ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐ ಆರ್ ದಾಖಲು ಆಗುತ್ತಿದ್ದಂತೆ,ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿದ್ದ ಆಕಾಂಕ್ಷಿಗಳಲ್ಲಿ ಮತ್ತೆ ಆಸೆ ಚಿಗುರೊಡೆದಿದೆ.ಈ ಹಿನ್ನಲೆಯಲ್ಲಿ ಕೆಲ ನಾಯಕರು ತೆರೆಮರೆಯಲ್ಲಿ ಸಿಎಂ ಆಗಲು ಕಸರತ್ತು ಶುರು ಮಾಡಿದ್ದಾರೆ.ಅದ್ರಲ್ಲೂ ಸತೀಶ್ ಜಾರಕಿಹೊಳಿ,ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿರೋದು ಮತ್ತಷ್ಟು ಕೂತೂಹಲ ಕೆರಳಿಸಿದೆ.
ತಿಮ್ಮಪ್ಪನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್: ನಿತ್ಯ 1 ಸಾವಿರ ಜನರಿಗೆ ನೇರ ದರ್ಶನಕ್ಕೆ ಅವಕಾಶ ನೀಡುವಂತೆ KSTDC ಮನವಿ!
ಯೆಸ್,ಸಿಎಂ ಸಿದ್ದರಾಮಯ್ಯ ಸದ್ಯ ಮುಡಾ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.ಒಂದು ಕಡೆ ಲೋಕಾಯುಕ್ತದಲ್ಲಿ ಎಫ್ ಐ ಆರ್ ಮತ್ತೊಂದು ಕಡೆ ಜಾರಿ ನಿದರ್ಶನಾಲಯದಿಂದ ಇಸಿಎಆರ್ ದಾಖಲು ಮಾಡಿರೋದು ಸಿಎಂ ಸಿದ್ದರಾಮಯ್ಯಗೆ ಟೆನ್ಷನ್ ಮೇಲೆ ಟೆನ್ಷನ್ ಗೆ ಒಳಗಾಗಿದ್ದಾರೆ.ಇದ್ರ ನಡುವೆ ಸಿಎಂ ಬದಲಾವಣೆ ಚರ್ಚೆಗೆ ಕಾಂಗ್ರೆಸ್ ನಾಯಕರೇ ಮರು ಜೀವ ಕೊಟ್ಟಿದ್ದಾರೆ.ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸಿಲುಕುತ್ತಿದ್ದಂತೆ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ನಾಯಕರು ಇತ್ತೀಚೆಗೆ ಕ್ಲೋಸ್ ಡೋರ್ ಮೀಟಿಂಗ್ ಗಳನ್ನ ಮಾಡುತ್ತಿದ್ದಾರೆ.ಡಿ.ಕೆ.ಶಿವಕುಮಾರ್ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ್ದು,ಸತೀಶ್ ಜಾರಕಿಹೊಳಿ,ಎಂ.ಬಿ.ಪಾಟೀಲ್ ನಿವಾಸಕ್ಕೆ ಪರಮೇಶ್ವರ್ ಭೇಟಿ ಮಾಡಿ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ರು.ಕ್ಲೋಸ್ ಡೋರ್ ಮೀಟಿಂಗ್ ಬಳಿಕ ಇದೀಗ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಸತೀಶ್ ಜಾರಕಿಹೊಳಿ ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿರೋದು ತೀವ್ರ ಕೂತೂಹಲ ಕೆರಳಿಸಿದೆ.
ಇನ್ನು ಒಂದು ವೇಳೆ ಮುಖ್ಖಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರೆ,ಅವರು ಹೇಳುವ ವ್ಯಕ್ತಿಯೇ ಸಿಎಂ ಆಗೋದು ಬಹುತೇಕ ಖಚಿತ.ಈ ಹಿನ್ನಲೆಯಲ್ಲಿ ಸತೀಶ್ ಜಾರಕಿಹೊಳಿ ಸೇಫ್ ಗೇಮ್ ಗೆ ಮುಂದಾಗಿದ್ದಾರೆ.ಈಗಾಗಲೇ ಸಿದ್ದರಾಮಯ್ಯ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಹೈಕಮಾಂಡ್ ನಾಯಕರ ವಿಶ್ವಾಸವನ್ನ ಕೂಡ ತೆಗದುಕೊಳ್ಖಲು ಮುಂದಾಗಿದ್ದಾರೆ ಎನ್ನಲಾಗಿದೆ.ಇದ್ರ ಭಾಗವಾಗಿಯೇ ಖರ್ಗೆ ಭೇಟಿ ಮಾಡಿರುವ ಸತೀಶ್ ಜಾರಕಿಹೊಳಿ ಸೇಫ್ ಗೇಮ್ ಮೂಲಕ ಹೈಕಮಾಂಡ್ ವಿಶ್ವಾಸ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ಇನ್ನು ಸತೀಶ್ ಜಾರಕಿಹೊಳಿ-ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗೋದು ತಪ್ಪೇನಿಲ್ಲ.ಅವ್ರು ರಾಷ್ಟ್ರೀಯ ಅಧ್ಯಕ್ಷರು,ಸತೀಶ್ ಜಾರಕಿಹೊಳಿ ಸಚಿವರು ಹೋಗಿ ಭೇಟಿಯಾಗಿರೋದು ತಪ್ಪೇನಿದೆ.ಇಲ್ಲಸಲ್ಲದ ಊಹಪೋಹಗಳಿಗೆ ಅವಕಾಶ ನೀಡಬಾರದೆಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.ಅಲ್ದೇ ನಾನು ಅಧಿಕಾರದಲ್ಲಿದ್ರೆ,ಬಿಜೆಪಿ-ಜೆಡಿಎಸ್ ಪಕ್ಷ ದುರ್ಬಲವಾಗುವ ಭಯ ಅವರನ್ನ ಕಾಡುತ್ತಿದೆ ಎಂದು ಸಿಎಂ ಹೇಳಿದ್ರು.
ಒಟ್ಟಾರೆ,ಸಿಎಂ ಬದಲಾವಣೆ ಚರ್ಚೆಗೆ ಕಾಂಗ್ರೆಸ್ ನಾಯಕರೇ ಮರುಜೀವ ನೀಡುತ್ತಿದ್ದು,ನವರಾತ್ರಿ ಬಳಿಕ ಕಾಂಗ್ರೆಸ್ ಹೈಕಮಾಂಡ್ ನಾಯಕರು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಗೋವಿಂದ್ ಜೊತೆ ಹರ್ಷಿತ್,ಪೊಲಿಟಿಕಲ್ ಬ್ಯುರೋ,ಪ್ರಜಾಟಿವಿ