ಅನ್ನವನ್ನು ಅತಿಯಾಗಿ ಪ್ರೀತಿಸುವ ದೇಶವೊಂದಿದ್ದರೆ, ಅದು ನಮ್ಮ ಭಾರತ. ಇಲ್ಲಿ ಎರಡು ಹೊತ್ತು ಕೂಡ ಅನ್ನ ಊಟ ಮಾಡಿ, ಆರೋಗ್ಯಕಾರಿ ಜೀವನ ನಡೆಸುತ್ತಿರುವ ಜನರು, ನಮ್ಮ ಕಣ್ಣ-ಮುಂದೆಯೇ ಇದ್ದಾರೆ.
ಫೆ. 15ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ: ಸಚಿವ ಕೆ.ವೆಂಕಟೇಶ್
ದೇಶದ ಮೂಲೆ ಮೂಲೆಗಳಲ್ಲಿಯೂ ಕೂಡ ಅಂದರೆ ದಕ್ಷಿಣ, ಉತ್ತರ ಮತ್ತು ಪಶ್ಚಿಮ ಭಾಗದ ಜನರು ತಮ್ಮ ದಿನನಿತ್ಯದ ಆಹಾರದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಅನ್ನದ ಬಳಕೆ ಮಾಡಿ ಕೊಂಡು ಬರುತ್ತಿರುವರು. ದೈಹಿಕ ಬೆಳವಣಿಗೆಗೆ ಹಾಗೂ ದೇಹಕ್ಕೆ ತಕ್ಷಣ ಶಕ್ತಿ ಒದಗಿಸುವಲ್ಲಿ ಅನ್ನದ ಮಹತ್ವ ಮರೆಯುವ ಹಾಗಿಲ್ಲ. ಹೀಗಾಗಿ ಮನುಷ್ಯನ ದೇಹದ ಆರೋಗ್ಯಕರ ಅಭಿವೃದ್ಧಿ ಯಲ್ಲಿ ಅನ್ನಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ.
ದಿನದಲ್ಲಿ ಎರಡು ಹೊತ್ತು ಅನ್ನ ತಿಂದ್ರೆ ಏನೆಲ್ಲಾ ಸಮಸ್ಯೆಗಳಾಗಬಹುದು ಎಂದು ತಿಳಿಯೋಣ ಬನ್ನಿ.
ಅನೇಕ ಮಂದಿ ಅನ್ನ ಎಂದರೆ ಇಷ್ಟ. ಆದರೆ ಇದನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಉದ್ದೇಶದಿಂದ ಅನ್ನವನ್ನು ತ್ಯಜಿಸುತ್ತಾರೆ. ವಾಸ್ತವವಾಗಿ ಅನ್ನವನ್ನು ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇವಿಸಿದರೆ ದೇಹಕ್ಕೆ ಪ್ರಯೋಜನಕಾರಿಯಾಗಿದೆ ಮತ್ತು ಇದರಲ್ಲಿರುವ ಕಾರ್ಬೋಹೈಡ್ರೇಟ್ಗಳು ದೇಹದ ಅಗತ್ಯವನ್ನು ಪೂರೈಸುತ್ತದೆ. ಆದರೆ ದಿನಕ್ಕೆ ಒಂದು ಬಾರಿಗಿಂತಲೂ ಹೆಚ್ಚು ಬಾರಿ ಅನ್ನವನ್ನು ತಿನ್ನುವುದು ದೇಹದಲ್ಲಿ ಹೆಚ್ಚುವರಿ ಕಾರ್ಬೋಹೈಡ್ರೇಟ್ಗಳಿಗೆ ಕಾರಣವಾಗುತ್ತದೆ
ಅಲ್ಲದೇ ಇದು ತೂಕ ಹೆಚ್ಚಳ ಮತ್ತು ಮಧುಮೇಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಅನ್ನ ಬದಲಿಗೆ, ನಿಮ್ಮ ಆಹಾರದಲ್ಲಿ ಧಾನ್ಯಗಳು, ತರಕಾರಿಗಳು ಮತ್ತು ನೇರ ಪ್ರೋಟೀನ್ಗಳಂತಹ ಇತರ ಪೌಷ್ಟಿಕ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಇವುಗಳನ್ನು ಪ್ರತಿದಿನ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸಿಗುತ್ತದೆ. ಆದ್ದರಿಂದ ನೀವು ದಿನಕ್ಕೆ ಎರಡು ಬಾರಿ ಅನ್ನವನ್ನು ತಿನ್ನುವುದನ್ನು ತಪ್ಪಿಸಬೇಕು. ಹಾಗಾದ್ರೆ ಹೆಚ್ಚು ಬಾರಿ ಅನ್ನ ತಿನ್ನುವುದರಿಂದ ಆಗುವ ಸಮಸ್ಯೆಗಳೇನು ಎಂದು ನೋಡೋಣ ಬನ್ನಿ
ಹೆಚ್ಚುವರಿ ಕಾರ್ಬೋಹೈಡ್ರೇಟ್ಗಳು: ಅನ್ನದಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿರುವುದರಿಂದ ದಿನಕ್ಕೆರಡು ಬಾರಿ ಅನ್ನವನ್ನು ತಿನ್ನಬಾರದು. ಹೆಚ್ಚು ಅನ್ನವನ್ನು ತಿನ್ನುವುದರಿಂದ ದೇಹದಲ್ಲಿ ಹೆಚ್ಚುವರಿ ಕಾರ್ಬೋಹೈಡ್ರೇಟ್ಗಳು ಉಂಟಾಗಲು ಕಾರಣವಾಗಿದೆ. ಇದು ಕಾಲಾನಂತರದಲ್ಲಿ ತೂಕ ಹೆಚ್ಚಳಕ್ಕೂ ಕಾರಣವಾಗಬಹುದು. ಆದ್ದರಿಂದ ಬಿಳಿ ಅನ್ನದ ಬದಲು ಕಂದು ಅಕ್ಕಿ ಅಥವಾ ಕೆಂಪು ಅಕ್ಕಿಯಿಂದ ಅನ್ನ ಮಾಡಿ ತಿನ್ನಿ. ಇದರಲ್ಲಿ ಫೈಬರ್, ವಿಟಮಿನ್ ಬಿ ಮತ್ತು ಮೆಗ್ನೀಸಿಯಮ್ ಇರುತ್ತದೆ.
ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಳ: ಮಧುಮೇಹದಿಂದ ಬಳಲುತ್ತಿರುವವರು ದಿನಕ್ಕೆ ಎರಡು ಬಾರಿ ಅನ್ನ ತಿನ್ನುವುದನ್ನು ಖಂಡಿತವಾಗಿ ನಿಲ್ಲಿಸಬೇಕು. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಬಹುದು ಮತ್ತು ನಿರ್ಜಲೀಕರಣಕ್ಕೆ ಕೂಡ ಕಾರಣವಾಗಬಹುದು. ಹಾಗಾಗಿ ಮಧುಮೇಹಿಗಳು ದಿನಕ್ಕೆರಡು ಬಾರಿ ಅನ್ನ ತಿನ್ನಬಾರದು
ಅಪೌಷ್ಟಿಕತೆ: ಹೆಚ್ಚು ಅನ್ನವನ್ನು ತಿನ್ನುವುದು ಧಾನ್ಯಗಳು ಮತ್ತು ತರಕಾರಿಗಳಿಂದ ನೀವು ಪಡೆಯುವ ವಿವಿಧ ಪೋಷಕಾಂಶಗಳನ್ನು ಮಿತಿಗೊಳಿಸುತ್ತದೆ. ಹೀಗಾಗಿ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು ದಿನಕ್ಕೆರಡು ಬಾರಿ ಅನ್ನ ತಿನ್ನದಿರುವುದು ಉತ್ತಮ.
ಜೀರ್ಣಕಾರಿ ಆರೋಗ್ಯ: ದಿನಕ್ಕೆರಡು ಬಾರಿ ಅನ್ನ ತಿನ್ನುವುದರಿಂದ ಹೊಟ್ಟೆಯುಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳು ಉಂಟಾಗುತ್ತದೆ.