒಬ್ಬ ಸಂಸದರಾಗಿ ಬೇಸಿಕ್ ಫೋನ್ ಮಾತ್ರ ಬಳಸ್ತೀರಾ?
ಪ್ರಜ್ವಲ್ ರೇವಣ್ಣ : ಬೇರೆ ಫೋನ್ ನನ್ನ PA ಹತ್ತಿರ ಇರುತ್ತೆ,ಅವರೇ ಅದನ್ನ ಹ್ಯಾಂಡಲ್ ಮಾಡ್ತಾರೆ
ಎಸ್ಐಟಿ : ದೂರು ಕೊಟ್ಟ ಸಂತ್ರಸ್ಥೆಯರಿಗು ನಿಮಗೂ ಹೇಗೆ ಪರಿಚಯ(ಎಂದು ಫೋಟೊ ತೋರಿಸಿದ ಎಸ್ಐಟಿ)
ಪ್ರಜ್ವಲ್ ರೇವಣ್ಣ : ಇವರು ಯಾರು ನನಗೆ ಗೊತ್ತಿಲ್ಲ,ಯಾರು ನೆನಪು ಇಲ್ಲ..ನಮ್ಮ ಬಳಿ
ತುಂಬಾ ಜನರ ಕೆಲಸದವರು ಇದ್ದಾರೆ
ಎಸ್ಐಟಿ : ನಿಮ್ಮ ವಕೀಲರ ನಂಬರ್ ಹೇಳಿ
ಪ್ರಜ್ವಲ್ ರೇವಣ್ : ನನ್ನ ಹತ್ತಿರ ವಕೀಲರ ನಂಬರ್ ಇಲ್ಲ
ಎಸ್ಐಟಿ :ನಿಮ್ಮ ತಂದೆಯ ನಂಬರ್ ಕೊಡಿ
ಪ್ರಜ್ವಲ್ ರೇವಣ್ಣ : ನನ್ನ ಹತ್ತಿರ ಇಲ್ಲ
ಮಧ್ಯಾಹ್ನ 12.45 ಕ್ಕೆ ಎಸ್ಐಟಿ ಕಚೇರಿಯಿಂದ ಪ್ರಜ್ವಲ್ ರೇವಣ್ಣನನ್ನ ಶಿವಾಜಿನಗರ ಸಮೀಪ ಇರೊ ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದಾರೆ..ಮಧ್ಯಾಹ್ನ 1.15 ಕ್ಕೆ ಅಲ್ಲಿಂದ ನೇರವಾಗಿ ಕೋರ್ಟ್ ಗೆ ಪ್ರಜ್ವಲ್ ರೇವಣ್ಣರನ್ನ ಎಸ್ಐಟಿ ಅಧಿಕಾರಿಗಳು ಕರೆತಂದಿದ್ದಾರೆ…ವಾದ ಪ್ರತಿವಾದದ ಬಳಿಕ ಕೋರ್ಟ್ ಪ್ರಜ್ವಲ್ ರೇವಣ್ಣರನ್ನ ಜೂನ್ 6 ರವರೆಗೆ ಎಸ್ಐಟಿ ಕಸ್ಟಡಿಗೆ ನೀಡಿದ್ದು ಸಂಜೆ 4.55 ಕ್ಕೆ ಸರಿಯಾಗಿ ಎಸ್ಐಟಿ ಕಚೇರಿಗೆ ಕರೆತಂದು ವಿಚಾರಣೆ ಮಾಡ್ತಿದ್ದಾರೆ…ವಿಚಾರಣೆ ವೇಳೆ..ಸಂತ್ರಸ್ಥ ಮಹಿಳೆಯರಿಗೂ ಪ್ರಜ್ವಲ್ ಗು ಯಾವಾಗಿನಿಂದ ಪರಿಚಯ..ಯಾವಾಗ ಇಬ್ಬರ ನಡುವೆ ಕ್ಲೋಸ್ ರಿಲೇಷನ್ ಶಿಪ್ ಆಯ್ತು? ವಿಡಿಯೋ ಚಿತ್ರೀಕರಣ ಮಾಡಿದ್ದರ ಹಿಂದೆ ಬ್ಲಾಕ್ ಮೇಲ್ ಮಾಡುವ ಉದ್ದೇಶವಿತ್ತಾ…?ಜೊತೆಗೆ ವಿಡಿಯೋ ಗಳು ಹೇಗೆ ವೈರಲ್ ಆಯ್ತು? ನಿಮಗೆ ಇದರ ಬಗ್ಗೆ ಮೊದಲೇ ಗೊತ್ತಿತ್ತಾ..ನೀವು ವಿದೇಶಕ್ಕೆ ಹೋಗಿದ್ದು ಯಾಕೆ..ಪ್ರಕರಣ ದಾಖಲಾಗುವ ಬಗ್ಗೆ ನಿಮಗೆ ಮಾಹಿತಿ ಇತ್ತಾ?..ನಿಮ್ಮನ್ನ ಏರ್ ಪೋರ್ಟ್ ಗೆ ಬಿಟ್ಟಿದ್ಯಾರು…ವಿದೇಶದಲ್ಲಿ ನಿಮಗೆ ಆಶ್ರಯ ಕೊಟ್ಟಿದ್ಯಾರು?..ಹಣದ ಸಹಾಯ ಮಾಡಿದವರ್ಯಾರು?..ಮಹಿಳೆಯರಿಗೆ ಯಾಕೆ ಪದೇ ಪದೇ ವಿಡಿಯೋ ಕರೆ ಮಾಡಿ ರೆಕಾರ್ಡ್ ಮಾಡಿದ್ರಿ?ವಿದೇಶದಿಂದ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ಯಾಕೆ?ನೋಟಿಸ್ ಕೊಟ್ಟ ಬಳಿಕ ವಿಚಾರಣೆಗೆ ಆಗಮಿಸಿಲ್ಲ ಯಾಕೆ ?ವಿಡಿಯೋ ರೆಕಾರ್ಡ್ ಮಾಡಿದ್ದು ಯಾವ ಮೊಬೈಲ್ ನಲ್ಲಿ?ಆ ವಿಡಿಯೋ ರೆಕಾರ್ಡ್ ಆದ ಮೊಬೈಲ್ ಎಲ್ಲಿದೆ?ಬೇರೆ ಎಲ್ಲಾದ್ರು ವಿಡಿಯೋ ಸೇವ್ ಮಾಡಿ ಇಟ್ಟಿದ್ದೀರಾ?ಕಾರ್ತಿಕ್ ಗೆ ಈ ಅಷ್ಟು ವಿಡಿಯೋ ಲಭ್ಯವಾಗಿದ್ದು ಹೇಗೆ? ಈ ಎಲ್ಲಾ ಪ್ರಶ್ನೆಗಳನ್ನು ಪ್ರಜ್ವಲ್ ಮುಂದಿಟ್ಟಿದ್ದು ಪ್ರಜ್ವಲ್ ಎಲ್ಲಕ್ಕು ಅಸಮರ್ಪಕ ಉತ್ತರ ನೀಡ್ತಿದ್ದಾರೆ..ಮುಂದಿನ 6 ದಿನ ಕೂಡ ಪ್ರಜ್ವಲ್ ವಿಚಾರಣೆ ನಡೆಸಲಿರುವ ಎಸ್ಐಟಿ ಕೃತ್ಯ ನಡೆದ ಸ್ಥಳ ಮಹಜರು ಕೂಡ ನಡೆಸಲಿದ್ದಾರೆ.