ಬಿಗ್ ಬಾಸ್ ಶೋನ ಪ್ರತಿ ಸೀಸನ್ನಲ್ಲಿಯೂ ಒಬ್ಬರಲ್ಲ ಒಬ್ಬರು ಜೋಡಿಗಳಾಗಿ ಹೈಲೆಟ್ ಆಗುತ್ತಾರೆ. ಸ್ನೇಹಿತ್ ಜೊತೆ ನಮ್ರತಾ ಲವ್ವಿ ಡವ್ವಿ ಇತ್ತು. ಆದರೆ ಅವರ ಎಲಿಮಿನೇಷನ್ ನಂತರ ಕಾರ್ತಿಕ್ (Karthik) ಜೊತೆ ನಮ್ರತಾಗೆ (Namratha) ಸಲುಗೆ ಜಾಸ್ತಿ ಆಗಿದೆ. ಇದೀಗ ಕಾರ್ತಿಕ್ ಬಗೆಗಿನ ಮನದಾಳದ ಮಾತನ್ನು ವಿನಯ್ ಬಳಿ ಹೇಳಿಕೊಂಡಿದ್ದಾರೆ. ಆಗ ಕಾರ್ತಿಕ್ಗೆ ಬೀಳಬೇಡ ಅಂತ ನಮ್ರತಾಗೆ, ವಿನಯ್ (Vinay Gowda) ಕಿವಿಹಿಂಡಿದ್ದಾರೆ.
ದೊಡ್ಮನೆಗೆ ಬರುವ ಮುನ್ನವೇ ನಮ್ರತಾ, ವಿನಯ್ ಅವರು ಒಳ್ಳೆಯ ಸ್ನೇಹಿತರು. ವಿನಯ್ ಟೀಂನಲ್ಲಿದ್ದುಕೊಂಡು ನಮ್ರತಾ ಆಟ ಆಡುತ್ತಿದ್ದಾರೆ. ಸ್ವಂತ ಅಸ್ತಿತ್ವ ಇಲ್ಲ, ವಿನಯ್ ನೆರಳಿನಲ್ಲಿ ಬದುಕುತ್ತಿದ್ದಾರೆ ಎಂದು ಮನೆಯ ಸ್ಪರ್ಧಿಗಳೇ ನಮ್ರತಾ ವಿರುದ್ಧ ಅಪಸ್ವರ ಎತ್ತಿದ್ದರು. ಯಾರು ಏನೇ ಹೇಳಿದ್ರೂ ಕೂಡ ನಾನು ನನ್ನ ಆಟವನ್ನೇ ಆಡ್ತಿದ್ದೀನಿ ಎಂದು ಹೇಳಿದ್ದರು ನಮ್ರತಾ. ಆಟ ಬೇರೆ ಫ್ರೆಂಡ್ಶಿಪ್ ಬೇರೆ ಎಂದು ನಮ್ರತಾ ಸಮರ್ಥನೆ ನೀಡಿದ್ದರು.
ಇನ್ನೂ ಮೊನ್ನೆಯಷ್ಟೇ ಸದಾ ಫ್ಲಟ್ ಮಾಡೋ ಕಾರ್ತಿಕ್ ನಡೆಗೆ ನಮ್ರತಾ ಗುಡುಗಿದ್ದರು. ನನ್ನ ಮೇಲೆ ಫೀಲಿಂಗ್ಸ್ ಇಲ್ಲ ಅಂದ್ಮೇಲೆ ಯಾಕೆ ಫ್ಲರ್ಟ್ ಮಾಡುತ್ತೀರಿ ಎಂದು ಕಾರ್ತಿಕ್ಗೆ ನಮ್ರತಾ ಕ್ಲಾಸ್ ತೆಗೆದುಕೊಂಡಿದ್ದರು. ಬಳಿಕ ಕಾರ್ತಿಕ್, ಇನ್ನೂ ಮುಂದೆ ನಾನು ಹೀಗೆಲ್ಲಾ ವರ್ತಿಸೋದಿಲ್ಲ ಎಂದು ಕ್ಷಮೆಯಾಚಿಸಿದ್ದರು. ಈಗ ವಿನಯ್ ಬಳಿ ಕಾರ್ತಿಕ್ ಜೊತೆಗಿನ ಬಾಂಧವ್ಯದ ಬಗ್ಗೆ ನಮ್ರತಾ ಮಾತನಾಡಿದ್ದಾರೆ.
