ದೇಹದ ಮೇಲೆ ಹಲ್ಲಿ ಬಿದ್ದರೆ ಅದರ ಅರ್ಥ ಏನು ಎಂಬುದನ್ನು ಈ ಸುದ್ದಿ ನೋಡಿ ತಿಳಿಯಿರಿ.
ಗದಗ: ಕರವೇ ಟಿ ಎ ನಾರಾಯಣಗೌಡ ಹುಟ್ಟುಹಬ್ಬ.. ಕಾರ್ಯಕರ್ತರಿಂದ ವಿನೂತನ ಆಚರಣೆ!
ದೇಹದ ಮೇಲೆ ಹಲ್ಲಿ ಬೀಳುವುದರ ಬಗ್ಗೆ ಕೂಡ ಕೆಲವೊಂದು ಮಾತುಕತೆಗಳು ಇವೆ. ಇನ್ನು ಹಲ್ಲಿ ನಮ್ಮ ದೇಹದ ಬೇರೆ ಬೇರೆ ಭಾಗಗಳ ಮೇಲೆ ಬೀಳುವುದನ್ನ ಜೋತಿಷ್ಯ ಶಾಸ್ತ್ರದಲ್ಲಿ ಬೇರೆ ಬೇರೆ ರೀತಿಯಾಗಿ ಉಲ್ಲೇಖಿಸಲಾಗಿದ್ದು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಇದರ ಅದೃಷ್ಟ ಹಾಗೂ ದುರಾದೃಷ್ಟಗಳ ವಿಚಾರದ ಬಗ್ಗೆ ನೈಜ ಮಾಹಿತಿಯನ್ನು ನೀಡಲು ಹೊರಟಿದ್ದೇವೆ.
ಇನ್ನು ಇದರಲ್ಲಿ ಮಹಿಳೆಯರು ಹಾಗೂ ಪುರುಷರ ಮೇಲೆ ಹಲ್ಲಿ ಬೀಳುವುದನ್ನು ಕೂಡ ಬೇರೆ ಬೇರೆ ರೀತಿಯಲ್ಲಿ ವರ್ಗಿಕರಿಸಲಾಗಿದ್ದು ಅವುಗಳ ಪರಿಣಾಮ ಕೂಡ ಬೇರೆ ಬೇರೆ ಆಗಿರುತ್ತವೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗಿದ್ದು ಅವುಗಳನ್ನು ಕೂಡ ವಿಭಿನ್ನವಾಗಿ ನಿಮಗೆ ವಿವರಿಸುವ ಕೆಲಸವನ್ನು ಮಾಡುತ್ತೇವೆ. ಶಾಸ್ತ್ರಗಳ ಪ್ರಕಾರ ನೀವು ಕೇಳಿರಬಹುದು ಬಿಳಿಯ ಹಲ್ಲಿಯನ್ನು ಶುಭಕರ ಎಂಬುದಾಗಿ ಪರಿಗಣಿಸಲಾಗುತ್ತಿದೆ ಹಾಗೂ ಕಪ್ಪು ಹಲ್ಲಿಯನ್ನು ಅಶುಭ ಕರ ಎಂಬುದಾಗಿ ಪರಿಗಣಿಸಲಾಗುತ್ತಿದೆ
ಇನ್ನು ಹಲ್ಲಿಗಳು ಶಬ್ದ ಕೂಡ ನಮ್ಮ ಜೀವನದಲ್ಲಿ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎನ್ನುವಂತಹ ನಂಬಿಕೆ ಕೂಡ ಇದೆ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ಹಲ್ಲಿಯ ಬಗ್ಗೆ ನಿಮಗೆ ತಿಳಿಯದೆ ಇರುವಂತಹ ಕೆಲವೊಂದು ಪ್ರಮುಖ ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ.
ಹಲ್ಲಿ ಬೀಳುವುದರಿಂದ ಆಗುವ ಕೆಲವೊಂದು ಸಾಮಾನ್ಯ ಪರಿಣಾಮಗಳು:-
* ಎಡಗೈ ಮೇಲೆ ಹಲ್ಲಿ ಬೀಳುವುದರಿಂದ ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತದೆ.
* ಎಡಗೈನಲ್ಲಿರುವಂತಹ ಬೆರಳಿಗೆ ಹಲ್ಲಿ ತಾಕಿದರೆ ಇದರಿಂದಾಗಿ ನಿಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳು ಹೆಚ್ಚಾಗುತ್ತವೆ.
* ಪುರುಷರ ಬಲಗೈಗೆ ಹಲ್ಲಿ ತಾಕಿದರೆ ಖಂಡಿತವಾಗಿ ಶೀಘ್ರದಲ್ಲಿ ಗುಡ್ ನ್ಯೂಸ್ ಕೇಳಿ ಬರುತ್ತದೆ.
* ಒಂದು ವೇಳೆ ಹಲ್ಲಿ ನಿಮ್ಮ ತಲೆಯ ಮೇಲೆ ಬಿದ್ದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಆದಷ್ಟು ಬೇಗವಾಗಿ ಧನ ಆಗಮನ ಆಗಲಿದೆ ಹಾಗೂ ಕೈತುಂಬ ಸಂಪಾದನೆ ಆಗಲಿದೆ ಎಂಬುದಾಗಿ ಅರ್ಥವಾಗಿದೆ.
* ಈಗಾಗಲೇ ಹಾಸಿಗೆ ಹಿಡಿದಿರುವಂತಹ ವ್ಯಕ್ತಿಯ ಮೇಲೆ ಒಂದು ವೇಳೆ ಹಲ್ಲಿ ಬಿದ್ರೆ ಅವರ ಮರಣದ ಸಾಧ್ಯತೆ ಹೆಚ್ಚಾಗಿದೆ.
* ಒಂದು ವೇಳೆ ಒಬ್ಬ ವ್ಯಕ್ತಿಯ ಬಲ ಕಿವಿಯ ಮೇಲೆ ಹಲ್ಲಿ ಬಿದ್ದರೆ ಆತನ ಆಯಸ್ಸು ಇನ್ನಷ್ಟು ಹೆಚ್ಚಾಗುತ್ತದೆ ಎಂಬುದಾಗಿ ಪರಿಗಣಿಸಲಾಗುತ್ತದೆ.
* ಒಂದು ವೇಳೆ ಒಬ್ಬ ವ್ಯಕ್ತಿಯ ತುಟಿಯ ಮೇಲೆ ಹಲ್ಲಿ ಬಿದ್ದರೆ ಆತನ ಆರ್ಥಿಕ ಜೀವನ ಸಂಪೂರ್ಣವಾಗಿ ಕೆಳಮಟ್ಟಕ್ಕೆ ಹೋಗುತ್ತದೆ.
* ಒಂದು ವೇಳೆ ನಿಮ್ಮ ಹೃದಯ ಭಾಗಕ್ಕೆ ಹಲ್ಲಿ ಬಿದ್ದರೆ ಅವರ ಮರಣದ ಸಾಧ್ಯತೆ ಹೆಚ್ಚಾಗುತ್ತದೆ.