ತುಮಕೂರು:- ಸರ್ಕಾರಿ ಜಾಗದಲ್ಲಿ ಹನುಮಾನ್ ಧ್ವಜ ಹಾರಿಸಲು ಅವಕಾಶವಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಷ್ಟ್ರಧ್ವಜ ಹಾರಿಸುತ್ತೇವೆಂದು ಗ್ರಾಮ ಪಂಚಾಯಿತಿ ನಿಂದ ಅನುಮತಿ ಪಡೆದಿದ್ದರು. ಆದರೆ ರಾಷ್ಟ್ರಧ್ವಜ ಬದಲು ಹನುಮ ಧ್ವಜ ಹಾರಿಸಿದ್ದಾರೆ. ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಿದ್ದರಿಂದ ತೆರವುಗೊಳಿಸಿದ್ದಾರೆ ಎಂದು ಇದಾದ ಬಳಿಕ ಕೆಲ ಪ್ರತಿಭಟನೆಗಳು, ಬೇರೆಲ್ಲಾ ಆಗಿವೆ ಎಂದು ಹೇಳಿದ್ದಾರೆ.
ಲಘು ಲಾಠಿಪ್ರಹಾರ ನಡೆಸಿ ರಾಷ್ಟ್ರೀಯ ಧ್ವಜವನ್ನ ಹಾರಿಸಲಾಗಿದೆ. ಸಮಾಜದಲ್ಲಿ ಇದು ಒಂದು ರೀತಿಯಲ್ಲಿ ಶಾಂತಿ ಕದಡುವ ಕೆಲಸವಾಗಿದೆ. ಕಾನೂನಿಗೆ ವಿರುದ್ಧವಾದ ಕೆಲಸವೆಂದು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ವಿಚಾರವಾಗಿ ಮಾತನಾಡಿದ ಅವರು, ಪದೇ ಪದೇ ಇದನ್ನ ಹೇಳುತ್ತಿದ್ದಾರೆ. ಅದಕ್ಕೇನು ಹೆಚ್ಚು ಅರ್ಥ ಕಲ್ಪಿಸುವುದು ಇಲ್ಲ. ಪದೇ ಪದೇ ಕಾಂಗ್ರೆಸ್ನವ್ರು, ರಾಜ್ಯ ಸರ್ಕಾರ ಹಿಂದೂ ವಿರೋಧಿಗಳು ಅಂತಾ ಹೇಳುತ್ತಿದ್ದಾರೆ. ಆದರೆ ನಾವು ಕೂಡ ಹೇಳುತ್ತಿದ್ದೇವೆ. ನಾವು ಕೂಡ ಹಿಂದೂಗಳೇ, ನಾವೇನು ಬೇರೆಯವರಲ್ಲ.
ನೀವು ಕಾನೂನಿನ ಚೌಕಟ್ಟಿನಲ್ಲಿರಿ ಅಂತಾ ನಾವು ಹೇಳುತ್ತಿದ್ದೇವೆ ಅಷ್ಟೇ ವ್ಯತ್ಯಾಸ ನಮಗೂ, ಅವರಿಗೂ. ಈ ರಾಜ್ಯದಲ್ಲಿ ಕಾನೂನಿದೆ, ಕಾನೂನನ್ನ ಮುರಿಯುವ ಕೆಲಸ ಮಾಡಬೇಕಡಿ ಎಂದು ನಾವು ಹೇಳುತ್ತಿದ್ದೇವೆ. ಅವರು ರಾಜಕೀಯ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ಇದು ಕೂಡ ಅಂಥದ್ದೇ ಒಂದು ಘಟನೆ. ಅದು ಪೂರ್ವನಿಯೋಜಿತನೋ, ಏನೋ ಅನ್ನೋದು ನನಗೆ ಗೊತ್ತಿಲ್ಲ. ಅವರು ಅನುಮತಿ ಪಡೆದಿದ್ದೆ ಬೇರೆಯದಕ್ಕೆ, ಮಾಡಿದ್ದೆ ಬೇರೆ ಎಂದಿದ್ದಾರೆ.