ಬೆಂಗಳೂರು;- ಬಿಜೆಪಿಯಿಂದ ಆಪರೇಷನ್ ಕಮಲ ಪ್ರಯತ್ನ ವಿಚಾರವಾಗಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಬಿಜೆಪಿಯವರಿಗೆ ಆಪರೇಷನ್ ಬಿಟ್ಟರೆ ಬೇರೆ ಇನ್ನೇನಾದರೂ ಗೊತ್ತಿದೆಯಾ?. ಆಪರೇಷನ್ ಒಂದೇ ಗೊತ್ತಿರೋದು. ಜನಕ್ಕೆ ಏನು ಬೇಕೋ ಅದನ್ನು ಮಾಡುವುದು ಗೊತ್ತಿಲ್ಲ ಅವರಿಗೆ. ಭ್ರಷ್ಟಾಚಾರದಲ್ಲಿ ಮುಳುಗಿ ಕೆಲಸ ಇಲ್ಲದೇ ಕೂತಿದ್ದಾರೆ ಇವತ್ತು. ಜನರೇ ತಿರಸ್ಕಾರ ಮಾಡಿದ್ದಾರೆ ಅವರನ್ನು. ಜನರು ಬಿಜೆಪಿ ಮೇಲೆ ನಂಬಿಕೆ ಕಳೆದುಕೊಂಡಾಗ ಈ ತರಹ ಮಾತಾಡೋದು ಸರ್ವೆ ಸಾಮಾನ್ಯ ಎಂದು ಟೀಕಿಸಿದರು.
ಜನರ ಮನಸ್ಸನ್ನು ಬೇರೆ ಕಡೆಗೆ ಒಯ್ಯಬೇಕು ಅಂದ್ರೆ ಬಿಜೆಪಿ ಆಪರೇಷನ್ ಹೆಸರೇ ಹೇಳಬೇಕು. ಬಿಜೆಪಿಗೆ ನಮ್ಮ ಗ್ಯಾರಂಟಿಗಳಿಂದ ಆಘಾತ ಆಗಿದೆ. ಆಘಾತ ತಪ್ಪಿಸಿಕೊಳ್ಳಲು ಆಪರೇಷನ್ ಕಮಲದ ಹೆಸರು ಹೇಳ್ತಿದ್ದಾರೆ. ವಿಪಕ್ಷ ನಾಯಕರು ಇದ್ದಾರೋ ಇಲ್ವೋ ಅವರಿಗೆ ಬಿಟ್ಟಿದ್ದು. ಆದರೆ ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದು, ನಮ್ಮ ತಟ್ಟೆಯಲ್ಲಿ ಜಿರಳೆ ಹುಡಿಕಿದರೆ ನಾವೇನು ಮಾಡೋಕಾಗತ್ತೆ? ಎಂದರು.
ಡಿ.ಕೆ. ಸುರೇಶ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಅಭಿವೃದ್ಧಿ ಕೆಲಸಕ್ಕೆ ಕೆಲವರು ಬರ್ತಾರೆ. ಅದು ಸ್ವಾಭಾವಿಕ. ವಿರೋಧ ಪಕ್ಷದವರೂ ಕೂಡ ಬರ್ತಾರೆ. ಅಭಿವೃದ್ಧಿ ವಿಚಾರ ಚರ್ಚೆಯಾಗಿದೆ ಎಂದು ತಿಳಿಸಿದರು.