ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರ ನಡೆದರು. ವೈಯಕ್ತಿಕ ಕಾರಣಗಳನ್ನು ನೀಡಿ ಆಟವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಈಗ ಅವರು ದೊಡ್ಮನೆಗೆ ಅತಿಥಿಯಾಗಿ ಆಗಮಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ನಿತ್ಯವೂ ಬಿಗ್ ಬಾಸ್ ಶೋ ನೋಡುವ ಸುರೇಶ್ ಅವರು ಭವ್ಯಾ ಬಳಿ ಪ್ರಶ್ನೆ ಮಾಡಿದ್ದಾರೆ.
ಮೂಡಾ ಹಗರಣ ಸಂಬಂಧ: 300 ಕೋಟಿ ಮೌಲ್ಯದ 142 ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡ ಇ.ಡಿ.
ತ್ರಿವಿಕ್ರಂ ಬಳಿ ತೆರಳಿದ ಸುರೇಶ್ ‘ಚೆನ್ನಾಗಿದೆ ಲವ್’ ಎಂದರು. ‘ಪ್ರಪೋಸ್ ಮಾಡಿದ್ದು ಒಪ್ಪಿಕೊಂಡ್ರಾ’ ಎಂದು ಸುರೇಶ್ ಕೇಳಿದರು. ‘ಪ್ರಪೋಸಾ? ಏನ್ ಏನ್ ಹೇಳ್ತಾ ಇದೀರಾ’ ಎಂದು ಭವ್ಯಾ ಏನೂ ಗೊತ್ತಿಲ್ಲದಂತೆ ಆ್ಯಕ್ಟ್ ಮಾಡಿದರು. ಇದನ್ನು ಕೇಳಿ ಮನೆ ಮಂದಿಗೆ ಅಚ್ಚರಿ ಆಯಿತು. ಈ ರೀತಿಯ ವಿಚಾರವೇ ನಮಗೆ ಗೊತ್ತಿರಲಿಲ್ಲ ಎಂದರು. ‘ನಾನು ಮೂರು ವರ್ಷ ಮದುವೆ ಆಗಲ್ಲ’ ಎಂಬರ್ಥದಲ್ಲಿ ಮಾತನಾಡಿದರು.
ಭವ್ಯಾ ಹಾಗೂ ತ್ರಿವಿಕ್ರಂ ಮಧ್ಯೆ ಮಿಸ್ ಅಂಡರ್ಸ್ಟ್ಯಾಂಡಿಗ್ ಬರ್ತಿದೆ. ಈ ಬಗ್ಗೆ ಭವ್ಯಾ ಬಳಿ ಅನುಷಾ ರೈ ಪ್ರಶ್ನೆ ಮಾಡಿದ್ದಾರೆ. ‘ನಮ್ಮ ಮಧ್ಯೆ ಸಣ್ಣ ಸಣ್ಣ ವಿಚಾರಕ್ಕೆ ಮಿಸ್ ಅಂಡರ್ಸ್ಟ್ಯಾಂಡಿಗ್ ಬರುತ್ತಿದೆ. ನಂತರ ಕೆಲವೇ ನಿಮಿಷಗಳಲ್ಲಿ ಅದು ಸರಿ ಆಗುತ್ತಿದೆ’ ಎಂದು ಭವ್ಯ ಸ್ಪಷ್ಟನೆ ನೀಡಿದರು.