ಮೆದುಳಿನ ಭಾಗಗಳಿಗೆ ಸಾಕಷ್ಟು ರಕ್ತ ಪೂರೈಕೆ ಆಗದೇ ಹೋದಾಗ ಮೆದುಳಿನ ಸ್ಟ್ರೋಕ್ ಸಂಭವಿಸುತ್ತದೆ. ಮಾರಣಾಂತಿಕ ಮೆದುಳಿನ ಸ್ಟ್ರೋಕ್ ಸಾಕಷ್ಟು ಸಮಸ್ಯೆ ತಂದೊಡ್ಡುತ್ತದೆ. ಸ್ಟ್ರೋಕ್ ಆರೋಗ್ಯ ಸಮಸ್ಯೆಯನ್ನು ಕೆಲವೊಮ್ಮೆ ಮೆದುಳಿನ ದಾಳಿ ಎಂದು ಕರೆಯುತ್ತಾರೆ. ದೇಹದ ಇತರೆ ಅಂಗಗಳಿಗೆ ಹೇಗೆ ರಕ್ತ ಸಂಚಾರ ಹಾಗೂ ರಕ್ತ ಪೂರೈಕೆ ಆಗುವುದು ಮುಖ್ಯವೋ, ಅಷ್ಟೇ ಮೆದುಳಿಗೂ ರಕ್ತ ಪೂರೈಕೆಯಾಗುವುದು ಮುಖ್ಯವಾಗುತ್ತದೆ.
ಗ್ರಾಮೀಣ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಿಸಬೇಕು: ಪ್ರಿಯಾಂಕ ಖರ್ಗೆ!
ದೇಹದಲ್ಲಿ ರಕ್ತನಾಳಗಳು ರಕ್ತವನ್ನು ಸರಬರಾಜು ಮಾಡಲು ಹಾಗೂ ಆಮ್ಲಜನಕ ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ರಕ್ತನಾಗಳು ಬ್ಲಾಕ್ ಆದರೆ ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಸಮಸ್ಯೆ ಉಂಟಾಗಬಹುದು. ಬ್ರೈನ್ ಸ್ಟ್ರೋಕ್ ವಿಶ್ವದಲ್ಲಿ ಸಾವಿಗೆ ಕಾರಣವಾಗಿರುವ 3 ನೇ ಸಾಮಾನ್ಯ ಕಾಯಿಲೆಯಾಗಿದೆ.
ಒಮ್ಮೆ ಪಾರ್ಶ್ವವಾಯು ರೋಗಕ್ಕೆ ಒಳಗಾದವರು ಪಡುತ್ತಿರುವ ಪಾಡು ಹೇಳತೀರದು. ಹಾಗಾಗಿ ಈ ಕಾಯಿಲೆಯ ರೋಗಲಕ್ಷಣಗಳು ಮೊದಲೇ ಕಾಣಿಸಿಕೊಂಡಿದ್ದಲ್ಲಿ ಈ ಬಗ್ಗೆ ನಿರ್ಲಕ್ಷಿಸಬೇಡಿ. ಈ ಕಾಯಿಲೆಯ ಬಗ್ಗೆ ಒಂದಷ್ಟು ವಿವರವಾದ ಮಾಹಿತಿಯನ್ನು ನಾವಿಂದು ತಿಳಿಯೋಣ ಬನ್ನಿ
ಸ್ಟ್ರೋಕ್ ರೋಗಿಗಳ ಜೀವನ ಸುಗಮವಾಗಿ ನಡೆಯುವುದಿಲ್ಲ. ಏಕೆಂದರೆ ಪ್ರತಿಯೊಂದು ಕಾರ್ಯವು ಇನ್ನೊಂದರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಪಾರ್ಶ್ವವಾಯು ಉಂಟಾಗುವ ಮುನ್ನವೇ ನೀವು ಜಾಗರೂಕರಾಗುವುದು ಉತ್ತಮ. ಹಾಗಾಗಿ ಈ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ನಿಮ್ಮ ವೈದ್ಯರನ್ನು ಸಂಪರ್ಕಿಸಿದರೆ ಸ್ಟ್ರೋಕ್ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಹಾಗಾದ್ರೆ ಪಾರ್ಶ್ವವಾಯು ರೋಗ ಲಕ್ಷಣಗಳು ಯಾವುವು ಎಂದು ತಿಳಿಯೋಣ ಬನ್ನಿ.
