ತುಮಕೂರು: ಚುನಾವಣೆ ಬಂದಾಗ ಬಿಜೆಪಿಗರು (BJP) ಯಾವುದಾರೂ ಒಂದು ಗಲಾಟೆಯನ್ನ ಸೃಷ್ಟಿ ಮಾಡ್ತಾರೆ. ಅಂದು ಪುಲ್ವಾಮಾ ದಾಳಿ (Pulwama Attack) ಮಾಡಿಸಿದ್ದು ಬಿಜೆಪಿಗರೇ ಎಂದು ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ (SR Srinivas) ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪುಲ್ವಾಮಾ ದಾಳಿ ಮಾಡಿಸಿದ್ದು, ಬಿಜೆಪಿಗರೇ, ಚುನಾವಣೆ ಬಂದಾಗ ಯಾವುದಾರೂ ಒಂದು ಗಲಾಟೆ ಸೃಷ್ಟಿ ಮಾಡಿಸುತ್ತಾರೆ. ಸ್ಮೋಕ್ ಬಾಂಬ್ ಪ್ರಕರಣ (Smoke Bomb Parliament) ವಿಚಾರದಲ್ಲಿಯೂ ಪಾಸ್ ಕೊಟ್ಟಿದ್ದು ಪ್ರತಾಪ್ ಸಿಂಹ. ಅದೇ ಪಾಸನ್ನ ಪೀರ್ ಸಾಬ್ನೋ ಅಥವಾ ಕಾಂಗ್ರೆಸ್ನವರೋ ಕೊಟ್ಟಿದ್ದರೇ ಅದರ ಲಾಭವನ್ನ ಬಿಜೆಪಿಯವರೇ ಪಡೆಯುತ್ತಿದ್ದರು. ಈ ದೇಶದಲ್ಲಿ ಎಷ್ಟು ಗಲಾಟೆ ಮಾಡಿಸುತಿದ್ರು ಎಂದು ಕಿಡಿ ಕಾರಿದ್ದಾರೆ.
Turkish MP Hasan Bitmez: ಸಂಸತ್ತಿನಲ್ಲಿ ಮಾತನಾಡುತ್ತಿರುವಾಗಲೇ ಹೃದಯಾಘಾತವಾಗಿ ಮೃತಪಟ್ಟ ಸಂಸದ..!
ಸಂಸದ ಪ್ರತಾಪ್ ಸಿಂಹನನ್ನ ವಿಚಾರಣೆ ಮಾಡುತ್ತಿಲ್ಲ. ಯಾವ ಮೂಲದಿಂದ ಹೇಗೆ ಪಾಸ್ ಕೊಟ್ಟ ಅನ್ನೋದನ್ನ ತನಿಖೆ ಮಾಡಿಸಬೇಕು. ಸಂಸದ ಸದಸ್ಯತ್ವದಿಂದಲೇ ಪ್ರತಾಪ್ ಸಿಂಹನನ್ನ ವಜಾಗೊಳಿಸಬೇಕು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ಎಷ್ಟು ಲೂಟಿ ಮಾಡಿದ್ರೂ ಪರ್ವಾಗಿಲ್ಲ, ಬೇರೆ ಪಕ್ಷದವರು ನ್ಯಾಯಯುತವಾಗಿದ್ದರೂ ಅವರ ಮೇಲೆ ದಾಳಿ ನಡೆಸುತ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ..