ದರ್ಶನ್ ಭೇಟಿ ಮಾಡಲು ಬಂದರೆ ಒಪ್ಪುತ್ತೀರಾ? ಎಂಬ ಪ್ರಶ್ನೆಗೆ ರೇಣುಕಾಸ್ವಾಮಿ ತಂದೆ ಅವರದ್ದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಕೊಲೆಗಡುಗ ಸರ್ಕಾರ : ಎಂ.ಪಿ ರೇಣುಕಾಚಾರ್ಯ!
ರೇಣುಕಾಸ್ವಾಮಿ ಕುಟುಂಬದವರನ್ನು ದರ್ಶನ್ ಭೇಟಿ ಮಾಡಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ವದಂತಿ ಹಬ್ಬಿದೆ. ಆ ಬಗ್ಗೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಪ್ರತಿಕ್ರಿಯಿಸಿದ್ದಾರೆ. ‘ಫೇಸ್ಬುಕ್ ಎಂದರೆ ಏನು ಅಂತ ನಮಗೆ ತಿಳಿದಿಲ್ಲ. ಯಾರೂ ಸುಳ್ಳು ಸುದ್ದಿ ಹಬ್ಬಿಸಬೇಡಿ. ನಮಗೆ ಈಗಾಗಲೇ ನೋವು ಆಗಿದೆ. ದರ್ಶನ್ ಭೇಟಿ ಮಾಡಲು ಬಂದರೆ ಆ ಬಗ್ಗೆ ನಾನು ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಮ್ಮ ಹಿತೈಷಿಗಳು ಹಾಗೂ ಬಂಧುಗಳು ತೀರ್ಮಾನ ಮಾಡುತ್ತಾರೆ’ ಎಂದು ಕಾಶಿನಾಥಯ್ಯ ಹೇಳಿದ್ದಾರೆ