ಸಿರಾಜ್ ಬ್ಯಾಟಿಂಗ್ಗೆ ವಿರಾಟ್ ಕೊಹ್ಲಿ ಫುಲ್ ಖುಷ್ ಆಗಿದ್ದಾರೆ. ಎಂಸಿಜಿ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಶತಕ ಬಾರಿಸಿದ್ದಾರೆ.
ಮನಮೋಹನ್ ಸಿಂಗ್ ಅಂತ್ಯದ ವಿಚಾರದಲ್ಲೂ ನಿಮ್ಮ ರಾಜಕೀಯ ಬಿಡಿ: ರಾಹುಲ್ಗೆ ಬಿಜೆಪಿ ಟಾಂಗ್!
ನಿತೀಶ್ ಕುಮಾರ್ ರೆಡ್ಡಿ ಶತಕ ಪೂರೈಸಲು ಮೊಹಮ್ಮದ್ ಸಿರಾಜ್ ಅವರ ಬ್ಯಾಟಿಂಗ್ ಕೊಡುಗೆಯನ್ನು ಅಲ್ಲಗೆಳೆಯುವಂತಿಲ್ಲ. ಏಕೆಂದರೆ ನಿತೀಶ್ ಕುಮಾರ್ ರೆಡ್ಡಿ 99 ರನ್ಗಳಿಸಿದ್ದ ವೇಳೆ ಜಸ್ಪ್ರೀತ್ ಬುಮ್ರಾ ಶೂನ್ಯಕ್ಕೆ ಔಟಾಗಿದ್ದರು. 114ನೇ ಓವರ್ನ 3ನೇ ಎಸೆತದಲ್ಲಿ ಬುಮ್ರಾ ಔಟಾಗಿ ಹೋದಾಗ ನಿತೀಶ್ ಕುಮಾರ್ ನಾನ್ ಸ್ಟ್ರೈಕ್ನಲ್ಲಿದ್ದರು. ಹೀಗಾಗಿ ಕೊನೆಯ ವಿಕೆಟ್ ಒಳಗೆ ಶತಕ ಪೂರೈಸಲು ಸಾಧ್ಯನಾ ಎಂಬ ಅನುಮಾನಗಳು ಮೂಡಿತ್ತು.
ಈ ಹಂತದಲ್ಲಿ ಕಣಕ್ಕಿಳಿದ ಮೊಹಮ್ಮದ್ ಸಿರಾಜ್ ಅನುಭವಿ ವೇಗಿ ಪ್ಯಾಟ್ ಕಮಿನ್ಸ್ ಅವರನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದರು. ಅದರಲ್ಲೂ 14ನೇ ಓವರ್ನ ಕೊನೆಯ ಎಸೆತದಲ್ಲಿ ಅದ್ಭುತ ಡಿಫೆನ್ಸ್ ಆಡುವ ಮೂಲಕ ಗಮನ ಸೆಳೆದರು. ಈ ಮೂಲಕ ಔಟ್ ಆಗದೇ ನಿತೀಶ್ ಕುಮಾರ್ ರೆಡ್ಡಿ ಶತಕ ಪೂರೈಸಲು ಪರೋಕ್ಷ ಕಾರಣಕರ್ತರಾದರು.
ಇದರ ನಡುವೆ ವಿರಾಟ್ ಕೊಹ್ಲಿ ಮೊಹಮ್ಮದ್ ಸಿರಾಜ್ ಅವರ ಪ್ರಯತ್ನವನ್ನು ಶ್ಲಾಘಿಸಿರುವುದು ವಿಶೇಷ. ಇದೀಗ ಸಿರಾಜ್ ಅವರನ್ನು ಅಪ್ರೀಶಿಯೇಟ್ ಮಾಡುತ್ತಿರುವ ಕಿಂಗ್ ಕೊಹ್ಲಿಯ ಫೋಟೋಗಳು ವೈರಲ್ ಆಗಿದೆ.