ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ಅಂತ್ಯವಾಗಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಭಾರತ ತಂಡ 280 ರನ್ಗಳ ಭರ್ಜರಿ ಗೆಲುವು ಪಡೆದಿತ್ತು. ಇದು ಲೋಕಲ್ ಬಾಯ್ ರವಿಚಂದ್ರನ್ ಅಶ್ವಿನ್ಗೆ ಅತ್ಯಂತ ಸ್ಮರಣೀಯ ಟೆಸ್ಟ್ ಆಗಿದೆ. ಏಕೆಂದರೆ ಈ ಪಂದ್ಯದಲ್ಲಿ ಅವರು ಶತಕ ಹಾಗೂ 6 ವಿಕೆಟ್ ಸಾಧನೆ ಮಾಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಅದರಲ್ಲಿಯೂ ವಿಶೇಷವಾಗಿ ತಮ್ಮ ತಂದೆ, ಪತ್ನಿ ಸೇರಿ ತಮ್ಮ ಕುಟುಂಬದ ಸಮ್ಮುಖದಲ್ಲಿ ಅವರು ಈ ಸಾಧನೆ ಮಾಡಿದ್ದ ನಿಜಕ್ಕೂ ಅತ್ಯಂತ ವಿಶೇಷವಾಗಿದೆ.
IPL 2025: ಎಂ.ಎಸ್ ಧೋನಿ ಉಳಿಸಿಕೊಳ್ಳಲು ಸ್ಟಾರ್ ಆಟಗಾರರನ್ನೇ ಹೊರದಬ್ಬಿದ ಫ್ರಾಂಚೈಸಿ
ಪಂದ್ಯದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರವಿಚಂದ್ರನ್ ಅಶ್ವಿನ್ ಅವರು, ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ಕುಟಂಬ ಬೆಂಬಲ ಮತ್ತು ಅವರ ತಂದೆಯ ಬಾಂಧವ್ಯವನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ತಮ್ಮ ತಂದೆಯಲ್ಲಿ ಬದಲಾದ ವಿಶೇಷ ಸಂಗತಿಯನ್ನು ಸ್ಪಿನ್ ಆಲ್ರೌಂಡರ್ ಬಹಿರಂಗಪಡಿಸಿದ್ದಾರೆ. ಈ ಹಿಂದೆ ನಾನು ಮನೆಯಲ್ಲಿ ಇರಲು ನನ್ನ ತಂದೆ ಬಿಡುತ್ತಿರಲಿಲ್ಲ. ಮನೆಯಿಂದ ಹೊರಗೆ ಕಳುಹಿಸಿ ಕ್ರಿಕೆಟ್ ಆಡಲು ತಳ್ಳುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ಈ ನಡೆ ಬದಲಾಗಿದೆ. ನಾವಿಬ್ಬರೂ ಜತೆಯಾಗಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ನನ್ನ ತಂದೆ ತಮ್ಮ ಹೆಜ್ಜೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾನು ಹೆಚ್ಚಿನ ಸಮಯ ಮನೆಯಲ್ಲಿ ಇರುವುದನ್ನು ಅವರು ಇಷ್ಟಪಡುತ್ತಿದ್ದಾರೆ. ಈ ಹಿಂದೆ ಅವರು ನಾನು ಮನೆಯಲ್ಲಿ ಇರುವುದನ್ನು ಇಷ್ಟಪಡುತ್ತಿರಲಿಲ್ಲ ಹಾಗೂ ಹೆಚ್ಚು-ಹೆಚ್ಚು ಕ್ರಿಕೆಟ್ ಆಡಬೇಕೆಂದು ಅವರು ನನ್ನನ್ನು ಮನೆಯಿಂದ ಹೊರ ನೂಕುತ್ತಿದ್ದರು. ಆದರೆ, ಪರಿಸ್ಥಿತಿ ಈಗ ಸಂಪೂರ್ಣ ಬದಲಾಗಿದೆ. ಅಪ್ಪ ಮತ್ತು ನಾನು ಜತೆಯಾಗಿ ಮನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೇವೆ,” ಎಂದು ಹೇಳಿದ್ದಾರೆ ಅಶ್ವಿನ್.
ನನ್ನ ಪತ್ನಿ ಕೂಡ ನನ್ನ ವೃತ್ತಿ ಜೀವನ ಮತ್ತು ಕೌಟುಂಬಿಕ ಜೀವನದಲ್ಲಿ ಸಾಕಷ್ಟು ಸಮತೋಲವನ್ನು ತಂದುಕೊಡುತ್ತಿದ್ದಾರೆ. ನಾವೆಲ್ಲರೂ ಮಹತ್ವಾಕಾಂಕ್ಷೆಯುಳ್ಳವರು, ಮತ್ತು ಅದಕ್ಕಾಗಿಯೇ ನಾವು ಕ್ರಿಕೆಟ್ ಅನ್ನು ಆಡುತ್ತೇವೆ, ಆದರೆ ಕಳೆದ ಒಂದು ದಶಕದಿಂದ ನನ್ನ ಕ್ರಿಕೆಟ್ ಆಡುವ ಕಾರಣಗಳು ಸಂಪೂರ್ಣ ಬದಲಾಗಿವೆ. ನಾನು ಫಲಿತಾಂಶಕ್ಕೆ ಜಾಸ್ತಿ ಅಂಟಿಕೊಳ್ಳುತ್ತಿಲ್ಲ. ಒಂದು ವೇಳೆ ನೀವು ಫಲಿತಾಂಶಕ್ಕೆ ಜಾಸ್ತಿ ಅಂಡಿಕೊಂಡರೆ, ನೀವು ಹಿನ್ನಡೆ ಅನುಭವಿಸುವುದನ್ನು ಆರಂಭಿಸುತ್ತೀರಿ. ಆದರೆ, ನನ್ನ ಪತ್ನಿಯ ಪ್ರಭಾವದಿಂದ ಇದನ್ನು ನಾನು ಮೈಗೂಡಿಸಿಕೊಂಡಿದ್ದೇನೆ,” ಎಂದು ಆರ್ ಅಶ್ವಿನ್ ತಿಳಿಸಿದ್ದಾರೆ.