ಬಿಗ್ ಬಾಸ್ ಸೀಸನ್ 11ರ ಆಟ ದಿನದಿಂದ ದಿನಕ್ಕೆ ರೋಚಕ ಘಟ್ಟ ತಲುಪುತ್ತಿದೆ. ಇನ್ನೆನ್ನೂ ಕೆಲವೇ ವಾರಗಳಲ್ಲಿ ಫಿನಾಲೆ ಇರಲಿದ್ದು ಈ ಮಧ್ಯೆ ಸ್ಪರ್ಧಿಗಳ ಕುಟುಂಬ ಸದಸ್ಯರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಹಾಗೂ ಅಕ್ಕನ ಮಗಳು ತಾನ್ವಿ ಹಾಗೂ ಅಮ್ಮ ಎಂಟ್ರಿ ಕೊಟ್ಟಿದ್ದಾರೆ. ಅಕ್ಕನನ್ನು ನೋಡುತ್ತಿದ್ದಂತೆ ಭವ್ಯಾ ಗೌಡಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಲ್ಲದೆ ಬಿಗ್ ಬಾಸ್ ಮನೆಗೆ ಬಂದ ತ್ರಿವಿಕ್ರಮ್ ತಾಯಿ ಭವ್ಯಾ ಗೌಡ ಬಳಿ ಬಂದು ರಾಧೆ ಕೃಷ್ಣನಂತೆ ಇದ್ದೀರಾ ಎಂದಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ನಡುವೆ ಹೆಚ್ಚು ಆಪ್ತತೆ ಇದೆ. ಇಬ್ಬರೂ ಪರಸ್ಪರರ ಬಗ್ಗೆ ಅತೀವ ಕಾಳಜಿ ತೋರುತ್ತಾರೆ. ಮೊದಲಿಗೆ ಭವ್ಯಾ ಅವರ ತಾಯಿ ಹಾಗೂ ಅಕ್ಕ ದಿವ್ಯ ಬಂದರು. ಡಾಕ್ಟರ್ ವೇಷದಲ್ಲಿ ಬಂದು ಕುಳಿತುಕೊಂಡಿದ್ದಾ ಅಕ್ಕನನ್ನು ನೋಡಿ ಭವ್ಯಾ ಗೌಡ ಶಾಕ್ ಆಗಿದ್ದಾರೆ.
ನೀನು ಎಲ್ಲರ ಜೊತೆಗೆ ಇರು. ಈಗ ಇಲ್ಲಿ ಕಮ್ಮಿ ಜನ ಆಗುತ್ತಿದ್ದಾರೆ ಹೀಗಾಗಿ ಎಲ್ಲ ಕಡೆ ಇರು. ವೈಯಕ್ತಿಕವಾಗಿ ಆಟ ಆಡೋದನ್ನು ಕಲಿ ಎಂದು ಸಲಹೆ ಕೊಟ್ಟರು. ಭವ್ಯಾ ಅವರ ತಾಯಿ, ಮಗಳಿಗೆ ಯಾವುದಾದರೂ ನಿರ್ಧಾರ ಮಾಡಲು ಬೇರೆಯವರ ಸಹಾಯ ತೆಗೆದುಕೊಳ್ಳುವುದು ಕಡಿಮೆ ಮಾಡು ಎಂದರು. ಒಳ್ಳೆಯ ಗೆಳೆಯರಾಗಿದ್ದೀರ ಹಾಗೆಯೇ ಇರಿ. ನನಗೆ ಅದರಲ್ಲೇನೂ ವಿಶೇಷ ಅನಿಸಲಿಲ್ಲ. ನನ್ನ ಮಗಳು ಏನೆಂಬುದು ನನಗೆ ಗೊತ್ತಿದೆ ಎಂದರು.
ಇನ್ನು ತ್ರಿವಿಕ್ರಮ್ ಅವರ ತಾಯಿ, ನೀನು ನನ್ನ ಮಗ ಚೆನ್ನಾಗಿ ಆಡುತ್ತಿದ್ದೀರ. ನೀವಿಬ್ಬರೂ ಕೃಷ್ಣ-ರಾಧೆ ಇದ್ದಹಾಗೆ ಇದ್ದೀರ ಎಂದರು. ಅನ್ಯೋನ್ಯವಾಗಿ ಪರಸ್ಪರ ಸ್ನೇಹವಾಗಿ ಇದ್ದೀರ ಎಂದು ಅರ್ಥ ಎಂದಿದ್ದಾರೆ. ತ್ರಿವಿಕ್ರಮ್ ಅನ್ನು ಉದ್ದೇಶಿಸಿ, ಯಾರಿಗಾಗಿಯೂ ನೀನು ಆಟ ಬಿಟ್ಟುಕೊಡಲು ಹೋಗಬೇಡ, ಇದು ಕ್ರಿಕೆಟ್ ಅಲ್ಲ ಎಂದು ತ್ರಿವಿಕ್ರಮ್ ತಾಯಿ ತ್ರಿವಿಕ್ರಮ್ ಒಬ್ಬರಿಗೆ ಸಲಹೆ ನೀಡಿದ್ದಾರೆ.
ಅಮ್ಮನನ್ನ ಭೇಟಿ ಆಗ್ಬೇಕು ಅಂದ್ರೆ, ಮೊದಲು ಈ ಟಾಸ್ಕ್ ಮಾಡ್ಬೇಕು ಅಂತ ಬಿಗ್ ಬಾಸ್ ಒಂದು ಟಾಸ್ಕ್ ಕೊಟ್ಟಿದ್ದರು. ಆ ಟಾಸ್ಟ್ ಅನ್ನ 10 ನಿಮಿಷದಲ್ಲಿಯೇ ಮುಗಿಸೋ ಚಾಲೆಂಜ್ ಕೂಡ ಇದೆ. ಆದರೆ, ಈ ಒಂದು ಟಾಸ್ಕ್ ಮುಗಿಸುವಲ್ಲಿ ತ್ರಿವಿಕ್ರಮ್ ವಿಫಲರಾದ್ರು, ಬಳಿಕ ಮತ್ತೆ ಅಮ್ಮ ವಾಪಸ್ಸು ಬಂದಿದ್ದಾರೆ.
ನನ್ನ ಮಗನನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀಯಾ? ಅಮ್ಮನ ತರ ಇರ್ತಿಯಾ, ಫ್ರೆಂಡ್ ಆಗಿಯೇ ಇರ್ತೀಯಾ , ಇದನ್ನ ನೋಡಿ ತುಂಬಾನೆ ಖುಷಿ ಆಗುತ್ತದೆ. ರಾಧಾ ಕೃಷ್ಣನ ತರವೇ ಇರ್ತೀರಾ ಅಂತಲೇ ತ್ರಿವಿಕ್ರಮ್ ಅಮ್ಮ ಹೇಳುತ್ತಾರೆ. ಇದನ್ನ ಕೇಳಿ ಭವ್ಯ ಗೌಡ ತುಂಬಾನೆ ಖುಷಿಪಡ್ತಾರೆ ಅಂತಲೂ ಹೇಳಬಹುದು.