ಆಭರಣ ವ್ಯಾಪಾರ ಭಾರತದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭವಾಗಿದ್ದು, ಹಬ್ಬ, ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಖರೀದಿ ಭರಾಟೆ ಜೋರಾಗಿರುತ್ತದೆ. ಇನ್ನೂ ಚಿನ್ನ ಒಡವೆಯಾಗಿಯಲ್ಲದೇ, ಹೂಡಿಕೆದಾರರ ನೆಚ್ಚಿನ ವಸ್ತುವಾಗಿ ಎಲ್ಲೆಡೆ ಗಮನಸೆಳೆಯುತ್ತಿದೆ. ಹಾಗಾಗಿ ಚಿನ್ನದ ಮೇಲಿನ ಹೂಡಿಕೆ ಆಕರ್ಷಕ ಹೂಡಿಕೆಯಾಗಿ ಮುನ್ನೆಲೆಗೆ ಬರುತ್ತಿದೆ.
ಸಾಲು-ಸಾಲು ಕಷ್ಟಗಳಿಂದ ಬೇಸತ್ತಿದ್ದೀರಾ.? ಸೋಮವಾರ ಈ ಕೆಲಸ ಮಾಡಿದ್ರೆ ಶಿವನ ಕೃಪೆ ನಿಮಗಿರುತ್ತದೆ!
ಕಳೆದ ಕೆಲ ದಿನಗಳಿಂದ ಬಂಗಾರದ ದರದಲ್ಲಿ ನಾಟಕೀಯವಾಗಿ ಏರಿಳಿತ ನಡೆಯುತ್ತಲೇ ಇತ್ತು. ಇದೀಗ ಚಿನ್ನ ಮತ್ತೆ ಚೇತರಿಸಿಕೊಳ್ಳುತ್ತಿದೆ ಎನ್ನಬಹುದು. ಚಿನ್ನದಿಂದ ತಯಾರಿಸಲಾದ ಆಭರಣಗಳಿಗೆ ಅಪಾರವಾದ ಬೇಡಿಕೆಯಿದ್ದು ಹೂಡಿಕೆಯಲ್ಲೂ ಸಹ ಚಿನ್ನ ಪ್ರಮುಖ ಪಾತ್ರ ವಹಿಸುತ್ತದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 71,000 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 77,450 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,140 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 71,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,140 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಡಿಸೆಂಬರ್ 23ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,000 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,450 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,090 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 914 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,000 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,450 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 914 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 71,000 ರೂ
- ಚೆನ್ನೈ: 71,000 ರೂ
- ಮುಂಬೈ: 71,000 ರೂ
- ದೆಹಲಿ: 71,150 ರೂ
- ಕೋಲ್ಕತಾ: 71,000 ರೂ
- ಕೇರಳ: 71,000 ರೂ
- ಅಹ್ಮದಾಬಾದ್: 71,050 ರೂ
- ಜೈಪುರ್: 71,150 ರೂ
- ಲಕ್ನೋ: 71,150 ರೂ
- ಭುವನೇಶ್ವರ್: 71,000 ರೂ