ಬೆಂಗಳೂರು:- ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನ್ ಮುಖಾಮುಖಿ ಆಗಿದ್ದಾವೆ.
ಇದೇ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಇಡಿ ದೇಶ ಇಂದು ಎದುರು ನೋಡ್ತಿದೆ.ಚಾಂಪಿಯನ್ಸ್ ಟ್ರೋಪಿ ಪಂದ್ಯ ನಡೆಯುತ್ತಿದೆ. ಭಾರತ ಪಾಕಿಸ್ತಾನದ ನಡುವೆ ಪಂದ್ಯ ಅಲ್ಲ, ಇದು ಯುದ್ದ ಭಾರತಕ್ಕೆ ಶುಭವಾಗಲಿ ಎಂದಿದ್ದಾರೆ.
ಇದೇ ವೇಳೆ ನಿನ್ನೆ ಹ್ಯಾರಿಸ್ ಬೆಂಬಲಿಗನ ಹತ್ಯೆ ಪ್ರಕರಣಕ್ಕೆ ಉತ್ತರಿಸಿ, ಇದಕ್ಕೆ ಸರಕರಾವೇ ಹೊಣೆ. ಇಂದು ಬೆಂಗಳೂರು ಸೇಫ್ ಇಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನಾನು ರಾಜೀನಾಮೆ ನೀಡುತ್ತೇನೆ ಎನ್ನುವ ದಾಟಿಯಲ್ಲಿ ಗೃಹ ಮಂತ್ರಿ ಮಾತಾಡಿದ್ರೆ ದೇಶ ದ್ರೋಹಿಗಳಿಗೆ ಆನೆ ಬಲ ಬಂದಂತೆ ಆಗುತ್ತದೆ.
ನಿಮ್ಮನ್ನು ಜನ ಆಯ್ಕೆ ಮಾಡಿದ್ದು ಒಳ್ಳೆಯ ಆಡಳಿತ ನೀಡಲು ಎಂದರು.
ಇದೇ ವೇಳೆ ಕಂಡೆಕ್ಟರ್ ಮೇಲೆ ಹಲ್ಲೆ ಪ್ರಕರಣಕ್ಕೆ ಮಾತನಾಡಿ, ಈ ನೆಲದ ಗಾಳಿ ನೀರು ಕುಡಿದು ಈ ರೀತಿ ನಡೆದುಕೊಳ್ಳೋಕೆ ಸಾಧ್ಯವಿಲ್ಲ. ಇದನ್ನು ಕ್ಷಮಿಸೋಕೆ ಸಾಧ್ಯವಿಲ್ಲ.
ಕನ್ನಡಿಗರು ದನಿ ಎತ್ತಬೇಕು
ಇಂತವರನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡಬೇಕು ಎಂದರು.