ಹಬ್ಬಗಳು ಮತ್ತು ಆಚರಣೆಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪ್ರಮುಖ ಭಾಗವಾಗಿದೆ. ಹೀಗೆ ಹೇಳುವುದಾದರೆ, ಭಾರತವು ವೈವಿಧ್ಯಮಯ ಹಬ್ಬಗಳ ನಾಡು, ಅಂತಹ ಪ್ರಮುಖ ಹಬ್ಬಗಳಲ್ಲಿ ವರಲಕ್ಷ್ಮಿ ಅಥವಾ ವರಮಹಾಲಕ್ಷ್ಮಿ ವ್ರತವೂ ಒಂದು. ಪ್ರತೀ ವರ್ಷದಂತೆ ಈ ವರ್ಷವೂ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತಿದ್ದು, 2024 ರ ವರಮಹಾಲಕ್ಷ್ಮಿ ವ್ರತವನ್ನು ಆಗಸ್ಟ್ 16 ರಂದು ಶುಕ್ರವಾರ ಆಚರಿಸಲಾಗುವುದು.
9 ಗಂಟೆಗಳ ಕಾರ್ಯಚರಣೆ ಸಕ್ಸಸ್: ಕಾಳಿ ನದಿಗೆ ಬಿದ್ದಿದ್ದ ಲಾರಿ ಹೊರಕ್ಕೆ ತೆಗೆದ ರಕ್ಷಣಾ ಸಿಬ್ಬಂದಿ!
ಈ ಬಾರಿ ವರಮಹಾಲಕ್ಷ್ಮೀ ಹಬ್ಬವು ಆಗಸ್ಟ್ 16 ಶುಕ್ರವಾರದಂದೇ ಬಂದಿದೆ. ಹೀಗಾಗಿ ಮಹಿಳೆಯರು ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಶುಭ ಶುಕ್ರವಾರ ಬಂದ ವರಮಹಾಲಕ್ಷ್ಮಿ ಹಬ್ಬವನ್ನು ಹೇಗೆ ಮಾಡಬೇಕು? ಯಾವ ಮುಹೂರ್ತದಲ್ಲಿ ಮಾಡಿದ್ರೆ ಒಳ್ಳೆಯದು? ಯಾವ ರೀತಿಯಲ್ಲಿ ಪೂಜೆ ಮಾಡಬೇಕು? ಪೂಜೆಗೆ ಯಾವೆಲ್ಲಾ ತಿಂಡಿ ತಿನಿಸುಗಳನ್ನು ರೆಡಿ ಮಾಡಿಕೊಳ್ಳಬೇಕು ಎಂಬೆಲ್ಲಾ ಪ್ರಶ್ನೆಗಳು ಮಹಿಳೆಯರಲ್ಲಿ ಮೂಡಿರುತ್ತದೆ. ಹಾಗಾಗಿಯೇ ಸಾಕಷ್ಟು ಮಹಿಳೆಯರು ಪುರೋಹಿತರ ಮೋರೆ ಹೋಗುತ್ತಾರೆ. ಇನ್ನು, ಈ ಬಾರಿಯೂ ಶುಭ ಶುಕ್ರವಾರ ದಿನವೇ ವರಮಹಾಲಕ್ಷ್ಮಿ ಹಬ್ಬ ಬಂದಿದೆ. ಶುಕ್ರವಾರದ ದಿನ ಲಕ್ಷ್ಮಿ ಆರಾಧನೆಗೆ ವಿಶೇಷವಾದ ದಿನ. ಆದರೆ ಕೆಲ ವಿಶೇಷ ಸಂದರ್ಭದಲ್ಲಿ ಲಕ್ಷ್ಮಿಯನ್ನು ಆರಾಧಿಸಿದರೆ ಲಕ್ಷ್ಮಿ ಕೃಪೆ ಸದಾ ನಮ್ಮ ಮೇಲಿರುತ್ತದೆ ಎಂದು ಹೇಳಲಾಗುತ್ತದೆ.
