ರಾಮನಗರ:- ಜಿಲ್ಲೆಯ ಯರೇಹಳ್ಳಿ ಗ್ರಾಮದಲ್ಲಿ ಪ್ರಪಂಚಕ್ಕೆ ಹಾಲುಣಿಸುವ ಗೋಮಾತೆಗೆಯೇ ನಾಯಿಯೊಂದು ಹಾಲುಣಿಸಿದ ಘಟನೆ ಜರುಗಿದೆ.
ಸಾವಿತ್ರಮ್ಮ ಎಂಬುವವರಿಗೆ ಸೇರಿದ ಈ ಕರು, ನಾಯಿಯ ಬಳಿ ಹಾಲು ಕುಡಿದಿದೆ. ನಾಯಿ ಹಾಗೂ ಕರುವಿನ ಬಾಂಧವ್ಯಕ್ಕೆ ಅಚ್ಚರಿಗೊಂಡ ಗ್ರಾಮಸ್ಥರು, ನಾಯಿ ಬಳಿ ಕರು ಹಾಲು ಕುಡಿಯುವ ವೀಡಿಯೋವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಫುಲ್ ವೈರಲ್ ಆಗಿದೆ ಎನ್ನಲಾಗಿದೆ.