ಬೆಂಗಳೂರು: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್ ಬಿದ್ದಿದೆ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ.
ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಪ್ರತಿ ತಿಂಗಳ 1 ರಿಂದ 16ರ ನಡುವೆ ಬದಲಾಗುತ್ತಿತ್ತು. ಆದಾಗ್ಯೂ ಜೂನ್ 2017ರ ನಂತರ ಜಾರಿಗೆ ಬಂದ ಹೊಸ ಯೋಜನೆಯಂತೆ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಪೆಟ್ರೋಲ್ ಡಿಸೇಲ್ ದರಗಳಲ್ಲಿ ಬದಲಾವಣೆಯಾಗುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.
ಬೆನ್ನು ನೋವು ಪ್ರಾಣ ಹಿಂಡುತ್ತಿದೆಯೇ..? ಇಲ್ಲಿದೆ ನೋಡಿ ಮುಕ್ತಿ ಹೊಂದಲು ಪರಿಹಾರ
ಯುಪಿಯ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಪೆಟ್ರೋಲ್ ಅನ್ನು 29 ಪೈಸೆ ಅಗ್ಗವಾಗಿ ಲೀಟರ್ಗೆ 94.72 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಕೂಡ 31 ಪೈಸೆ ಕುಸಿದು ಲೀಟರ್ಗೆ 87.91 ರೂ.ಗೆ ತಲುಪಿದೆ. ಹರ್ಯಾಣದ ರಾಜಧಾನಿ ಗುರುಗ್ರಾಮದಲ್ಲಿ ಪೆಟ್ರೋಲ್ ಲೀಟರ್ಗೆ 15 ಪೈಸೆ ಏರಿಕೆಯಾಗಿ 95.05 ರೂ.ಗೆ ತಲುಪಿದೆ ಮತ್ತು ಡೀಸೆಲ್ 15 ಪೈಸೆಗಳಷ್ಟು ದುಬಾರಿಯಾಗಿದೆ ಮತ್ತು ಲೀಟರ್ಗೆ 87.91 ರೂ.ಗೆ ಮಾರಾಟವಾಗುತ್ತಿದೆ.
ಇಂದು ರಾಜಸ್ಥಾನದ ಜೋಧ್ಪುರ ನಗರದಲ್ಲಿ ಪೆಟ್ರೋಲ್ಗೆ 39 ಪೈಸೆ ಏರಿಕೆಯಾಗಿ ಲೀಟರ್ಗೆ 104.98 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ಗೆ 36 ಪೈಸೆ ಏರಿಕೆಯಾಗಿ ಲೀಟರ್ಗೆ 90.46 ರೂ.ಗೆ ಮಾರಾಟವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಅದರ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 84.66 ಡಾಲರ್ಗೆ ಏರಿಕೆಯಾಗಿದೆ. ಡಬ್ಲ್ಯೂಟಿಐ ದರವು ಪ್ರತಿ ಬ್ಯಾರೆಲ್ಗೆ 82.14 ಡಾಲರ್ಗೆ ಏರಿದೆ.
ಮಹಾನಗರಗಳಲ್ಲಿ ಪೆಟ್ರೋಲ್–ಡೀಸೆಲ್ ಬೆಲೆ – ದೆಹಲಿಯಲ್ಲಿ ಪೆಟ್ರೋಲ್ 94.72 ರೂ. ಮತ್ತು ಡೀಸೆಲ್ ಲೀಟರ್ಗೆ 87.62 ರೂ. – ಮುಂಬೈನಲ್ಲಿ ಪೆಟ್ರೋಲ್ 103.44 ರೂ. ಮತ್ತು ಡೀಸೆಲ್ 89.97 ರೂ. – ಚೆನ್ನೈನಲ್ಲಿ ಪೆಟ್ರೋಲ್ 100.76 ರೂ. ಮತ್ತು ಡೀಸೆಲ್ 92.35 ರೂ. -ಕೋಲ್ಕತ್ತಾದಲ್ಲಿ 95 ರೂ. ಮತ್ತು ಡೀಸೆಲ್ ಲೀಟರ್ಗೆ 91.76 ರೂ. -ಬೆಂಗಳೂರು: ಪೆಟ್ರೋಲ್ ಲೀಟರ್ಗೆ 102.86 ಮತ್ತು ಡೀಸೆಲ್ ಲೀಟರ್ಗೆ 88.94 ರೂ.
ಈ ನಗರಗಳಲ್ಲಿ ದರಗಳು ಬದಲಾಗಿವೆ – ಗುರುಗ್ರಾಮದಲ್ಲಿ ಪೆಟ್ರೋಲ್ 95.05 ರೂ. ಮತ್ತು ಡೀಸೆಲ್ ಲೀಟರ್ಗೆ 87.91 ರೂ. – ನೋಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 94.72 ರೂ. ಮತ್ತು ಡೀಸೆಲ್ 87.83 ರೂ. ಆಗಿದೆ. – ಜೋಧ್ಪುರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 104.98 ರೂ. ಮತ್ತು ಡೀಸೆಲ್ 90.46 ರೂ. ಆಗಿದೆ.