ಬೆಂಗಳೂರು: ಮಡಿವಾಳ ಪೊಲೀಸರಿಂದ ಕುಖ್ಯಾತ ಮನೆಗಳ್ಳನನ್ನು ಅರೆಸ್ಟ್ ಮಾಡಲಾಗಿದೆ. ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ(37) ಬಂಧಿತ ಆರೋಪಿಯಾಗಿದ್ದು, ಆರೋಪಿಗೆ ಪ್ರಖ್ಯಾತ ನಟಿಯ ಜೊತೆಗೂ ನಂಟು ಹೊಂದಿದ್ದನು ಎಂದು ತಿಳಿದುಬಂದಿದೆ. ಆರೋಪಿ ಪಂಚಾಕ್ಷರಿ ಸ್ವಾಮಿಗೆ ಮದುವೆಯಾಗಿದ್ದರೂ. ಹುಡುಗಿಯರ ಶೋಕಿ ಮಾತ್ರ ಕಡಿಮೆಯಾಗಿರಲಿಲ್ಲ.
ಪೊಲೀಸರ ವಿಚಾರಣೆ ವೇಳೆ, ಮನೆಗಳ್ಳತನದಿಂದ ಕೋಲ್ಕತ್ತಾದಲ್ಲಿ ಪ್ರೇಯಸಿಗೆ 3 ಕೋಟಿ ರೂ. ಬೆಲೆಬಾಳುವ ಮನೆ ಖರೀದಿಸಿ ಕೊಟ್ಟಿದ್ದ. ಅಷ್ಟೇ ಅಲ್ಲದೇ ಬಾಲಿವುಡ್ ಸೇರಿದಂತೆ ಪ್ರಖ್ಯಾತ ಸಿನಿಮಾ ನಟಿಯರ ಬಗ್ಗೆ ಮೋಹ ಬೆಳೆಸಿಕೊಂಡಿದ್ದ. ಅವರಿಗಾಗಿ ಕೋಟ್ಯಂತರ ರೂ. ಖರ್ಚು ಮಾಡಿ ಮೋಜು-ಮಸ್ತಿ ಮಾಡುತ್ತಿದ್ದ ಎಂದು ಹಲವು ಕುತೂಹಲಕಾರಿ ವಿಷಯಗಳು ಬೆಳಕಿಗೆ ಬಂದಿವೆ.
Pumpkin Seeds: ನಿಮಗೆ ಗೊತ್ತೆ..? ಕುಂಬಳಕಾಯಿ ಬೀಜಗಳಿಂದ ನಿವಾರಣೆಯಾಗುತ್ತೆ ಈ ಸಮಸ್ಯೆಗಳು!
ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಆರೋಪಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಕಳೆದ ತಿಂಗಳ 9 ರಂದು ಬೆಂಗಳೂರಿನ ಮಡಿವಾಳದಲ್ಲಿ ಮನೆಗಳ್ಳತನ ಮಾಡಿ ಎಸ್ಕೇಪ್ ಆಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.