ಬೆಂಗಳೂರು: ಕಾಂಗ್ರೆಸ್ ಪದಾಧಿಕಾರಿಗಳ ಜತೆ ಸೋಮವಾರ ನಡೆಸಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಸಂಘಟನೆ ದೃಷ್ಟಿಯಿಂದ ಹಾಗೂ ಚುನಾವಣೆ ದೃಷ್ಟಿಯಿಂದ ಪ್ರತ್ಯೇಕ ಆ್ಯಕ್ಷನ್ ಪ್ಲ್ಯಾನ್ ನೀಡಿದ್ದಾರೆ.
ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಐಸಿಸಿ ಮಟ್ಟದಲ್ಲಿ ಖರ್ಗೆ ಅವರು ಶ್ರಮ ಪಟ್ಟಿದ್ದಾರೆ ಕೇಂದ್ರದಲ್ಲಿ ಹೆಚ್ಚು ಸೀಟ್ ನಮಗೆ ಬಂದಿದೆ ರಾಹುಲ್ ಗಾಂಧಿ ವಿರೋಧ ಪಕ್ಷ ನಾಯಕರಾಗಿದ್ದಾರೆ ಹೀಗಾಗಿ ಅವರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಿದ್ದೇವೆ
ಸಾಮಾಜಿಕ ಜಾಲತಾಣ ಎಷ್ಟು ವೇಗ ಇದ್ದಾವೋ ಅಷ್ಟೇ ಅಪಾಯಕಾರಿ: ಸಿಎಂ ಸಿದ್ದರಾಮಯ್ಯ
ನಮಗೆ ರಾಜ್ಯದಲ್ಲಿ ಬಂದ ಸೀಟ್ ಸಮಧಾನ ತಂದಿಲ್ಲ ಇನ್ನು5 ರಿಂದ 6 ಸೀಟ್ ಬರಬೇಕಿತ್ತು ಆದ್ರೆ ನಾವು ನಿರೀಕ್ಷೆ ಮಾಡಿದಷ್ಟು ಸೀಟ್ ನಮಗೆ ಬಂದಿಲ್ಲ ಹೀಗಾಗಿ ಸತ್ಯ ಶೋಧನಾ ಸಮಿತಿ ರಚನೆ ಮಾಡಲು ನಿರ್ಧಾರ ಎಐಸಿಸಿ ಕೂಡ ಒಂದು ಕಮಿಟಿ ರಚನೆ ಮಾಡಿದೆ ನೀಟ್ ಪರೀಕ್ಷೆ ಹಗರಣ ಬಗ್ಗೆ ಖಂಡನೆ ನಿರ್ಣಯ ಅಂಗೀಕಾರ ಮಾಡಲಾಗಿದೆ
ಡಿಕೆ ಶಿವಕುಮಾರ್ ನಡೆಸಿರುವ ಚರ್ಚೆ ಮತ್ತು ಆ್ಯಕ್ಷನ್ ಪ್ಲ್ಯಾನ್ ವಿವರ ಇಲ್ಲಿದೆ ನೋಡಿ
- ವಲಯವಾರು ಸತ್ಯ ಶೋಧನಾ ಸಮಿತಿ ರಚನೆಗೆ ನಿರ್ಧಾರ.
- ಲೋಕಸಭೆ ಫಲಿತಾಂಶದ ಹಿನ್ನಡೆ ಬಗ್ಗೆ ವಿಚಾರಣೆ ನಡೆಸಲು ವಲಯವಾರು ಪ್ರತ್ಯೇಕ ಸಮಿತಿ ರಚನೆಗೆ ನಿರ್ಧಾರ.
- ಲೋಕಸಭೆಯಲ್ಲಿ ಹಿನ್ನಡೆ ಅನುಭವಿಸಿದ ವಿಧಾನಸಭಾ ಕ್ಷೇತ್ರಗಳ ಪ್ರಗತಿ ಪರಿಶೀಲನೆ/ ಕಾರಣಗಳ ಪತ್ತೆ ಹಚ್ಚುವುದು.
- ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ರೂಪುರೇಷೆ ಸಿದ್ದಪಡಿಸಲು ವಲಯವಾರು ಸಮಿತಿ.
- ಬಿಬಿಎಂಪಿ, ಜಿಪಂ, ತಾಪಂ ಚುನಾವಣೆಗೆ ಹಾಗೂ ಉಪ ಚುನಾವಣೆಯಲ್ಲಿ ಸಕ್ರಿಯ ಕೆಲಸ ಮಾಡುವಂತೆ ಸೂಚನೆ.
- ಪ್ರತಿ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರವಾರು ಸಂಚಾಲನ ಸಮತಿ ರಚನೆಗೂ ನಿರ್ಧಾರ.
- ಮಾಜಿ ಜಿಲ್ಲಾ ಪಂಚಾಯತ ತಾಲೂಕು ಪಂಚಾಯತ್ ಸದಸ್ಯರ ಪ್ರತ್ಯೇಕ ಸಭೆ ನಡೆಸಲಿರುವ ಡಿಕೆಶಿವಕುಮಾರ್.
- ಕೆಳಹಂತದಲ್ಲಿ ಪಕ್ಷ ಬಲವರ್ಧನೆ ಗೆ ಸಲಹೆ ನೀಡಲು ಪದಾಧಿಕಾರಿಗಳಿಗೆ ಸೂಚನೆ.
- ಬೂತ್ ಮಟ್ಟದ ಸಮಸ್ಯೆ ಬಗೆಹರಿಸಲು ವಾರ್ಡ್ ಸಮಿತಿ/ ಪಂಚಾಯತ್ ಸಮಿತಿಗಳ ರಚನೆಗೆ ತೀರ್ಮಾನ.
- ಗ್ಯಾರಂಟಿ ಫಲಾನುಭವಿಗಳ ದಾಖಲೆ ಹಾಗೂ ಮೊಬೈಲ್ ಸಂಖ್ಯೆ ಸಂಗ್ರಹಿಸಲು ಸೂಚನೆ.
- ಕೆಪಿಸಿಸಿ ಮಟ್ಟದಲ್ಲಿ ಅಪಾರ್ಟ್ಮೆಂಟ್ ಸೆಲ್ ಹಾಗೂ ರೆಸಿಡೆಂಟ್ ವೆಲ್ಫೆರ್ ಅಸೋಸಿಯೇಷನ್ ಗೆ ಪುನಶ್ಚೇತನ.
- ಉಪ ಚುನಾವಣೆಗಳಿಗೆ ಸಚಿವರು, ಶಾಸಕರನ್ನು ಹೋಬಳಿ ಮಟ್ಟದಲ್ಲಿ ನಿಯೋಜನೆಗೆ ನಿರ್ಧಾರ.
- ಸ್ಥಳೀಯ ಶಾಸಕರು, ಹಿರಿಯ ನಾಯಕರ ನೇತೃತ್ವದಲ್ಲಿ ಇಲೆಕ್ಷನ್ ಕ್ಯಾಂಪ್ ಆಫೀಸ್, ವಾರ್ ರೂಂ ಸ್ಥಾಪನೆ.