Bigg News: ತಡರಾತ್ರಿ ಪಾರ್ಟಿ ಮಾಡಿದ ಆರೋಪ : ಪೊಲೀಸ್ ಠಾಣೆಗೆ ಹಾಜರಾದ ನಟರು: Video
ನನಗೆ ಆರಂಭದಲ್ಲಿ ಕಾರ್ತಿಕ್ ತುಂಬಾ ಇರಿಟೇಟ್ ಅಂತ ಅನಿಸ್ತಿತ್ತು. ಈಗ ಅವರು ಒಳ್ಳೆಯ ಮನುಷ್ಯ ಅಂತ ಅನಿಸ್ತಿದೆ. ಅವರು ನನ್ನ ಕೈ ಹಿಡ್ಕೊಂಡು ಕೂತಾಗ ಕಂಫರ್ಟ್ ಅಂತ ಅನಿಸತ್ತೆ ಎಂದು ನಮ್ರತಾ ಅವರು ವಿನಯ್ ಗೌಡ ಮುಂದೆ ಹೇಳಿಕೊಂಡಿದ್ದಾರೆ. ಆಗ ವಿನಯ್ ಅವರು ನಮ್ರತಾಗೆ ಕಾರ್ತಿಕ್ಗೆ ಬೀಳಬೇಡ ಎಂದು ಕಿವಿಮಾತು ಹೇಳಿದ್ದಾರೆ. ಕಾರ್ತಿಕ್ ಸಖತ್ ಕೇರಿಂಗ್, ಸ್ವೀಟ್, ಒಳ್ಳೆಯ ಹುಡುಗ.
ಮುಂಚಿನಂತೆ ಇರೀಟೇಟ್ ಆಗೋದು ನಿಂತಿದೆ. ಬಳಿಕ ಕಾರ್ತಿಕ್ ನನ್ನ ಕೈ ಹಿಡ್ಕೊಂಡು ಕೂತಾಗ ಕಂಫರ್ಟ್ ಅಂತ ಅನಿಸತ್ತೆ ಎಂದು ನಮ್ರತಾ ಅವರು ವಿನಯ್ ಬಳಿ ಹೇಳಿಕೊಂಡರು. ವಿನಯ್ ನಗುತ್ತಲೇ ನಮ್ರತಾ ಕಾಲೆಳೆದರು. ಕೂಡಲೇ ನಮ್ರತಾ, ನಮ್ಮದು ಫ್ರೆಂಡ್ಶಿಪ್ ಅಂತಹದ್ದೇನು ಇಲ್ಲ ಅಂತ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದರು. ಆದರೆ ನಮ್ರತಾ ನಡೆಗೆ ವೀಕ್ಷಕರು ಕನ್ಫೂಸ್ ಆಗಿದ್ದಾರೆ. ಕಾರ್ತಿಕ್ ಜೊತೆಗಿನ ನಮ್ರತಾ ಒಡನಾಟ ನೋಡಿ ಸ್ನೇಹಿತ್ ಕಥೆಯೇನು ಅಂತ ಕೇಳ್ತಿದ್ದಾರೆ ಅಭಿಮಾನಿಗಳು. ಎಲ್ಲದ್ದಕ್ಕೂ ಬಿಗ್ ಬಾಸ್ ಶೋ ಮುಗಿದ ಮೇಲೆಯೇ ಉತ್ತರ ಸಿಗಲಿದೆ.