ಶ್ರೀಲಂಕಾ ಪ್ರವಾಸದ ನಂತರ ಭಾರತ ತಂಡಕ್ಕೆ ಸುದೀರ್ಘ ಬ್ರೇಕ್ ಸಿಕ್ಕಿದೆ. 42 ದಿನಗಳ ಬಳಿಕ ಭಾರತ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲಿದೆ. ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ಗಳ ಸರಣಿಯೊಂದಿಗೆ ಟೀಮ್ ಇಂಡಿಯಾದ ಕ್ರಿಕೆಟ್ ವೇಳಾಪಟ್ಟಿ ಪುನರಾರಂಭವಾಗಲಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಭಾರತ ತಂಡ 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದರೊಂದಿಗೆ ಭಾರತ ತಂಡದ ಟೀಮ್ ಮ್ಯಾನೇಜ್ಮೆಂಟ್ ಮತ್ತು ಆಯ್ಕೆಗಾರರು ಅತ್ಯುತ್ತಮ ಟೆಸ್ಟ್ ತಂಡವನ್ನು ಆಯ್ಕೆ ಮಾಡಲು ಮಾಸ್ಟರ್ ಪ್ಲಾನ್ ಹಾಕಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು ಪ್ರತಿಷ್ಠಿತ ದೇಶಿ ಕ್ರಿಕೆಟ್ ಟೂರ್ನಿಯಾದ 2024ರ ದುಲೀಪ್ ಟ್ರೋಫಿಯನ್ನು ಬಳಸಿಕೊಳ್ಳಲು ಬಯಸುತ್ತಿದ್ದಾರೆ. ಟೀಮ್ ಇಂಡಿಯಾದ ಎಲ್ಲಾ ಸ್ಟಾರ್ ಆಟಗಾರರಿಗೆ ದುಲೀಪ್ ಟ್ರೋಫಿ ಆಡಲು ಈಗಾಗಲೇ ಆದೇಶ ನೀಡಲಾಗಿದೆ.
IND Vs SL: ಈ ಸರಣಿಯಲ್ಲಿ ಒಂದೇ ಒಂದು ಎಸೆತವನ್ನು ಕೂಡ ನಾನು ನೋಡಲಿಲ್ಲ: ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್
ದುಲೀಪ್ ಟ್ರೋಫಿಯು ಭಾರತದಲ್ಲಿ ಆಡಲಾಗುವ ದೇಶೀಯ ಟೆಸ್ಟ್ ಕ್ರಿಕೆಟ್ ಟೂರ್ನಿ. ಈ ಟೂರ್ನಿಗೆ ಮಾಜಿ ಆಟಗಾರ ದುಲೀಪ್ಸಿನ್ಜಿ ಅವರ ಹೆಸರನ್ನು ಇಡಲಾಗಿದೆ.
ದುಲೀಪ್ ಟ್ರೋಫಿ ಯಾವಾಗ ಶುರುವಾಯಿತು?
ದುಲೀಪ್ ಟ್ರೋಫಿಯನ್ನು 1961-62 ರಲ್ಲಿ ಮೊದಲ ಬಾರಿಗೆ ಆಡಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ.
ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯುವ ತಂಡಗಳಾವುವು?
ಈ ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳು ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.
- ಕೇಂದ್ರ ವಲಯ
- ದಕ್ಷಿಣ ವಲಯ
- ಪೂರ್ವ ವಲಯ
- ಪಶ್ಚಿಮ ವಲಯ
- ಉತ್ತರ ವಲಯ
- ಈಶಾನ್ಯ ವಲಯ
ದುಲೀಪ್ ಟ್ರೋಫಿಯ ವಲಯ ರಾಜ್ಯಗಳಾವುವು?
- ಉತ್ತರ ವಲಯ : ಚಂಡೀಗಢ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಸರ್ವೀಸಸ್ ತಂಡಗಳು.
- ದಕ್ಷಿಣ ವಲಯ : ಆಂಧ್ರಪ್ರದೇಶ, ಗೋವಾ, ಹೈದರಾಬಾದ್ ಕರ್ನಾಟಕ, ಕೇರಳ, ಪಾಂಡಿಚೇರಿ ಮತ್ತು ತಮಿಳುನಾಡು.
- ಕೇಂದ್ರ ವಲಯ : ಛತ್ತೀಸ್ಗಢ, ಮಧ್ಯಪ್ರದೇಶ, ರೈಲ್ವೆ, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ವಿದರ್ಭ.
- ಪೂರ್ವ ವಲಯ : ಅಸ್ಸಾಂ, ಬಿಹಾರ, ಬಂಗಾಳ, ಜಾರ್ಖಂಡ್, ಒಡಿಶಾ ಮತ್ತು ತ್ರಿಪುರಾ.
- ಈಶಾನ್ಯ ವಲಯ : ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ.
- ಪಶ್ಚಿಮ ವಲಯ : ಬರೋಡಾ, ಗುಜರಾತ್, ಮಹಾರಾಷ್ಟ್ರ, ಮುಂಬೈ ಮತ್ತು ಸೌರಾಷ್ಟ್ರ.
ಈ ರಾಜ್ಯಗಳ ಆಟಗಾರರು ಆಯಾ ವಲಯಗಳ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಹಿಂದೆ ಈ ವಲಯಗಳ ತಂಡಗಳನ್ನು ಎಲೈಟ್ ಹಾಗೂ ಇಂಡಿಯಾ ರೆಡ್, ಬ್ಲೂ, ಗ್ರೀನ್… ಹೆಸರಿನಲ್ಲಿ ಕಣಕ್ಕಿಳಿಸಲಾಗಿತ್ತು. ಹಾಗೆಯೇ ಈ ಬಾರಿ ಈ ವಲಯಗಳಿಗೆ A,B,C,D,E,F ಎಂದು ಹೆಸರಿಸಡಲಾಗುತ್ತದೆ. ಅದರಂತೆ ಇಂಡಿಯಾ ಎ, ಇಂಡಿಯಾ ಬಿ, ಇಂಡಿಯಾ ಸಿ, ಇಂಡಿಯಾ ಡಿ, ಇಂಡಿಯಾ ಇ ಮತ್ತು ಇಂಡಿಯಾ ಎಫ್ ತಂಡಗಳು ಕಣಕ್ಕಿಳಿಯಲಿವೆ.