ಹಾಸನ:- ಸಿದ್ದರಾಮಯ್ಯಗೆ ಮೂರ್ನಾಲ್ಕು ಸೈಟ್ ಯಾವ ಲೆಕ್ಕ ಎಂದು ಸಚಿವ ಎನ್ ರಾಜಣ್ಣ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು,ಮುಡಾ ಪ್ರಕರಣ ಬಿಜೆಪಿಯ ಸೃಷ್ಟಿ ಅಷ್ಟೇ. ಸಿಎಂ ಆಗಿರೋರಿಗೆ ಮೂರ್ನಾಲ್ಕು ಸೈಟ್ ಯಾವ ಲೆಕ್ಕ ಹೇಳಿ ಎಂದರು.
ಯಾರು ದೂರು ಕೊಟ್ಟು ಹೇಳಿಕೆ ಕೊಡ್ತಿದ್ದಾರೋ ಅವರದ್ದೇ ಪಾತ್ರ ಇದ್ದಂತಿದೆ. ಇನ್ನು ಸ್ವಲ್ಪದಿನ, ಎಲ್ಲವೂ ಆಚೆ ಬರುತ್ತದೆ. ಯಾರದ್ದು ಎಷ್ಟು ಸೈಟು ಇದೆ, ಎಲ್ಲವೂ ಆಚೆ ಬರುತ್ತೆ. ಮುಡಾ ಇರಲಿ, ಬಿಡಿಎ ಇರಲಿ, ಎಲ್ಲೇ ಕಾನೂನು ಬಾಹಿರ ಚಟುವಟಿಕೆ ಆಗಿದ್ದರೂ ಶಿಕ್ಷೆ ಆಗಬೇಕು. ಸಾರ್ವಜನಿಕ ಆಸ್ತಿಯನ್ನು ಯಾರೇ ಲಪಟಾಯಿಸಿದ್ರೂ ಅದು ಮೋಸದ ಕೆಲಸ. ಹಾಗೆ ಮಾಡಿದವರಿಗೆ ಶಿಕ್ಷೆಯಾಗಬೇಕು ಅನ್ನುವವನು ಅಂತ ಸಚಿವರು ಹೇಳಿದ್ದಾರೆ.