ಹುಬ್ಬಳ್ಳಿ: ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಭಯೋತ್ಪಾದನೆ ತಾಂಡವ ನೃತ್ಯವಾಡತಿತ್ತು ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಆರೋಪ ಮಾಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಭಾರತಕ್ಕೆ ಬಾಂಗ್ಲಾದೇಶ ನುಸುಳಿಕೋರರು ಹೆಚ್ಚಾಗುವುದಕ್ಕೆ ಕೇಂದ್ರದ ಗೌಪ್ಯ ಇಲಾಖೆ, ಕೇಂದ್ರದ ಏಜನ್ಸಿ ವಿಫಲ ಎಂಬ ಗೃಹ ಸಚಿವ ಪರಮೇಶ್ವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟ ಅವರು, ಕರ್ನಾಟಕದಲ್ಲಿ ಬಾಂಗ್ಲಾದೇಶದವರು ಎಷ್ಟು ಜನ ಎಲ್ಲಿ ಇದ್ದಾರೆ ಅಂತಾ ಮಾಹಿತಿ ಕಲೆ ಹಾಕಬೇಕಾಗಿದ್ದು, ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ ಇದು ಸರಿಯಲ್ಲ.
2014 ರಿಂದ 2024 ಎಲ್ಲ ಘಟನಾವಳಿಗಳನ್ನ ತೆಗೆದು ನೋಡಲಿ. 2014 ರ ಮೊದಲು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಪಾಕಿಸ್ತಾನ, ಬಾಂಗ್ಲಾದೇಶದ ನುಳುಸುಕೋರರು ಎಷ್ಟು ಬಂದರು ಎಲ್ಲಿ ಬಂದರು ಅಂತಾ ನೋಡಲಿಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಂದ ಮೇಲೆ ಸಾಕಷ್ಟು ಕಡಿವಾಣ ಹಾಕಲಾಗಿದ್ದು ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ನುಸುಳುಕೋರರ ಸಂಖ್ಯೆ ಕಡಿಮೆ ಆಗಿದ್ದು, ಕಾಂಗ್ರೆಸ್ ಸರಕಾರ ಇದ್ದಾಗ ಭಯೋತ್ಪಾದನೆ ತಾಂಡವ ನೃತ್ಯವಾಡತಿತ್ತು ಆದರೆ
ಪ್ರಧಾನಿ ನರೇಂದ್ರ ಮೋದಿ ಅವರು ಬಂದ ಮೇಲೆ ಭಯೋತ್ಪಾದನೆ ಹತ್ತಿಕ್ಕುವ ಕೆಲಸ ಆಗಿದೆ.
ಪ್ರಸ್ತುತ ದೇಶದಲ್ಲಿ ಎಲ್ಲಲ್ಲಿ ಬಿಜೆಪಿ ಸರಕಾರ ಇಲ್ಲ ಅಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆತಾ ಇವೆ. ಇನ್ನು
ಕರ್ನಾಟಕದಲ್ಲಿ ರಾಮೇಶ್ವರಂ ಕೆಫೆದಲ್ಲಿ ಬಾಂಬ್ ಬ್ಲಾಸ್ಟ್ ಆಗುತ್ತದೆ. ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದ ಗಲಿಭೆ ಆಗುತ್ತದೆ. ಕಾಂಗ್ರೆಸ್ ಸರಕಾರ ಇಂತಹ ಆತಂಕ ಸೃಷ್ಟಿಸುವವರಿಗೆ ಪೋಷಣೆ ಮಾಡಿದಂತೆ ಆಗುತ್ತದೆ.ಇಂತಹ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಅಂತಾ ಮಾತನಾಡುವುದು ಅಲ್ಲ. ಒಟ್ಟಾಗಿ ಇಂತಹ ದೇಶದ್ರೋಹಿಗಳನ್ನ ಬಗ್ಗ ಬಡೆಯಬೇಕಾಗಿತ್ತದೆ ಇದರಲ್ಲಿ ಯಾವುದೇ ರೀತಿಯ ರಾಜಕಾರಣ ಮಾಡುವುದು ಇದರಲ್ಲಿ ಬೇಡಾ ಒಟ್ಟಾಗಿ ಬೇರೆತು ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು .
