ರಜೆ ಬಂತು ಅಂದ್ರೆ ಸಾಕು ತುಂಬಾ ಮಂದಿ ಮನೆಗಳಲ್ಲಿ ಮಟನ್ ಅಡುಗೆ ಮಾಡುತ್ತಾರೆ. ಪ್ರಸ್ತುತ ಬರ್ಡ್ಫ್ಲೂ ಸುದ್ದಿಯ ಹಿನ್ನೆಲೆಯಲ್ಲಿ ಮಟನ್ ಸೇಲ್ ಭಾರೀ ಪ್ರಮಾಣದಲ್ಲಿ ಆಗುತ್ತಿದೆ. ಈ ನಡುವೆ ಮಟನ್ನಲ್ಲಿ ಮೇಕೆ, ಕುರಿ ಮಾಂಸ ಎರಡೂ ಇರುತ್ತದೆ.
ಹೌದು, ಮಟನ್ ಒಂದೇ ಆಗಿದ್ದರೂ ಸಹ ಪ್ರಾಣಿಗಳು ಮಾತ್ರ ಬೇರೆ. ಈ ಎರಡೂ ಪ್ರಣಿಗಳಲ್ಲಿ ಕೆಲವು ವ್ಯತ್ಯಾಸಗಳು ಇರುತ್ತವೆ. ಹಾಗಿದ್ರೆ ಮೇಕೆ ಮತ್ತು ಕುರಿ ಮಾಂಸದ ನಡುವೆ ಇರುವ ವ್ಯತ್ಯಾಸಗಳು ಏನು? ಆರೋಗ್ಯಕ್ಕೆ ಯಾವುದು ಒಳ್ಳೆಯದು ಅನ್ನೋದನ್ನು ತಿಳಿಯೋಣ ಬನ್ನಿ.
ಮೇಕೆ, ಕುರಿ ಮಾಂಸಗಳ ಮಧ್ಯೆ ಇರೋ ವ್ಯತ್ಯಾಸ ಏನು? ಇದ್ರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೇದು? ಕುರಿ, ಮೇಕೆ ಮಾಂಸಕ್ಕೆ ಮಧ್ಯೆ ಇರೋ ಮುಖ್ಯವಾದ ವ್ಯತ್ಯಾಸಗಳೇನು ಅಂತ ನೋಡೋಣ.
ಮೇಕೆ ಮಾಂಸ:
ಮೇಕೆ ಮಾಂಸನ ಲೀನ್ ಮೀಟ್ ಅಂತ ಹೇಳ್ತಾರೆ. ಇದ್ರಲ್ಲಿ ಕೊಬ್ಬಿನ ಅಂಶ ಕಮ್ಮಿ ಇರುತ್ತೆ. ಮೇಕೆ ಮಾಂಸದಲ್ಲಿ ಪ್ರೋಟೀನ್ ಜಾಸ್ತಿ ಇರುತ್ತೆ. ಇದ್ರಲ್ಲಿ ಕೊಬ್ಬಿನ ಅಂಶ ಕಮ್ಮಿ ಇರೋದ್ರಿಂದ ಹೃದಯ ಸಂಬಂಧಿತ ಸಮಸ್ಯೆಗಳು ಬರೋ ಚಾನ್ಸ್ ಕಮ್ಮಿ ಇರುತ್ತೆ. ಇನ್ನು ಮೇಕೆ ಮಾಂಸದಲ್ಲಿ ಐರನ್ ಅಂಶ ಜಾಸ್ತಿ ಇರುತ್ತೆ. ಇದು ರಕ್ತಹೀನತೆಯಿಂದ ಬಳಲುವವರಿಗೆ ತುಂಬಾನೇ ಉಪಯೋಗ ಆಗುತ್ತೆ. ಆದ್ರೆ ಮೇಕೆ ಮಾಂಸ ಸ್ವಲ್ಪ ಗಟ್ಟಿಯಾಗಿರುತ್ತೆ. ಬೇಯೋಕೆ ಜಾಸ್ತಿ ಟೈಮ್ ತಗೊಳ್ಳುತ್ತೆ.
ಮಟನ್
ಕುರಿ ಮಾಂಸ:
ಮೇಕೆ ಮಾಂಸಕ್ಕೆ ಹೋಲಿಸಿದ್ರೆ ಕುರಿ ಮಾಂಸದಲ್ಲಿ ಕೊಬ್ಬು ಜಾಸ್ತಿ ಇರುತ್ತೆ. ಅದಕ್ಕೆ ಹೃದಯ ಸಂಬಂಧಿತ ಸಮಸ್ಯೆ ಇರೋರು, ಹಾರ್ಟ್ ಸ್ಟ್ರೋಕ್ ಬಂದಿರೋರು, ಸ್ಟಂಟ್ ಹಾಕಿಸಿಕೊಂಡಿರೋರು ಕುರಿ ಮಾಂಸಕ್ಕೆ ದೂರ ಇರೋದು ಒಳ್ಳೇದು. ಪ್ರೋಟೀನ್ ವಿಚಾರಕ್ಕೆ ಬಂದ್ರೆ ಈ ಎರಡರಲ್ಲೂ ಸಮಾನವಾದ ಪ್ರೋಟೀನ್ ಇರುತ್ತೆ. ಮೇಕೆ ಮಾಂಸಕ್ಕೆ ಹೋಲಿಸಿದ್ರೆ ಕುರಿ ಮಾಂಸದಲ್ಲಿ ಐರನ್ ಅಂಶ ಕಮ್ಮಿ ಇರುತ್ತೆ. ಕುರಿ ಮಾಂಸ ತುಂಬಾ ಸ್ಮೂತ್ ಆಗಿರುತ್ತೆ. ಬೇಗ ಬೇಯುತ್ತೆ. ಜೀರ್ಣ ಸಮಸ್ಯೆ ಇರೋರಿಗೆ ಕುರಿ ಮಾಂಸ ಬೆಸ್ಟ್ ಆಪ್ಷನ್ ಅಂತ ಹೇಳಬಹುದು.
ಮಟನ್
ಎರಡರಲ್ಲಿ ಯಾವುದು ಉತ್ತಮ.?
ಆರೋಗ್ಯದ ಪ್ರಕಾರ ನೋಡಿದ್ರೆ ಕುರಿ ಮಾಂಸಕ್ಕಿಂತ ಮೇಕೆ ಮಾಂಸ ಬೆಸ್ಟ್ ಆಪ್ಷನ್ ಅಂತ ಹೇಳಬಹುದು. ಮೇಕೆ ಮಾಂಸದಲ್ಲಿ ಕೊಬ್ಬು ಕಮ್ಮಿ ಇರುತ್ತೆ, ಐರನ್ ಅಂಶ ಜಾಸ್ತಿ ಇರುತ್ತೆ. ಆದ್ರೆ ರುಚಿ ಪ್ರಕಾರ ಕುರಿ ಮಾಂಸ ಬೆಸ್ಟ್ ಆಪ್ಷನ್ ಅಂತ ಕೆಲವರು ಅನ್ಕೋತಾರೆ. ಬೇಗ ಬೇಯುತ್ತೆ ಕೂಡ. ಹೃದಯ ಸಂಬಂಧಿತ ಸಮಸ್ಯೆ ಇರೋರು, ಕೊಲೆಸ್ಟ್ರಾಲ್ ಕಂಟ್ರೋಲ್ ಅಲ್ಲಿ ಇಟ್ಕೋಬೇಕು ಅನ್ಕೊಂಡಿರೋರು ಮೇಕೆ ಮಾಂಸ ತಿನ್ನೋದು ಒಳ್ಳೇದು.