ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನವನ್ನು ಪಡೆದಿರುವ ತುಳಸಿ ಸಸ್ಯವು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಇದು ಹೆಚ್ಚಾಗಿ ಭಾರತೀಯ ಮನೆಗಳಲ್ಲಿ ಕಂಡುಬರುತ್ತದೆ, ಏಕೆಂದರೆ ಇದನ್ನು ಹಿಂದೂಗಳಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ತುಳಸಿ ಎಂದೂ ಕರೆಯಲ್ಪಡುವ ಈ ಮೂಲಿಕೆಯು ನೆಗಡಿ, ಜ್ವರ ಮತ್ತು ಕೆಮ್ಮು ಮುಂತಾದ ವಿವಿಧ ಕಾಲೋಚಿತ ರೋಗಗಳಿಗೆ ಉತ್ತಮ ಪರಿಹಾರ.
ವಾಸ್ತು ಪ್ರಕಾರ ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದು ಕುಟುಂಬದಲ್ಲಿ ಸಾಮರಸ್ಯ ಮತ್ತು ಸಂತೋಷವನ್ನು ತರುತ್ತದೆ. ಇದನ್ನು ಯಾವ ದಿಕ್ಕಿನಲ್ಲಿ ನೆಟ್ಟರೆ ಒಳ್ಳೆಯದು, ಇದನ್ನು ಬೆಳೆಸುವ ಕ್ರಮ ಹೇಗೆ ಎನ್ನುವುದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.
ತುಳಸಿಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸಸ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ತುಳಸಿ ನೆಡುವುದು ಧಾರ್ಮಿಕ ದೃಷ್ಟಿಕೋನದಿಂದ ಮಾತ್ರವಲ್ಲದೆ ವಾಸ್ತು ದೃಷ್ಟಿಯಿಂದಲೂ ಮಂಗಳಕರವೆಂದು ಪರಿಗಣಿಸಲಾಗಿದೆ.
ಮನೆಯಲ್ಲಿ ತುಳಸಿ ನೆಡುವುದರಿಂದ ವಾತಾವರಣದಲ್ಲಿ ಧನಾತ್ಮಕತೆ ಹೆಚ್ಚಾಗುತ್ತದೆ. ಇದರೊಂದಿಗೆ ವಿಷ್ಣುವಿನೊಂದಿಗೆ ಲಕ್ಷ್ಮಿ ದೇವಿಯ ಆಶೀರ್ವಾದವೂ ಸಿಗುತ್ತದೆ ಎಂದು ನಂಬಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ತುಳಸಿಯನ್ನು ಪೂಜಿಸುವುದು ಅತ್ಯಂತ ಮಂಗಳಕರವಾಗಿದೆ.
ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಮದು ವಾಸ್ತುಶಾಸ್ತ್ರದಲ್ಲಿ ಹೇಳಲಾಗುತ್ತದೆ. ಮಾತ್ರವಲ್ಲದೆ ಇದು ಇಡೀ ಕುಟುಂಬವನ್ನು ದುಃಖದಿಂದ ರಕ್ಷಿಸುತ್ತದೆ. ಹೀಗಾಗಿ ಮನೆಯಲ್ಲಿ ನತುಳಸಿಗಿಡವನ್ನು ನೆಡುವುದು ನಿತ್ಯ ಅದಕ್ಕೆ ಪೂಜೆಯನ್ನು ಸಲ್ಲಿಸುವುದು ಮುಖ್ಯ
ಆದರೆ ತುಳಸಿ ಗಿಡ ನೆಡುವಾಗ ದಿಕ್ಕಿನತ್ತ ಗಮನ ಹರಿಸದೇ ಇದ್ದರೆ ಲಾಭದ ಬದಲು ನಷ್ಟವೇ ಅಧಿಕ. ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ನೆಡಲು ಸರಿಯಾದ ದಿಕ್ಕು ಯಾವುದು ಎಂಬುವುದನ್ನು ಇಲ್ಲಿ ತಿಳಿಸಲಾಗಿದೆ.
– ತುಳಸಿಯಂತಹ ಆರೋಗ್ಯ ಮತ್ತು ಆಧ್ಯಾತ್ಮ ಮೇಳೈಸಿರುವ ಗಿಡಗಳನ್ನು ಬೆಳೆಸಿ. ಕನಿಷ್ಠ ಒಂದು ತುಳಸಿ ಗಿಡವಾದರೂ ಈಶಾನ್ಯ ಭಾಗದಲ್ಲಿರಲಿ.
– ಕಿಟಕಿ ಬಾಗಿಲು ಯಾವಾಗಲೂ ಹೊರ ಭಾಗಕ್ಕೆ ತೆರೆಯುವಂತಿರಲಿ. ಲ್ಯಾಟ್ರೀನ್ ಸೀಟ್ ದಕ್ಷಿಣ ಅಥವಾ ಪಶ್ಚಿಮ ಗೋಡೆಗೆ ಹತ್ತಿ ಕೊಂಡಿರಲಿ.
– ಕೊಠಡಿಯ ದಕ್ಷಿಣ ದಿಕ್ಕಿನಲ್ಲಿ ಕ್ಯಾಶ್ ಬಾಕ್ಸ್ ಇಡಬೇಕು. ಅಲ್ಮೇರಾ ಇದ್ದರೆ ಅದರ ಬಾಗಿಲು ಉತ್ತರಕ್ಕೆ ತೆರೆದುಕೊಳ್ಳುವಂತಿರಬೇಕು.
– ಪೀಠೋಪಕರಣಗಳು ಸಾಧ್ಯವಾದಷ್ಟು ಚೌಕ, ವೃತ್ತ ಅಥವಾ ಷಟ್ಭುಜಾಕೃತಿಯಲ್ಲಿ ಇರುವಂತೆ ವ್ಯವಸ್ಥೆ ಮಾಡಬೇಕು. ಉತ್ತರಗ ಮತ್ತು ಪೂರ್ವ ದಿಕ್ಕಿನಲ್ಲಿ ಚಿಕ್ಕ ಆಲಂಕಾರಿಕ ಗಿಡಗಳು, ಚಿಕ್ಕ ಪೊದೆ ಗಿಡಗಳು ಇರಲಿ. ಇವುಗಳ ಎತ್ತರ ಅರ್ಧ ಮೀಟರ್ನ್ನು ಮೀರದಿರಲಿ. ಈಶಾನ್ಯ ಭಾಗದಲ್ಲಿದ್ದರೆ ಯಾವಾಗಲೂ 1.5 ಮೀಟರ್ಗಿಂತ ಎತ್ತರವಾಗಬಾರದು. ಬೆಡ್ ರೂಂನಲ್ಲಿ ಗಿಡ ಅಥವಾ ನೀರಿನ ಅಂಶವಿರುವ ಯಾವುದೇ ವಸ್ತುವನ್ನು ಇಡಬಾರದು. ಅಲ್ಲಿ ಟಿವಿ ಸೆಟ್ ಕೂಡ ಇರಬಾರದು. ಇವುಗಳನ್ನು ಲೀವಿಂಗ್ ಅಥವಾ ಸ್ಟಡಿ ರೂಂನ ಆಗ್ನೇಯ ಮೂಲೆಯಲ್ಲಿ ಇಡಬೇಕು. ಆದರೆ ಈಶಾನ್ಯ ಅಥವಾ ನೈರುತ್ಯ ಮೂಲೆಯಲ್ಲಿ ಇರಲೇ ಬಾರದು.