ಮೂರು ಹೊತ್ತು ಅನ್ನ ತಿನ್ನುವ ಅಭ್ಯಾಸ ನಿಮಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ಚಪಾತಿ ಅಥವಾ ರೊಟ್ಟಿ ತಿಂದರೆ ಒಂದು ಮುಷ್ಟಿ ಅನ್ನ ಬೇಕೇ ಬೇಕು ಎನ್ನುವವರಿದ್ದಾರೆ. ಆಗ ಮಾತ್ರ ಊಟ ಪರಿಪೂರ್ಣಗೊಳ್ಳುತ್ತದೆ ಎಂಬುದು ಅವರ ಭಾವನೆ. ಅಂಥವರು ತಿಳಿದಿರಲೇ ಬೇಕಾದ ಒಂದಿಷ್ಟು ಮಾಹಿತಿಗಳು ಇಲ್ಲಿವೆ.
ಅನ್ನ ಹಾಗೂ ಚಪಾತಿಯನ್ನು ಜೊತೆಯಾಗಿ ತಿನ್ನುವುದರಿಂದ ದೇಹದಲ್ಲಿ ಪಿಷ್ಟದ ಪ್ರಮಾಣ ಹೆಚ್ಚುತ್ತದೆ. ಮೂರು ಹೊತ್ತು ಅನ್ನವನ್ನು ಸೇವನೆ ಮಾಡುವುದರಿಂದ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಅಕ್ಕಿಯಲ್ಲಿ ನಾರಿನಂಶ ಕಡಿಮೆ ಇರುವುದರಿಂದ ಅದನ್ನು ತಿಂದ ಬಳಿಕ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಅನ್ನ ಸೇವನೆಯಿಂದ ನೇರವಾಗಿ ಬೊಜ್ಜು ಬೆಳೆಯದಿದ್ದರೂ ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರಮಾಣಕ್ಕಿಂತ ಹೆಚ್ಚಿನ ಕ್ಯಾಲರಿಗಳನ್ನು ಸೇವನೆ ಮಾಡಿದಾಗ ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ ಹಾಗೂ ಕ್ರಮೇಣ ತೂಕ ಹೆಚ್ಚುತ್ತದೆ. ಒಂದು ತಿಂಗಳ ಕಾಲ ನೀವು ಅನ್ನ ಸೇವನೆಯನ್ನು ತ್ಯಜಿಸುವುದರಿಂದ ಅಥವಾ ಕಡಿಮೆ ಮಾಡುವುದರಿಂದ ನಿಮ್ಮ ದೇಹ ತೂಕ ಕಡಿಮೆಯಾಗುವುದು ನಿಶ್ಚಿತ. ಇನ್ನು ಕೆಲವರು ಅನ್ನವನ್ನು ಮತ್ತೆ ಬಿಸಿ ಮಾಡಿ ಸೇವನೆ ಮಾಡುತ್ತಾರೆ, ಇದು ಫುಡ್ ಪಾಯಿಸ್ ನಿಂಗ್ ಗೆ ಕಾರಣವಾಗುತ್ತದೆಯಂತೆ. ಅದರಲ್ಲೂ ಫ್ರಿಜ್ ನಲ್ಲಿ ಶೇಖರಿಸಿಟ್ಟ ಅನ್ನವನ್ನು ಮರುದಿನ ಮತ್ತೆ ಬಿಸಿ ಮಾಡಿ ಸೇವನೆ ಮಾಡುವುದು ಖಂಡಿತ ಒಳ್ಳೆಯದಲ್ಲ.