ಫೆಬ್ರವರಿ 23 ರಿಂದ ಫೆಬ್ರವರಿ 27ರ ವರೆಗೆ ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯ ನಡೆಯಲಿದೆ. ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯ ಜೆಎಸ್ಸಿಎ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.
ಭಾರತ- ಇಂಗ್ಲೆಂಡ್ ಟಿಸ್ಟ್ ಸರಣಿಯ ನಾಲ್ಕನೇ ಪಂದ್ಯದ ಲೈವ್ ಸ್ಟ್ರೀಮ್ JioCinema ಅಪ್ಲಿಕೇಶನ್ನಲ್ಲಿ ಲಭ್ಯವಿರುತ್ತದೆ. ಸ್ಪೋರ್ಟ್ಸ್ 18 ನೆಟ್ವರ್ಕ್ನಲ್ಲಿಯೂ ಪಂದ್ಯವನ್ನು ಲೈವ್ ಆಗಿ ವೀಕ್ಷಿಸಬಹುದು.
ಭಾರತ ಹಾಗೂ ಇಂಗ್ಲೆಂಡ್ ಟಿಸ್ಟ್ ಸರಣಿಯ ನಾಲ್ಕನೇ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.
ಇನ್ನೂ ರಾಜ್ಕೋಟ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು ನಾಲ್ಕನೇ ದಿನದಲ್ಲೇ ಗೆದ್ದುಕೊಂಡಿದೆ. ಪಂದ್ಯ ಗೆಲ್ಲಲು ಟೀಮ್ ಇಂಡಿಯಾ (Team India) ಇಂಗ್ಲೆಂಡ್ಗೆ 557 ರನ್ಗಳ ಕಠಿಣ ಗುರಿ ನೀಡಿತ್ತು. ಆದರೆ, ಭಾರತದ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಇಂಗ್ಲೆಂಡ್ 122 ರನ್ಗಳಿಗೆ ಆಲೌಟ್ ಆಯಿತು. ರೋಹಿತ್ ಪಡೆ 434 ರನ್ಗಳ ದಾಖಲೆಯ ಜಯ ಸಾಧಿಸಿತು. ಬ್ಯಾಟಿಂಗ್ನಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಸರ್ಫರಾಜ್ ಖಾನ್ ಸಂಚಲನ ಮೂಡಿಸಿದರೆ, ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ ತಮ್ಮ ಕೆಲಸ ಪೂರೈಸಿದರು. ಇದರೊಂದಿಗೆ ಭಾರತ ತಂಡ ಈ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.