ಗೌತಮ್ ಗಂಭೀರ್ ವೃತ್ತಿಜೀವನದಲ್ಲಿ ಅದೊಂದು ಕನಸು ನನಸಾಗಲೇ ಇಲ್ಲ್ವಂತೆ. ಹಾಗಾದ್ರೆ ಅದು ಯಾವ ಕನಸು ಏನು ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ.
ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕವಾಗಿದೆ. ಜುಲೈ 9, 2024 ರಿಂದ ಅಧಿಕಾರ ವಹಿಸಿಕೊಳ್ಳಲಿರುವ ಗಂಭೀರ್ 2027 ರವರೆಗೆ ಭಾರತ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಎರಡು ವಿಶ್ವಕಪ್ ಹಾಗೂ ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಗಂಭೀರ್ ತಮ್ಮ ವೃತ್ತಿ ಜೀವನದಲ್ಲಿ ಏನೆಲ್ಲ ಸಾಧಿಸಬೇಕೋ ಅದೆಲ್ಲವನ್ನೂ ಸಾಧಿಸಿದರೂ ಟಿ20 ಮಾದರಿಯಲ್ಲಿ ಮಾತ್ರ ಅವರಿಗೆ ಅದೊಂದು ಮೈಲಿಗಲ್ಲನ್ನು ಸಾಧಿಸಲು ಸಾಧ್ಯವಾಗಲಿಲ್ಲ
ಒಮ್ಮೆ ಟಿ20 ವಿಶ್ವಕಪ್ ಗೆದ್ದು ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದರೂ ಗೌತಮ್ ಗಂಭೀರ್ ಎರಡೂ ಟೂರ್ನಿಯಲ್ಲಿ ಶತಕ ಸಿಡಿಸಲಾಗಲಿಲ್ಲ. ಗಂಭೀರ್ 37 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಏಳು ಅರ್ಧಶತಕಗಳನ್ನು ಬಾರಿಸಿದ್ದಾರೆ. ಆದರೆ ಒಂದು ಶತಕವನ್ನು ಗಳಿಸಲು ಸಾಧ್ಯವಾಗಲಿಲ್ಲ.
ಮತ್ತೊಂದೆಡೆ ಐಪಿಎಲ್ನಲ್ಲಿ 154 ಪಂದ್ಯಗಳನ್ನು ಆಡಿರುವ ಗಂಭೀರ್, ಇದರಲ್ಲಿ 36 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಆದರೆ ಇಲ್ಲಿಯೂ ಗಂಭೀರ್ಗೆ ಶತಕ ಬಾರಿಸಲು ಸಾಧ್ಯವಾಗಲಿಲ್ಲ. ಆಕ್ರಮಣಕಾರಿ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದ ಗಂಭೀರ್, ವೇಗವಾಗಿ ರನ್ ಗಳಿಸಲು ಹೆಸರುವಾಸಿಯಾಗಿದ್ದರೂ ಸಹ ಅವರಿಗೆ ಚುಟುಕು ಮಾದರಿಯಲ್ಲಿ ಶತಕ ಬಾರಿಸಲು ಸಾಧ್ಯವಾಗಲಿಲ್ಲ.
ಇನ್ನು ಗೌತಮ್ ಗಂಭೀರ್ ಅವರ ಅಂತರಾಷ್ಟ್ರೀಯ ಟಿ20 ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಈ ಮಾದರಿಯಲ್ಲಿ ಗಂಭೀರ್, 37 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ 36 ಇನ್ನಿಂಗ್ಸ್ಗಳಲ್ಲಿ 27.41 ಸರಾಸರಿ ಮತ್ತು 119.02 ಸ್ಟ್ರೈಕ್ ರೇಟ್ನಲ್ಲಿ 932 ರನ್ ಬಾರಿಸಿದ್ದಾರೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ 75 ಆಗಿದೆ.