ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಪಟ್ಟಣಗೆರೆ ಶೆಡ್ಗೆ ಕರೆದುಕೊಂಡು ಬಂದು ಹತ್ಯೆ ಮಾಡಿದ್ದರು. ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸರು ಯಾವುದೇ ಸಣ್ಣ ಸಾಕ್ಷ್ಯವನ್ನೂ ಬಿಡದೆ ಕಲೆ ಹಾಕಿದ್ದಾರೆ. ಪ್ರತ್ಯೇಕ ತಂಡವನ್ನೇ ರಚಿಸಿಕೊಂಡಿರುವ ಪೊಲೀಸರು, ಇದುವರೆಗೆ ಬರೋಬ್ಬರಿ 180 ಸಾಕ್ಷ್ಯಗಳನ್ನು ಸಂಗ್ರಹ ಮಾಡಿದ್ದಾರೆ. ಯಾವುದೇ ಒತ್ತಡಕ್ಕೂ ಮಣಿಯದೇ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದಾರೆ.
ಇನ್ನೂ ನಟ ದರ್ಶನ್ ಅವರ ಸಿನಿಮಾ ಜೀವನದಲ್ಲಿ 2004ರಲ್ಲಿ ದೊಡ್ಡ ತಿರುವು ನೀಡಿದ ಕಲಾಸಿಪಾಳ್ಯ ಚಿತ್ರದ ನಿರ್ದೇಶಕ ಓಂ ಪ್ರಕಾಶ್ ರಾವ್ ಮಾತನಾಡಿದ್ದಾರೆ. 2004 ರಿಂದ 2011ರವರೆಗೂ ದರ್ಶನ್ ಅವರ ಆಪ್ತ ವಲಯದ ಸ್ನೇಹಿತರದಲ್ಲಿ ಗುರುತಿಸಿಕೊಂಡಿದ್ದ ಓಂಪ್ರಕಾಸ್ ರಾವ್, ಕಲಾಸಿಪಾಳ್ಯ ಅಲ್ಲದೆ ದರ್ಶನ್ ಜೊತೆ ಅಣ್ಣಾವ್ರು, ಅಯ್ಯ, ಮಂಡ್ಯ, ಯೋಧ ಹಾಗೂ ಪ್ರಿನ್ಸ್ ಚಿತ್ರವನ್ನು ನಿರ್ದೇಶನ ಮಾಡಿದ್ದರು.
ಯೋಧ ಹಾಗೂ ಪ್ರಿನ್ಸ್ ಚಿತ್ರದಲ್ಲಿ ದರ್ಶನ್ಗೆ ಜೋಡಿಯಾಗಿ ನಟಿ ನಿಕಿತಾ ತುಕ್ರಾಲ್ ಕಾಣಿಸಿಕೊಂಡಿದ್ದರು. ಇಂದು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ವೇಳೆ ದರ್ಶನ್ ಅವರ ಹಿಟ್ ಸಿನಿಮಾಗಳ ನಿರ್ದೇಶಕ ಓಂ ಪ್ರಕಾಶ್ ಮಾತನಾಡಿದ್ದು, ದರ್ಶನ್ರಿಂದ ಇಂಥ ಕೃತ್ಯ ನಡೆಯಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಟಿ ನಿಕಿತಾ ಜೊತೆ ದರ್ಶನ್ಗೆ ಉತ್ತಮ ಸ್ನೇಹವಿತ್ತು. ಆದರೆ, ಅದನ್ನು ನಾನು ವಿರೋಧಿಸಿದೆ. ನಿಖಿತಾಗೆ ಈ ವಿಚಾರದಲ್ಲಿ ಬುದ್ದಿ ಹೇಳಿದೆ. ಆದರೆ ನಿಖಿತಾ ಮಾತ್ರ ದರ್ಶನ್ ಬಳಿ ನನ್ನ ಬಗ್ಗೆ ದೂರು ಹೇಳಿದರು. ಆ ನಂತರ ನನ್ನ ದರ್ಶನ್ ಸಂಬಂಧ ದೂರ ಆಯ್ತು. ನಿಖಿತಾ ವಿಷಯದಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ತೊಂದರೆ ಆಗುತ್ತಿದೆ ಅಂತ ಗೊತ್ತಾಯಿತು. ನಿರ್ಮಾಪಕರು ಇಡೀ ಚಿತ್ರರಂಗ ನಿಖಿತಾ-ದರ್ಶನ್ ಸಂಬಂಧದ ಬಗ್ಗೆ ಮಾತನಾಡಿತ್ತು. ನಿಖಿತಾಗೆ ದರ್ಶನ್ ರಿಂದ ದೂರವಾಗು ಎಂದೆ ಅಷ್ಟಕ್ಕೆ ದರ್ಶನ್ ನನ್ನ ಸ್ನೇಹ ಮುರಿದು ಬಿತ್ತು ಎಂದು ಹೇಳಿದ್ದಾರೆ.
