ಕುಂಭಮೇಳದ ಹೈಲೇಟೇ ನಾಗಾಸಾಧುಗಳು. ಈ ಸಂತರಲ್ಲಿ ಮಹಿಳಾ ನಾಗಾ ಸಾಧುಗಳಿಗೆ ವಿಶೇಷ ಸ್ಥಾನವಿದೆ. ಮಹಿಳಾ ನಾಗಾ ಸಾಧುಗಳ ಜೀವನವು ಅನೇಕ ತೊಂದರೆಗಳು ಮತ್ತು ಸಂಪ್ರದಾಯಗಳಿಂದ ತುಂಬಿದೆ. ಒಬ್ಬ ಮಹಿಳಾ ನಾಗಾ ಸಾಧುವಿನ ಜೀವನವು ಮನೆ ಮತ್ತು ಕುಟುಂಬದಿಂದ ದೂರವಿರುವ ತಪಸ್ವಿ ಜೀವನವಾಗಿದೆ.
ವೃದ್ಧೆಯನ್ನು ಟಾರ್ಗೆಟ್ ಮಾಡಿ ಪರಿಚಯ ಮಾಡಿಕೊಂಡು ಮನೆಗಳ್ಳತನ! ಮಹಿಳೆ ಅರಸ್ಟ್
ಈ ಸಾಧುಗಳು ಕಠಿಣ ಸಾಧನೆ ಮತ್ತು ಕಟ್ಟುನಿಟ್ಟಿನ ಜೀವನಶೈಲಿಯನ್ನು ಅನುಸರಿಸಬೇಕು. ಇದರಲ್ಲಿ ಅವರ ನಡವಳಿಕೆ, ಆಲೋಚನೆಗಳು, ಉಡುಗೆ ತೊಡುಗೆ ಮತ್ತು ಪೂಜೆ ಸೇರಿವೆ. ಮಹಿಳಾ ನಾಗ ಸಾಧುಗಳನ್ನು ಪುರುಷ ನಾಗ ಸಾಧುಗಳಿಗಿಂತ ಹಲವು ವಿಧಗಳಲ್ಲಿ ಭಿನ್ನವಾಗಿ ಪರಿಗಣಿಸಲಾಗುತ್ತದೆ. ಮಹಿಳಾ ನಾಗಾ ಸಾಧುಗಳ ಬಗ್ಗೆ ಒಂದು ಪ್ರಮುಖ ಲಕ್ಷಣವೆಂದರೆ ಅವರು ದಿಗಂಬರರಲ್ಲ. ಅಂದರೆ ಅವರು ಬೆತ್ತಲೆಯಾಗಿ ಉಳಿಯುವುದಿಲ್ಲ. ಪುರುಷ ನಾಗ ಸಾಧುಗಳು ಬೆತ್ತಲೆಯಾಗಿದ್ದರೆ, ಮಹಿಳಾ ನಾಗ ಸಾಧುಗಳು ‘ಗಂಟಿ’ ಎಂದು ಕರೆಯಲ್ಪಡುವ ಹೊಲಿದ ಓಚರ್ ಬಣ್ಣದ ಉಡುಪನ್ನು ಧರಿಸುತ್ತಾರೆ. ಈ ಬಟ್ಟೆ ಅವರ ಜೀವನಪರ್ಯಂತ ಉಡುಗೆಯಾಗಿದೆ
ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ದೇಶದ ಮೂಲೆ ಮೂಲೆಯಿಂದಲೂ ನಾಗಾ ಸಾಧುಗಳು ಆಗಮಿಸುತ್ತಿದ್ದಾರೆ. 13 ಅಖಾಡಗಳ ನಾಗಾ ಸಾಧುಗಳು ಮತ್ತು ಮಹಿಳಾ ಸಾಧ್ವಿಗಳು ಪ್ರಯಾಗರಾಜ್ ಗೆ ಬಂದಿದ್ದಾರೆ. ಮಹಾ ಕುಂಭ ಮೇಳಕ್ಕೆ ಬಂದ ಮಹಿಳಾ ನಾಗಾ ಸಾಧುಗಳು ಪಿರಿಯಡ್ಸ್ ಸಮಯದಲ್ಲಿ ಏನು ಮಾಡುತ್ತಾರೆ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಆಗಾಗ್ಗೆ ಉದ್ಭವಿಸಬಹುದು. ಈ ಪ್ರಶ್ನೆಗೆ ಉತ್ತರವನ್ನು ನಾವು ಇಂದು ನಿಮಗೆ ಹೇಳುತ್ತೇವೆ.
