ನ್ಯೂಜಿಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಸೋಲಿನ ಭೀತಿ ಅನುಭವಿಸುತ್ತಿರುವ ಹೊತ್ತಲ್ಲೇ ನಾಯಕ ರೋಹಿತ್ ಶರ್ಮಾ ಮೇಲೆ ಟೀಕಾ ಪ್ರಹಾರವೂ ಹೆಚ್ಚಾಗಿದೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಧೋನಿ ಅವರು ಎಂತಹ ಪರಿಸ್ಥಿತಿಯನ್ನೂ ತನ್ನ ಹತೋಟಿಗೆ ತೆಗೆದುಕೊಳ್ಳುತ್ತಿದ್ದರು. ಆದರೆ ರೋಹಿತ್ ಶರ್ಮಾ ಈ ನಿಟ್ಟಿನಲ್ಲಿ ಕಲಿಯಬೇಕಾದ್ದು ಬಹಳಷ್ಟಿದೆ ಎಂದಿದ್ದಾರೆ.
ಒಂದು ಹಿನ್ನಡೆ ಅನ್ನುವಂಥಹದ್ದು ಎಷ್ಟೊಂದು ಟೀಕೆ ಟಿಪ್ಪಣಿಗಳಿಗೆ ಕಾರಣವಾಗುತ್ತದೆ ನೋಡಿ. ಬೆಂಗಳೂರಿನಲ್ಲಿ ಪ್ರವಾಸಿ ನ್ಯೂಜಲೆಂಡ್ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯ ಆಡುತ್ತಿರುವ ಟೀಂ ಇಂಡಿಯಾ ಸಹ ಇದೇ ಪರಿಸ್ಥಿತಿಯಲ್ಲಿದೆ. ಬಿದ್ದವನಿಗೆ ಒಂದು ಗುದ್ದು ಜಾಸ್ತಿ ಅಂತಾರಲ್ಲ. ಹಾಗೆ! ಅದರಲ್ಲೂ ಕಪ್ತಾನ ರೋಹಿತ್ ಶರ್ಮಾನ ಬಗ್ಗೆ ಬರುತ್ತಿರುವ ಟೀಕೆಗಳಿಗೆ ಲೆಕ್ಕವಿಲ್ಲ.
ಇದೀಗ ಟೀಂ ಇಂಡಿಯಾ ಮಾಜಿ ಬ್ಯಾಟರ್ ಸಂಜಯ್ ಮಾಂಜ್ರೇಕರ್ ಅವರು ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಡುವೆ ಹೋಲಿಕೆ ಮಾಡಿದ್ದಾರೆ. ರೋಹಿತ್ ಅವರು ಧೋನಿ ಅವರ ಹಾಗೆ ನಾಯಕತ್ವದ ತಂತ್ರಗಳನ್ನು ಕಲಿತುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.