ವಾಟ್ಸಪ್ ನೂತನ ಅಪ್ ಡೇಟ್ ನಲ್ಲಿ ವಿಡಿಯೊ ಕಾಲ್ ವೇಳೆ ಸ್ಕ್ರೀನ್ ಶೇರಿಂಗ್ ಫೀಚರ್ ಪರಿಚಯಿಸಿದೆ.ವಾಟ್ಸಪ್ ನಲ್ಲಿ ವಿಡಿಯೊ ಕಾಲ್ ವೇಳೆ ಸ್ಕ್ರೀನ್ ಶೇರಿಂಗ್ ಫೀಚರ್ ಸಕ್ರಿಯಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ವಿಡಿಯೊ ಕಾಲ್ ವೇಳೆ ಬಳಕೆದಾರರು, ‘ಶೇರಿಂಗ್’ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ನಿರ್ದಿಷ್ಟ ಅಪ್ಲಿಕೇಶನ್ ಅಥವಾ ಸಂಪೂರ್ಣ ಪರದೆಯನ್ನು ಹಂಚಿಕೊಳ್ಳುವ ಆಯ್ಕೆ ಮಾಡುವ ಮೂಲಕ ಸ್ಕ್ರೀನ್ ಹಂಚಿಕೆಯನ್ನು ಪ್ರಾರಂಭಿಸಬಹುದು. ಕೆಲಸದ ನಿಮಿತ್ತ ಡಾಕ್ಯುಮೆಂಟ್ಗಳನ್ನು ಹಂಚಿಕೊಳ್ಳುವುದು, ಕುಟುಂಬದೊಂದಿಗೆ ಚಿತ್ರಗಳನ್ನು ಹಂಚಿಕೊಳ್ಳುವುದು, ರಜೆ ಕುರಿತು ಯೋಜಿಸುವುದು ಅಥವಾ ಸ್ನೇಹಿತರೊಂದಿಗೆ ಆನ್ಲೈನ್ನಲ್ಲಿ ಶಾಪಿಂಗ್ ಮಾಡುವುದು ಮುಂತಾದ ಸಂದರ್ಭ ವಿಡಿಯೊ ಕರೆ ಸಮಯದಲ್ಲಿ ನಿಮ್ಮ ಪರದೆಯ ಲೈವ್ ವೀಕ್ಷಣೆಯನ್ನು ಹಂಚಿಕೊಳ್ಳಲು ಸ್ಕ್ರೀನ್ ಶೇರಿಂಗ್ ಫೀಚರ್ ನಿಮಗೆ ಅನುಮತಿಸುತ್ತದೆ’ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.