ಸಿಹಿತಿಂಡಿಗಳ ವಿಷಯಕ್ಕೆ ಬಂದಾಗ, ಸಾಮಾನ್ಯವಾಗಿ ಹೆಚ್ಚಿನವರು ಊಟದ ನಂತರ ಸಿಹಿಯನ್ನು ತಿನ್ನಲು ಬಯಸುತ್ತಾರೆ. ಆದರೆ ನಾವು ಇತ್ತೀಚಿನ ವರದಿಗಳ ಪ್ರಕಾರ ಹೋದರೆ, ಆಯುರ್ವೇದದ ಪ್ರಕಾರ ನೀವು ಊಟದ ಮೊದಲು ಸಿಹಿ ತಿನ್ನುವುದು ಉತ್ತಮವಂತೆ.
“ಊಟದ ಮೊದಲು ಏನಾದರೂ ಸಿಹಿಯನ್ನು ತಿನ್ನುವುದು ಜೀರ್ಣಕಾರಿ ಸ್ರವಿಸುವಿಕೆಯ ಹರಿವನ್ನು ಸಕ್ರಿಯಗೊಳಿಸುತ್ತದೆ ಮತ್ತು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗೆಯೇ ನೀವು ಊಟದ ನಂತರ ಸಿಹಿಯನ್ನು ಸೇವಿಸಿದಾಗ, ಅದು ನಿಮ್ಮ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.
ವ್ಯಾಯಾಮಕ್ಕೆ 30 ನಿಮಿಷಗಳ ಮೊದಲು ಸಿಹಿ ತಿಂಡಿಗಳನ್ನು ತಿನ್ನಲು ಉತ್ತಮ ಸಮಯ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ವ್ಯಾಯಾಮಕ್ಕೆ ಮೊದಲು ನೀವು ಸಿಹಿ ತಿಂಡಿಗಳನ್ನು ಸೇವನೆ ಮಾಡಿದರೆ, ತಕ್ಷಣ ಕ್ಯಾಲೊರಿ ಬರ್ನ್ ಆಗುತ್ತದೆ. ಜೊತೆಗೆ ನೀವು ಮಧ್ಯಾಹ್ನವೂ ಸಿಹಿ ತಿಂಡಿಗಳನ್ನು ಸೇವನೆ ಮಾಡಬಹುದು. ತಜ್ಞರು ಕೂಡ ಇದನ್ನು ಉತ್ತಮ ಸಮಯ ಎನ್ನುತ್ತಾರೆ.
ರಾತ್ರಿ ಊಟದವಾದ ನಂತರ ಸಿಹಿ ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಮಲಗುವ ಮೊದಲು ತಿನ್ನುವುದರಿಂದ ಇದು ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ಕ್ಯಾಲೊರಿ ಹೆಚ್ಚಾಗುತ್ತದೆ. ನಿದ್ರೆ ಮಾಡುವ ಸಮಯದಲ್ಲಿ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ ಇದರಿಂದ ಕೊಬ್ಬು ಶೇಖರಣೆಯಾಗುತ್ತದೆ.
ಊಟದ ಬಳಿಕ ಬೆಲ್ಲದ ಸೇವನೆಯನ್ನು ಹಿರಿಯರ ಕಾಲದಿಂದಲೂ ಸಾಮಾನ್ಯವಾಗಿ ಶಿಫಾರಸು ಮಾಡಲ್ಪಟ್ಟಿದೆ. ಆದರೆ ಆಯುರ್ವೇದದ ಪ್ರಕಾರ ಇದು ಸರಿಯಲ್ಲ ಎಂದು ನಿಮಗೆ ತಿಳಿದಿದೆಯೇ? ನಾವು ಆಯುರ್ವೇದ ತಜ್ಞರನ್ನು ಕೇಳಿದರೆ, ಊಟವಾದ 30 ನಿಮಿಷಗಳ ನಂತರ ಅಥವಾ ಗರಿಷ್ಠ ಒಂದು ಗಂಟೆಯ ನಂತರ ಸಿಹಿ ಸೇವಿಸಿ ಎಂದು ಹೇಳುತ್ತಾರೆ.
ಡಾ ರೇಖಾ ಹೇಳುತ್ತಾರೆ, “ಓಣಂ ಸಧ್ಯದ ಸಮಯದಲ್ಲಿ, ನಮಗೆ ಸಾಮಾನ್ಯವಾಗಿ ಸಿಹಿಯಾಗಿರುವ ಬೆಲ್ಲ ಮತ್ತು ಬಾಳೆಹಣ್ಣಿನ ಖಾದ್ಯವನ್ನು ನೀಡಲಾಗುತ್ತದೆ. ಬೆಲ್ಲವು ಒಬ್ಬ ವ್ಯಕ್ತಿಗೆ ಹಾನಿ ಮಾಡದ ಒಂದು ವಸ್ತುವಾಗಿದೆ, ಆದರೆ ಅದನ್ನು ಸಹ ಮಿತವಾಗಿ ತೆಗೆದುಕೊಳ್ಳಬೇಕು.