ಕೊನೆಗೂ ನಾವೆಲ್ಲ ಕಾಯುತ್ತಿದ್ದ ದಿನ ಬಂದಿದೆ. ಗುಲಾಬಿಗಳು, ಪ್ರಸ್ತಾಪಗಳು, ಚಾಕೊಲೇಟ್ಗಳು, ಟೆಡ್ಡಿ ಬೇರ್ಗಳು, ಭರವಸೆಗಳು, ಅಪ್ಪುಗೆಗಳು ಮತ್ತು ಚುಂಬನಗಳನ್ನು ಒಳಗೊಂಡ ದಿನ ಬಂದೇ ಬಿಡ್ತು. ನಾವು ಇಂದು ಪ್ರೇಮಿಗಳ ದಿನವನ್ನು ಸ್ವಾಗತಿಸೋಣ
ಈ ವೇಳೆ ನಮ್ಮ ಸಂಗಾತಿ ಮೆಚ್ಚುವಂತೆ ಯಾವ ರೀತಿಯ ಉಡುಗೊರೆ ನೀಡಬಹುದು ಎಂಬುದು ಹಲವು ಪ್ರೇಮಿಗಳು ತಲೆಕೆಡಿಸಿಕೊಳ್ಳುವ ವಿಷಯ. ನಿಮಗೂ ಆ ಬಗ್ಗೆ ಗೊಂದಲಗಳಿದ್ದರೆ ಕೆಲವು ಸಲಹೆಗಳು ಇಲ್ಲಿವೆ.
ಫೋಟೋ ಫ್ರೇಮ್:
ನಿಮ್ಮ ಸಂಗಾತಿಗೆ ಪರ್ಸನಲೈಸ್ ಮಾಡಿದ ಫೋಟೋ ಫ್ರೇಮ್ ನೀಡಬಹುದು. ನಿಮ್ಮ ಪ್ರೀತಿಗೆ ಭಾವನಾತ್ಮಕ ಸ್ಪರ್ಶ ನೀಡಲು ಕೊಡಬಹುದು
ಮೆತ್ತನೆಯ ಬ್ಲಾಂಕೆಟ್:
ನಿಮ್ಮ ಸಂಗಾತಿಯನ್ನು ಮೃದುವಾದ, ಮೆತ್ತನೆಯ, ಮುದ್ದಾದ ಹೊದಿಕೆಯೊಂದಿಗೆ ಬೆಚ್ಚಗಿನ ಮತ್ತು ಪ್ರೀತಿಯಿಂದ ಕಟ್ಟಿಹಾಕಬಹುದು
ಫೇವರಿಟ್ ಬುಕ್ ಅಥವಾ ಸಿನಿಮಾ:
ನಿಮ್ಮ ಸಂಗಾತಿಗೆ ಇಷ್ಟವಾದ ಪುಸ್ತಕ ಅಥವಾ ಸಿನಿಮಾದ ಸಿಡಿಯನ್ನು ಉಡುಗೊರೆಯಾಗಿ ನೀಡಿ.
ಪೇಂಟಿಂಗ್ಸ್:
ಕುಂಚಗಳೊಂದಿಗೆ ಮಾಡಿದ ಸುಂದರವಾದ ಪೇಂಟಿಂಗ್ ನೀಡಬಹುದು. ನಿಮ್ಮ ಕೈಯಾರೆ ಮಾಡಿದ ಪೇಂಟಿಂಗ್ ನೀಡಿದರೆ ಇನ್ನೂ ಒಳ್ಳೆಯದು