ಈ ಬಗ್ಗೆ ನಮ್ಮ ಮೇಲೆ ಆರೋಪ ಮಾಡುವ ಅವರು, ಹಾಗಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದು ಒಂದೂವರೆ ವರ್ಷ ಆಯಿತುಯಾಕೆ ಅವರನ್ನ ನಿಯಂತ್ರಣ ಮಾಡಲಿಲ್ಲಬಾಂಗ್ಲಾದೇಶದಿಂದ ಎಷ್ಟು ನುಸುಳುಕೋರರು ಇದ್ದಾರೆ
ಏನಾದರೂ ಈ ಬಗ್ಗೆ ನಾವು ಸುಳಿವು ಕೊಟ್ಟಾಗ ಮಾತ್ರ ಬಂಧನ ಮಾಡುವ ಕೆಲಸ ಆಗುತ್ತದೆಇದರಲ್ಲಿ ಯಾವುದೇ ರಾಜಕಾರಣ ಮಾಡದೇ ಬಾಂಗ್ಲಾದೇಶ, ಪಾಕಿಸ್ತಾನದವರು ಇರಲಿ ಬಂಧನ ಮಾಡಬೇಕು ಎಂದರು.
‘
ಬಿಜೆಪಿಯಿಂದ ಸೇಡಿನ ರಾಜಕಾರಣ ಮಾಡಲಾಗುತ್ತಿದೆ ಎಂಬ ಗೃಹ ಸಚಿವರ ಹೇಳಿಕೆ ವಿಚಾರ ಏನೇ ಸೇಡಿನ ರಾಜಕಾರಣ ಕಾಂಗ್ರೆಸ್ ಪಕ್ಷದಿಂದ ಮಾತ್ರ ಬಿಜೆಪಿ ನಾಯಕರ ಮೇಲೆ ಎಫ್ ಐ ಆರ್ ದಾಖಲು ಮಾಡುವುದು ಆರ್ .ಅಶೋಕ ಅವರ ಮೇಲೆ ಯಾವುದು ಹಳೆ ಕೇಸ್ ಮೇಲೆ ಎಫ್ ಐ ಆರ್ ಮಾಡುವುದು.ಆದರೆ ಈಗಾಗಲೇ ಆರ್.ಅಶೋಕ ಅವರು ಹೇಳಿದ್ದಾರೆ ನಾನು ರಾಜೀನಾಮೆ ಕೊಡುತ್ತೇನೆ ನೀವು ಕೊಡಿ ಅಂತಾ ಮೊದಲು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಲಿ
ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣದ ಮೇಲೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲಿ
ಆರ್ ಅಶೋಕ ಅವರ ಸವಾಲನ್ನ ಸ್ವೀಕಾರ ಮಾಡುವ ಕೆಲಸ ರಾಜ್ಯ ಸರ್ಕಾರ ಮಾಡಲಿ ಎಂದು ಒತ್ತಾಯ ಮಾಡಿದರು.
ದಲಿತ ಮುಖ್ಯಮಂತ್ರಿ ವಿಚಾರ ಮುನ್ನಲೆಗೆ ಬಂದ ವಿಚಾರ:
ರಾಜ್ಯ ಸರ್ಕಾರ ಮನೆವೊಂದು ಮೂರು ಬಾಗಿಲು ಆಗಿದ್ದುಕಾಂಗ್ರೆಸ್ ನಲ್ಲಿ ಎಲ್ಲವೋ ಸರಿಯಲ್ಲ
ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯಾ ನವರು ರಾಜೀನಾಮೆ ಕೊಡುತ್ತಾರೆ ಎಂಬ ಮಾತು ಕೇಳಿ ಬಂದಾಗ ಇನ್ನಷ್ಟು ಆಕಾಂಕ್ಷೆ ಗಳು ಹೆಚ್ಚಾಗಿದ್ದರೆಸಿಎಂ ಕುರ್ಚಿ ಮೇಲೆ ಟವಲ್ ಹಾಕುವವರ ಸಂಖ್ಯೆ ಹೆಚ್ಚಾಗಿದ್ದು ಈಗಾಗಲೇ ಸಾಕಷ್ಟು ನಾಯಕರು ತಾ ಮುಂದು ನಾ ಮುಂದು ಎನ್ನುತಿದ್ದಾರೆ. ಸಚಿವರಾದ
ಮಎಂ.ಬಿ.ಪಾಟೀಲ್, ಆರ್ .ವಿ.ದೇಶಪಾಂಡೆ ಸತೀಶ್ ಜಾರಕಿಹೂಳಿಬಂಡೆ ಈಗಾಗಲೇ ತಾವೇ ಮುಖ್ಯಮಂತ್ರಿ ಅನ್ನುವ ರೀತಿಯಲ್ಲಿ ಬಿಂಬಿಸಿಕೊಳ್ಳತಾ ಇದ್ದಾರೆ ಎಂದರು