Pavithra Gowda: ನಟಿಯಾಬೇಕೆನ್ನುವ ಕನಸು ಕಂಡಿದ್ದ ಪವಿತ್ರಾ ಗೌಡ ಲೈಫ್ ಹೇಗಿತ್ತು ಗೊತ್ತಾ..?
ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ನಡುವಿನ ಕಲಹದ ನಂತರ ನಿಕಿತಾ ಬ್ಯಾನ್ ವಿಚಾರ ಮುನ್ನೆಲೆಗೆ ಬಂದಿತ್ತು. ದರ್ಶನ್ ಹಾಗೂ ವಿಜಯಲಕ್ಷ್ಮಿ ಮಧ್ಯೆ ಕೌಟುಂಬಿಕ ಜಗಳ ಶುರುವಾದಾಗ ವಿಜಯಲಕ್ಷ್ಮಿ ನಟಿ ನಿಕಿತಾ ತುಕ್ರಾಲ್ ಕಡೆ ಬೆರಳು ತೋರಿಸಿದ್ದರು. ಈ ಬೆಳವಣಿಗೆ ನಂತರ ಇಂಡಸ್ಟ್ರಿ ನಟಿಯನ್ನು ಮೂರು ವರ್ಷಗಳ ಕಾಲ ಬ್ಯಾನ್ ಮಾಡಿತು. ಆದರೆ ದರ್ಶನ್ ಕುಟುಂಬದಲ್ಲಿ ನಡೆದಿದ್ದಕ್ಕೂ ತನಗೂ ಸಂಬಂಧ ಇಲ್ಲ ಎಂದಿದ್ದರು ನಿಕಿತಾ. ತನ್ನನ್ನು ಸುಮ್ಮನೆ ಈ ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ ಎಂದಿದ್ದರು. ನಿಕಿತಾಳಿಂದ ಇಂಡಸ್ಟ್ರಿಗೆ ಅವಮಾನವಾಗಿದ್ದು ಸಹನಟನ ದಾಂಪತ್ಯದಲ್ಲಿ ಸಮಸ್ಯೆಯಾಗಿದೆ ಎಂದು ನಿರ್ಮಾಪಕರ ಸಂಘ ನಟಿಯನ್ನು ಬ್ಯಾನ್ ಮಾಡುವ ವಿಚಾರದಲ್ಲಿ ಒಗ್ಗಟ್ಟಾಗಿ ನಿಂತಿತ್ತು.
ನಿಜಕ್ಕೂ ನನಗೆ ಪವಿತ್ರಾ ಗೌಡ ಯಾರು ಅಂತಾನೆ ಗೊತ್ತಿಲ್ಲ. ಟಿವಿ ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಬಗ್ಗೆ ನೋಡಿದೆ. ಅವರು ದರ್ಶನ್ ಜೀವನಕ್ಕೆ ಯಾಕೆ ಬಂದ್ರು ಅನ್ನೋದೇ ಗೊತ್ತಿಲ್ಲ. 2011ರಲ್ಲಿ ಪ್ರಿನ್ಸ್ ಸಿನಿಮಾ ರಿಲೀಸ್ ಆದ ಮೇಲೆ ದರ್ಶನ್ ನನ್ನ ಒಡನಾಟ ಕಟ್ ಆಯ್ತು. ನಿರ್ದೇಶಕರಿಗೆ ದರ್ಶನ್ ಹೊಡೆದಿದ್ದಾರೆ ಅಂತ ಕಿವಿಗೆ ಬಿದ್ದಿತ್ತು. ಹೊಡೆತ ತಿಂದವರು ಯಾಕೆ ಮಾತನಾಡುತ್ತಿಲ್ಲ. ನನ್ನ ಕಿವಿಗೂ ದರ್ಶನ್ ಗಲಾಟೆಗಳ ಬಗ್ಗೆ ಮಾಹಿತಿ ಬಿದ್ದಿದೆ ಎಂದು ಹೇಳಿದ್ದಾರೆ.