ಹಾಸನ:- ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡರ ವ್ಹೀಲಿಂಗ್ ಹೆಚ್ಚಾಗಿದ್ದು, ವಾಹನ ಸವಾರರಿಗೆ ಫಜೀತಿ ಉಂಟಾಗಿದೆ.
ಒಂದು ಬೈಕ್ನಲ್ಲಿ 2-3 ಜನ ಕೂತು ರಸ್ತೆ ಮಧ್ಯೆ ವ್ಹೀಲಿಂಗ್ ಮಾಡಿದ್ದಾರೆ. ನಾಲ್ಕೈದು ಬೈಕ್ಗಳಲ್ಲಿ ಬಂದ ಯುವಕರು ವ್ಹೀಲಿಂಗ್ ಮಾಡುತ್ತಾ ಇತರೆ ಸವಾರರಿಗೆ ತೊಂದರೆ ಕೊಡುತ್ತಿದ್ದಾರೆ. ರಸ್ತೆಯಲ್ಲಿ ಬರುವ ಇತರೆ ವಾಹನಗಳಿಗೆ ದಾರಿ ಬಿಡದೆ ಪುಂಡಾಟವಾಡುತ್ತಿದ್ದಾರೆ. ಯುವಕರು ವ್ಹೀಲಿಂಗ್ ಮಾಡುತ್ತಿರುವ ದೃಶ್ಯವನ್ನು ಕಾರಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನಿತ್ಯವೂ ಇಂತಹ ವ್ಹೀಲಿಂಗ್ ಪುಂಡರಿಂದ ವಾಹನ ಸವಾರರಿಗೆ ಫಜೀತಿಯಾಗಿದೆ. ಈ ಪುಂಡರಿಂದ ವಾಹನ ಸವಾರರು ಪ್ರಾಣಾಪಾಯ ಭೀತಿಯಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಪುಂಡರು ಕಿಲೋಮೀಟರ್ಗಟ್ಟಲೆ ವ್ಹೀಲಿಂಗ್ ಮಾಡುತ್ತಾ ಜನರಿಗೆ ತೊಂದರೆ ಕೊಡುತ್ತಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬಂದಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)