ಬೆಂಗಳೂರು: ನಾನು ವಿಶ್ವದ ದೊಡ್ಡ ಅರ್ಥಿಕ ತಜ್ಞನೋ? ಗ್ರಾಮದ ಆರ್ಥಿಕ ತಜ್ಞನೋ ಎಂಬುದು ಎಚ್ಡಿ ಕುಮಾರಸ್ವಾಮಿ ಅವರಿಗೆ ಏಕೆ ಬೇಕು? ಎಂದು ಸಿಎಂ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು. ಬಸವರಾಜ ರಾಯರೆಡ್ಡಿ ಅವರನ್ನು ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡುವ ಸಿದ್ದರಾಮಯ್ಯ ಅವರ ನಡೆಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದರು. ಬಸವರಾಜ ರಾಯರೆಡ್ಡಿ ಏನು ದೊಡ್ಡ ಆರ್ಥಿಕ ತಜ್ಞನೇ? ಎಂದು ಟೀಕಿಸಿದ್ದರು.
https://ainlivenews.com/lemon-juice-is-also-poisonous-if-consumed-excessively/
ಇದಕ್ಕೆ ತಿರುಗೇಟು ನೀಡಿದ ರಾಯರೆಡ್ಡಿ, “ನಾನು ವಿಶ್ವದ ದೊಡ್ಡ ಅರ್ಥಿಕ ತಜ್ಞನೋ, ಗ್ರಾಮದ ಆರ್ಥಿಕ ತಜ್ಞನೋ ಅವರಿಗ್ಯಾಕೆ..? ಅವರಿಗ್ಯಾಕೆ ಬೇಕು, ನನ್ನ ಜೊತೆ ಚರ್ಚೆಗೆ ಕುಳಿತುಕೊಳ್ಳಲಿ, ನನಗೆ ಏನು ಗೊತ್ತಿದ್ಯೋ ಮಾತನಾಡುತ್ತೇನೆ, ಅವರಿಗೆ ಏನು ಗೊತ್ತಿದೆಯೋ ಅದನ್ನು ಅವರು ಮಾತಾಡಲಿ’’ ಎಂದು ಸವಾಲು ಹಾಕಿ ದರು. ಎಚ್ಡಿ ಅವರು ಏನು ದೊಡ್ಡ ಆರ್ಥಿಕ ತಜ್ಞರಾ? ಪ್ರತಿಯೊಬ್ಬರಿಗೂ ಅವರದ್ದೇ ಆದ ನೈಪುಣ್ಯತೆ ಇರುತ್ತದೆ. ಹಾಗೆಲ್ಲಾ ಹಗುರವಾಗಿ ಮಾತಾಡಬಾರದು ಎಂದರು.