ಪಾರ್ಶ್ವವಾಯು ಸಂಭವಿಸುವ ಮುನ್ನ, ದೇಹದ ಒಂದು ಭಾಗವು ತುಂಬಾ ದುರ್ಬಲವಾಗಿರುತ್ತದೆ. ಮುಖ ಮತ್ತು ಕೈ ಕಾಲುಗಳು ದುರ್ಬಲವಾಗಿರುವಂತೆ ಕಾಣುತ್ತದೆ. ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ ಮತ್ತು ಇಂತಹ ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.
ಅಲ್ಲದೇ, ಅಸ್ಪಷ್ಟ ಮಾತು, ತೊದಲುವುದು ಮತ್ತು ನಿಲ್ಲಲು ಅಥವಾ ನಡೆಯಲು ಕಷ್ಟವಾಗುವುದು ಸಹ ಪಾರ್ಶ್ವವಾಯುವಿನ ಲಕ್ಷಣಗಳಾಗಿವೆ. ಪಾರ್ಶ್ವವಾಯು ಉಂಟಾಗುವ ಮುನ್ನ ದೃಷ್ಟಿ ನಷ್ಟ ಉಂಟಾಗಬಹುದು. ಕೆಲವೊಮ್ಮೆ ಎರಡೂ ಕಣ್ಣುಗಳ ದೃಷ್ಟಿಯೂ ಮಂದವಾಗಿ ಕಾಣಿಸುತ್ತದೆ. ಒಂದು ವಸ್ತುವನ್ನು ತೋರಿಸಿದರೆ ಅದು ಎರಡು ವಸ್ತುಗಳು ಎಂದು ಹೇಳುತ್ತಾರೆ. ಅಲ್ಲದೇ, ಸ್ಟ್ರೋಕ್ಗೂ ಮುನ್ನ ಕಾಣಿಸಿಕೊಳ್ಳುವ ತಲೆನೋವನ್ನು ಲಘುವಾಗಿ ತೆಗೆದುಕೊಳ್ಳಬೇಡಿ.
ಜೊತೆಗೆ, ಪಾರ್ಶ್ವವಾಯು ಸಂಭವಿಸುವುದಕ್ಕೂ ಮುನ್ನ ಶ್ರವಣ ದೋಷ ಉಂಟಾಗಬಹುದು. ಮೇಲಿನ ರೋಗಲಕ್ಷಣಗಳು ಕಂಡು ಬಂದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇದರಿಂದ ಪಾರ್ಶ್ವವಾಯು ಸಂಭವಿಸುವುದಕ್ಕೂ ಮುನ್ನವೇ ಅದನ್ನು ತಡೆಗಟ್ಟಬಹುದಾಗಿದೆ.
ಸ್ಟ್ರೋಕ್ಗಳ ವಿಧಗಳು: ರಕ್ತ ಕೊರತೆಯ ಸ್ಟ್ರೋಕ್: ರಕ್ತನಾಳ ಬ್ಲಾಕ್ ಆಗುವುದರಿಂದ ಇದು ಸಂಭವಿಸುತ್ತದೆ ಮತ್ತು ಮೆದುಳಿನ ಭಾಗದ ರಕ್ತನಾಳಗಳ ನಿಷ್ಕ್ರಿಯತೆಗೆ ಕಾರಣವಾಗುತ್ತದೆ.
ಹೆಮರಾಜಿಕ್ ಸ್ಟ್ರೋಕ್: ರಕ್ತನಾಳ ಒಡೆದು ಮೆದುಳಿನ ಅಂಗಾಂಶದೊಳಗೆ ರಕ್ತಸ್ರಾವ ಮತ್ತು ಅಂಗಾಂಶಗಳಿಗೆ ಹಾನಿಯಾದಾಗ ಈ ಸ್ಟ್ರೋಕ್ ಸಂಭವಿಸುತ್ತದೆ.