ಮೂತ್ರದ ಸೋಂಕು ಹೆಚ್ಚಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಮೂತ್ರ ಕೋಶ ಹಾಗೂ ಗುದದ್ವಾರವು ಸಮೀಪದಲ್ಲಿ ಇರುವುದರಿಂದ ಈ ಸಮಸ್ಯೆಗಳು ಉಂಟಾಗುವುದು ಎನ್ನಲಾಗುವುದು. ಪುರುಷರಿಗೆ ಹೋಲಿಸಿದರೆ ಅವರಲ್ಲಿ ಮೂತ್ರದ ಸೋಂಕು ಕಾಡುವುದು ಕಡಿಮೆ. ಆದರೂ ಕೆಲವು ಕಾರಣಗಳಿಂದಾಗಿ ಪುರುಷರಲ್ಲಿಯೂ ಮೂತ್ರದ ಸೋಂಕು ಕಾಣಿಸಿಕೊಳ್ಳುತ್ತವೆ. ಕೆಲವು ಗಮನಾರ್ಹ ಸಂಗತಿಗಳೇ ಸೋಂಕಿಗೆ ಪ್ರಮುಖ ಕಾರಣಗಳಾಗಿರುತ್ತವೆ ಎಂದು ಸಹ ಹೇಳಲಾಗುವುದು.
ಗಾಳಿ ಗುಳ್ಳೆ ಸೋಂಕಿನಲ್ಲಿ ಬ್ಯಾಕ್ಟೀರಿಯಾಗಳು ಗಾಳಿ ಗುಳ್ಳಿಯ ಮೇಲೆ ದಾಳಿ ಮಾಡುತ್ತವೆ. ಕೆಲವೊಮ್ಮೆ ಬ್ಯಾಕ್ಟೀರಿಯಾಗಳು ಮೂತ್ರಪಿಂಡ ಅಥವಾ ಮೂತ್ರಪಿಂಡದ ಕೋಶದಲ್ಲಿ ಮಾತ್ರ ಹಿಡಿದಿಟ್ಟುಕೊಳ್ಳುತ್ತವೆ. ಈ ಎಲ್ಲಾ ಬಗೆಯ ಸೋಂಕನ್ನು ಮೂತ್ರನಾಳದ ಸೋಂಕು ಎಂದು ಕರೆಯಲಾಗುವುದು. ಈ ಸೋಂಕು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು. ಆದರೆ ಪುರುಷರಲ್ಲಿ ಕಾಣಿಸಿಕೊಂಡಾಗ ಅದರ ತೀವ್ರತೆ ಹೆಚ್ಚಾಗಿರುತ್ತದೆ.
ಸೋಂಕಿನ ಲಕ್ಷಣಗಳು
ಮೂತ್ರದ ಸೋಂಕು ಉಂಟಾದಾಗ ನೋವಿನಿಂದ ಕೂಡಿದ ಮೂತ್ರ ವಿಸರ್ಜನೆ ಮತ್ತು ಸುಡುವ ಸಂವೇದನೆಯಿಂದ ಕೂಡಿರುತ್ತದೆ. ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕು ಎನ್ನುವ ಸಂವೇದನೆ ತೀವ್ರತೆಯನ್ನು ಉಂಟುಮಾಡುತ್ತದೆ. ತೀವ್ರವಾದ ಸೋಂಕು ಉಂಟಾದಾಗ ರಕ್ತದಿಂದ ಕೂಡಿದ ಮೂತ್ರ ವಿಸರ್ಜನೆ ಉಂಟಾಗುವುದು. ತೀವ್ರವಾದ ಬೆನ್ನು ನೋವು, ಜ್ವರ, ವಾಕರಿಕೆ ಮತ್ತು ವಾಂತಿಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಮೂತ್ರದ ಸೋಂಕಿನಿಂದ ರಕ್ಷಿಸಿಕೊಳ್ಳಲು ಕೆಲವು ವಿಧಾನಗಳನ್ನು ಪ್ರಯತ್ನಿಸಿ. ಅದನ್ನು ಹೇಗೆ ಸಂರಕ್ಷಿಸುವುದು ಎಂದು ತಿಳಿಯಿರಿ.
ಮೂತ್ರವನ್ನು ನಿಲ್ಲಿಸಲು ಪ್ರಯತ್ನಿಸಬೇಡಿ.
ಇದನ್ನು ತಪ್ಪಿಸಲು ಸಾಕಷ್ಟು ನೀರನ್ನು ಕುಡಿಯಿರಿ.
ಸೆಕ್ಸ್ ನಂತರ ಗುಪ್ತಾಂಗಗಳನ್ನು ಸ್ವಚ್ಛಗೊಳಿಸಿ.
ಪ್ರತಿ ಬಾರಿ ಮೂತ್ರ ಅಥವಾ ಮಲ ವಿಸರ್ಜನೆ ಬಳಿಕ ಚೆನ್ನಾಗಿ ತೊಳೆಯಿರಿ.
ಯಾವಾಗಲೂ ಸ್ವಚ್ಛ ಮತ್ತು ಆರಾಮದಾಯಕ ಒಳಉಡುಪುಗಳನ್ನು ಧರಿಸಿ.
ಮೂತ್ರನಾಳದ ಸೋಂಕು ನಿವಾರಣೆ ಮನೆಮದ್ದುಗಳು
- ಆಪಲ್ ವಿನೆಗರ್ ಸಿಡರ್ ನಲ್ಲಿ ಪೊಟಾಶಿಯಂ ಮತ್ತು ಇತರ ಲಾಭದಾಯಕ ಖನಿಜಾಂಶಗಳು ಸಮೃದ್ಧವಾಗಿದೆ. ಮೂತ್ರನಾಳದ ಸೋಂಕುಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ. ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿಕೊಳ್ಳಬಹುದು.
- ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯುತ್ತದೆ. ನೆಲ್ಲಿಕಾಯಿ ಜ್ಯೂಸ್ ಅನ್ನು ದಿನಕ್ಕೆ 4-5 ಬಾರಿ ಕುಡಿಯಿರಿ.
- ಪ್ರತಿದಿನ ಅರ್ಧ ಲೋಟ ಕ್ಯಾನ್ ಬೆರಿ ಜ್ಯೂಸ್ ಕುಡಿಯುವುದರಿಂದ ಮೂತ್ರದ ಸೋಂಕು ನಿವಾರಣೆಯಾಗಿ ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯುತ್ತದೆ.
- ಅಡುಗೆ ಸೋಡಾ ಮೂತ್ರದ ಆಮ್ಲವನ್ನು ಸಮತೋಲನದಲ್ಲಿರಿಸುತ್ತದೆ ಮತ್ತು ನೋವು ನಿವಾರಣೆ ಮಾಡುತ್ತದೆ.
- ಟೀ ಟ್ರೀ ಆಯಿಲ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
- ದಿನಕ್ಕೆ ಒಂದು ಕಪ್ ಅನಾನಸ್ ಹಣ್ಣನ್ನು ತಿನ್ನುವ ಮೂಲಕ ಯುಟಿಐ ಅನ್ನು ತಡೆಗಟ್ಟಬಹುದು. ತಾಜಾ ಜ್ಯೂಸ್ ಗಳನ್ನೂ ಕುಡಿಯಬಹುದು.
- ಪ್ರತಿದಿನ ಬಿಸಿ ನೀರು ಮೂತ್ರಕೋಶದ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಸೋಂಕಿನಿಂದ ನೋವನ್ನು ನಿವಾರಿಸುತ್ತದೆ.