ಹೌದು, ವರಮಹಾಲಕ್ಷ್ಮಿಯ ದಿನದಂದು ಅಷ್ಟಲಕ್ಷ್ಮಿಯನ್ನು ಪೂಜಿಸಲಾಗುವುದು. ಈ ವರ್ಷ ಆಗಸ್ಟ್ 16ರಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತಿದೆ. ಸಿಂಹ ಲಗ್ನದಲ್ಲಿ ಅಂದರೆ ಬೆಳಗ್ಗೆ 05:54ರಿಂದ 08:13ರೊಳಗ ವರಮಹಾಲಕ್ಷ್ಮಿ ಪೂಜಿಸಬೇಕು. ನಂತರ ಮಧ್ಯಾಹ್ನ ವೃಶ್ಚಿಕ ಲಗ್ನ ಮಧ್ಯಾಹ್ನ 12:53 ರಿಂದ 03:13 ರವರೆಗೂ ಸಮಯವಿದೆ. ನಂತರ ಪ್ರದೋಷ ಅಂದರೆ ಸಂಜೆಯ ಸಮಯದಲ್ಲಿ ವರಮಹಾಲಕ್ಷ್ಮಿ ವಿಶೇಷವಾದ ಪೂಜೆ ಮಾಡಬಹುದು.
ಸಾಮಾನ್ಯವಾಗಿ ವರಲಕ್ಷ್ಮಿ ವ್ರತವನ್ನು ಆಚರಿಸುವವರು ತಮ್ಮ ಮನೆಯಲ್ಲಿ ಕಲಶವನ್ನು ಇಟ್ಟುಕೊಂಡು ಮಹಾಲಕ್ಷ್ಮಿ ಪೂಜಿಸುತ್ತಾರೆ. ವರಲಕ್ಷ್ಮಿ ಪೂಜೆಯನ್ನು ಸಾಮಾನ್ಯವಾಗಿ ಮಾಡದವರು ಕೂಡ ಮೂರು ವಸ್ತುಗಳಿಂದ ಮಹಾಲಕ್ಷ್ಮಿಯ ಪೂಜೆ ಮಾಡಬಹುದು. ಈ ಪೂಜೆಯನ್ನು ಮಾಡಿದ್ರೆ ಲಕ್ಷ್ಮಿಯ ಕೃಪೆಯಿಂದ ಸಕಲ ಸಂಪತ್ತು ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ವರಮಹಾಲಕ್ಷ್ಮಿಯ ಪೂಜೆ ಮಾಡುವಾಗ ತರ ತರಹದ ಹಣ್ಣುಗಳು, ಸಿಹಿ ತಿನಿಸುಗಳು, ಬಳೆಗಳು, ದುಡ್ಡು, ವಿಧ ವಿಧವಾದ ಹೂವುಗಳು, ಬುಕ್ಗಳನ್ನು ಇಡುತ್ತಾರೆ.
ಆಷಾಢ ಮುಗಿದು ಶ್ರಾವಣ ಮಾಸ ಶುರುವಾಗಿದ್ದು, ವರಮಹಾಲಕ್ಷ್ಮಿ ಹಬ್ಬದ ಸಡಗರ ಜೋರಾಗಿದೆ. ಒಂದೆಡೆ ಹಬ್ಬದ ಸಂಭ್ರಮವಾದರೆ ಮತ್ತೊಂದೆಡೆ ಮಾರುಕಟ್ಟೆಗಳಲ್ಲಿ ಹೂವುಗಳದ್ದೇ ಕಾರುಬಾರು. ಪ್ರತಿ ಸಲವೂ ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಹೂವುಗಳ ಬೆಲೆ ಹೆಚ್ಚಾಗುತ್ತದೆ. ಅದರಂತೆ ಈ ಸಲವೂ ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವಿನ ರೇಟ್ ಗಗನಕ್ಕೇರಿದೆ. ಹಬ್ಬಕ್ಕೆ ಇನ್ನು 2 ದಿನಗಳಷ್ಟೇ ಬಾಕಿಯಿರುವಾಗಲೇ ಹೂವುಗಳಿಗೆ ಚಿನ್ನದ ಬೆಲೆ ಬಂದಿದೆ.