ಮಹಿಳಾ ನಾಗಾ ಸಾಧುಗಳು ಪಿರಿಯಡ್ಸ್ ಇರದ ದಿನಗಳಲ್ಲಿ ಮಾತ್ರ ಗಂಗಾ ಸ್ನಾನ ಮಾಡುತ್ತಾರೆ. ಕುಂಭಮೇಳದ ಸಮಯದಲ್ಲಿ ಪಿರಿಯಡ್ಸ್ ಆದರೆ ತನ್ನ ಮೇಲೆ ಗಂಗಾಜಲವನ್ನು ಪ್ರೋಕ್ಷಿಸಿಕೊಂಡು ಬರುತ್ತಾರೆ. ಗಂಗಾ ನದಿಯಲ್ಲಿ ಮುಳುಗಿ ಸ್ನಾನ ಮಾಡುವುದಿಲ್ಲ.
ವಿಶೇಷವೆಂದರೆ, ಮಹಾಕುಂಭದಲ್ಲಿ ಪುರುಷ ನಾಗ ಸಾಧು ಸ್ನಾನ ಮಾಡಿದ ನಂತರ ಅಖಾಡದ ಮಹಿಳಾ ನಾಗಾ ಸಾಧುಗಳು ಸ್ನಾನ ಮಾಡುತ್ತಾರೆ. ನಾಗಾ ಸಾಧುಗಳಾಗುವ ಮೊದಲು ಅವರು ಜೀವಂತವಾಗಿರುವಾಗ ಪಿಂಡ ದಾನ ಮಾಡಬೇಕು. ತಲೆ ಬೋಳಿಸಿಕೊಳ್ಳಬೇಕು. 10 ರಿಂದ 15 ವರ್ಷಗಳ ಕಾಲ ಕಠಿಣ ಬ್ರಹ್ಮಚರ್ಯವನ್ನು ಅನುಸರಿಸಬೇಕು.
ಮಹಿಳಾ ನಾಗಾ ಸಾಧುಗಳು, ಪುರುಷ ನಾಗಾ ಸಾಧುಗಳಿಗಿಂತ ಭಿನ್ನವಾಗಿ ಇರುತ್ತಾರೆ. ಅವರು ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಹೀಗಾಗಿ ಪಿರಿಯಡ್ಸ್ ಸಮಯದಲ್ಲಿ ಸಮಸ್ಯೆ ಕಾಡುವುದಿಲ್ಲ. ಬೆಳಗಿನಿಂದ ಸಂಜೆಯವರೆಗೂ ಶಿವನ ಆರಾಧನೆಯಲ್ಲಿಯೇ ಕಾಲ ಕಳೆಯುತ್ತಾರೆ.
ಪುರುಷ ನಾಗಾ ಸಾಧುಗಳಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ನಾಗಾ ಸಾಧುಗಳು ವಿವಸ್ತ್ರರಾಗಿ ಓಡಾಡಲು ಅವಕಾಶ ಇರುವುದಿಲ್ಲ. ದೀಕ್ಷೆ ಪಡೆದು ನಾಗಾ ಸಾಧುಗಳಾದ ಮಹಿಳೆಯರು ಹೊಲಿಗೆ ಹಾಕದ ಕೇಸರಿ ವಸ್ತ್ರ ಧರಿಸಬೇಕು. ಸ್ತ್ರೀ ನಾಗಾ ಸಾಧುಗಳು ಹಣೆಯ ಮೇಲೆ ತಿಲಕ ಇಡುತ್ತಾರೆ.
ನಾಗ ಸಾಧು ಆಗಲು 10 ರಿಂದ 15 ವರ್ಷಗಳ ಕಾಲ ಕಠಿಣ ಬ್ರಹ್ಮಚರ್ಯವನ್ನು ಅನುಸರಿಸಬೇಕು. ಮಹಿಳಾ ನಾಗ ಸಾಧು ಆಗಲು ಅರ್ಹಳು ಮತ್ತು ದೇವರಿಗೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದಾಳೆ ಎಂದು ಗುರುಗಳಿಗೆ ಭರವಸೆ ನೀಡಬೇಕು. ಇದಾದ ನಂತರ ಗುರುಗಳು ನಾಗ ಸಾಧು ಆಗಲು ಅನುಮತಿ ನೀಡುತ್ತಾರೆ
ನಾಗ ಸಾಧುವಾಗುವ ಮೊದಲು ಮಹಿಳೆಯ ಹಿಂದಿನ ಜೀವನವನ್ನು ನೋಡಿ ಅವಳು ದೇವರಿಗೆ ಭಕ್ತಿ ಹೊಂದಿದ್ದಾಳೋ ಇಲ್ಲವೋ ಮತ್ತು ನಾಗ ಸಾಧುವಾದ ನಂತರ ಅವಳು ಕಷ್ಟಕರವಾದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
ನಾಗಾ ಸಾಧುವಾಗುವ ಮೊದಲು, ಮಹಿಳೆ ಜೀವಂತವಾಗಿರುವಾಗಲೇ ತನಗೆ ತಾನೇ ಪಿಂಡ ದಾನ ಮಾಡಬೇಕು ಮತ್ತು ತಲೆ ಬೋಳಿಸಿಕೊಳ್ಳಬೇಕು.