ಹುಬ್ಬಳ್ಳಿ:- ವಕ್ಸ್ ಆಸ್ತಿ ಕಬಳಿಕೆಯ ಬಗ್ಗೆ ಮೌನವಾಗಿರಲು ಬಿ.ವೈ. ವಿಜಯೇಂದ್ರ ಅವರು ಅನ್ವರ್ ಮಾಣಿಪ್ಪಾಡಿ ಅವರಿಗೆ 150 ಕೋಟಿ ರೂ. ಆಮಿಷವೊಡ್ಡಿದ್ದರು ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿರುವುದು ಅಸಂಬದ್ಧ ಹೇಳಿಕೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಟೀಕಿಸಿದ್ದಾರೆ.
ಕರ್ನಾಟಕದ ಈ ಜಿಲ್ಲೆಗಳಲ್ಲಿ 2 ದಿನಗಳ ಕಾಲ ಭಾರೀ ಮಳೆ; ಎಲ್ಲೆಲ್ಲಿ ಗೊತ್ತಾ?
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಕಾಂಗ್ರೆಸ್ ತಾನು ನಡೆಸಿರುವ ಹಗರಣಗಳನ್ನು ಮುಚ್ಚಿಕೊಳ್ಳಲು ಹೀಗೆಲ್ಲ ಆರೋಪ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ. 150 ಕೋಟಿ ರೂ. ಅಲ್ಲ, 1500 ಕೋಟಿ ರೂ. ಎಂದು ಹೇಳಬೇಕಿತ್ತು ಎಂದರು.
ಕೋವಿಡ್ ಅವಧಿಯಲ್ಲಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಬೆದರಿಸುವ ತಂತ್ರ ಅನುಸರಿಸುತ್ತಿದೆ. ಹಗರಣದಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿ.ವೈ. ವಿಜಯೇಂದ್ರ ಹಾಗೂ ಡಾ. ಸುಧಾಕರ ಭಾಗಿಯಾಗಿದ್ದಾರೆ ಎಂದು ಹೇಳುತ್ತಿದೆ. ಯಾರ್ಯಾರ ಹೆಸರು ಪ್ರಸ್ತಾಪವಾಗಿದೆಯೋ ಅವರೆಲ್ಲ ಮಾನಹಾನಿ ಪ್ರಕರಣ ದಾಖಲಿಸಲಿ ಎಂದು ಜೋಶಿ ಸ್ವಪಕ್ಷೀಯರಿಗೆ ಸಲಹೆ ನೀಡಿದರು.
ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರವಾಗಿ ನನಗೆ ಬಸನಗೌಡ ಯತ್ನಾಳ, ಅರವಿಂದ ಬೆಲ್ಲದ, ಮಠಾಧೀಶರು ಫೋನ್ ಮಾಡಿದ್ದಾರೆ. ಅವರಿಂದ ನನಗೆ ಬಂದಿರುವ ಮಾಹಿತಿ ಪ್ರಕಾರ ಶಾಂತಿಯುತ ಹೋರಾಟ ನಡೆದಿತ್ತು. ಹೋರಾಟಗಾರರನ್ನು ವೈರಿಗಳಂತೆ ಸರ್ಕಾರ ನಡೆಸಿಕೊಂಡಿದೆ. ಹೋರಾಟಗಾರರನ್ನು ತಡೆಯುವುದಿದ್ದರೆ ಸರ್ಕಾರ ಮಿನಿಮಮ್ ಬಲ ಪ್ರಯೋಗ ಮಾಡಬಹುದಿತ್ತು. ಅದನ್ನು ಬಿಟ್ಟು ಮ್ಯಾಕ್ಸಿಮಮ್ ಬಲ ಪ್ರಯೋಗ ಮಾಡಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು