ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್ ಬಿದ್ದಿದೆ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ.
ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಪ್ರತಿ ತಿಂಗಳ 1 ರಿಂದ 16ರ ನಡುವೆ ಬದಲಾಗುತ್ತಿತ್ತು. ಆದಾಗ್ಯೂ ಜೂನ್ 2017ರ ನಂತರ ಜಾರಿಗೆ ಬಂದ ಹೊಸ ಯೋಜನೆಯಂತೆ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಪೆಟ್ರೋಲ್ ಡಿಸೇಲ್ ದರಗಳಲ್ಲಿ ಬದಲಾವಣೆಯಾಗುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.
ಮಹಾನಗರಗಳಲ್ಲಿ ಇಂಧನ ಬೆಲೆ ಎಷ್ಟಿದೆ? ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ 94.72 ರೂ., ಮುಂಬೈನಲ್ಲಿ 104.21 ರೂ., ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ಗೆ 103.94 ರೂ., ಬೆಂಗಳೂರಿನಲ್ಲಿ ಪೆಟ್ರೋಲ್ 102.86 ರೂ., ಚೆನ್ನೈನಲ್ಲಿ 100.75 ರೂ. ಇದೆ.
ಡೀಸೆಲ್ ಬೆಲೆ: ದೆಹಲಿಯಲ್ಲಿ 87.62 ರೂ., ಮುಂಬೈನಲ್ಲಿ 92.15 ರೂ., ಕೋಲ್ಕತ್ತಾದಲ್ಲಿ 90.76 ರೂ., ಚೆನ್ನೈನಲ್ಲಿ 92.43 ರೂ., ಬೆಂಗಳೂರಿನಲ್ಲಿ ಡೀಸೆಲ್ ದರ 88.94 ರೂ. ಇದೆ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯನ್ನು ಆಧರಿಸಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯನ್ನು ಪರಿಶೀಲಿಸಿದ ನಂತರ ಭಾರತೀಯ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ನಿರ್ಧರಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ತೈಲ ಕಂಪನಿಗಳು ಪ್ರತಿದಿನ ಬೆಳಗ್ಗೆ 6 ವಿವಿಧ ನಗರಗಳ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮಾಹಿತಿಯನ್ನು ಬಿಡುಗಡೆ ಮಾಡುತ್ತವೆ.
ನೋಯ್ಡಾ : ಪ್ರತಿ ಲೀಟರ್ ಪೆಟ್ರೋಲ್ ರೂ 94.83ರೂ ಮತ್ತು ಡೀಸೆಲ್ ಪ್ರತಿ ಲೀಟರ್ಗೆ 87.96 ರೂ
ಗುರುಗ್ರಾಮ : ಪ್ರತಿ ಲೀಟರ್ ಪೆಟ್ರೋಲ್ 94.79 ರೂ ಮತ್ತು ಡೀಸೆಲ್ ಲೀಟರ್ಗೆ 87.64 ರೂ.
ಚಂಡೀಗಢ : ಲೀಟರ್ಗೆ ಪೆಟ್ರೋಲ್ 94.24ರೂ. ಮತ್ತು ಡೀಸೆಲ್ 82.40ರೂ.
ಹೈದರಾಬಾದ್ : ಪೆಟ್ರೋಲ್ ಲೀಟರ್ಗೆ 107.41ರೂ. ಮತ್ತು ಡೀಸೆಲ್ ಲೀಟರ್ಗೆ 95.65 ರೂ.
ಜೈಪುರ : ಪ್ರತಿ ಲೀಟರ್ ಪೆಟ್ರೋಲ್ ರೂ 105.71 ಮತ್ತು ಡೀಸೆಲ್ ಪ್ರತಿ ಲೀಟರ್ಗೆ ರೂ 91.10
ಪಾಟ್ನಾ : ಪ್ರತಿ ಲೀಟರ್ ಪೆಟ್ರೋಲ್ 105.18 ರೂ.ಮತ್ತು ಡೀಸೆಲ್ ಪ್ರತಿ ಲೀಟರ್ಗೆ 92.04 ರೂ.
ಲಕ್ನೋ : ಪೆಟ್ರೋಲ್ ಪ್ರತಿ ಲೀಟರ್ಗೆ 94.65ರೂ. ಮತ್ತು ಡೀಸೆಲ್ ಲೀಟರ್ಗೆ 87.76 ರೂ.
ಪುಣೆ : ಪೆಟ್ರೋಲ್ ಪ್ರತಿ ಲೀಟರ್ಗೆ 104.08 ರೂ. ಮತ್ತು ಡೀಸೆಲ್ ಬೆಲೆ ಲೀಟರ್ಗೆ 90.61 ರೂ.